ಅಥಣಿ ತಾಲ್ಲೂಕಿನ ಹಳ್ಯಾಳ ಗ್ರಾಮದಲ್ಲಿ ಶ್ರೀ. ಮ.ನಿ.ಪ್ರ. ಗುರುಸಿದ್ದಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಗುರುಸಿದ್ದೇಶ್ವರ ವಿರಕ್ತ ಮಠವು ತನ್ನ ಕರ್ತೃತ್ವಶಕ್ತಿಯ ಕಾರಣದಿಂದಾಗಿ ಹೆಸರು ಪಡೆದಿದೆ. ಕರ್ತೃಗುರುಗಳು ಅಥಣಿಯ ಶ್ರೀ ಮುರುಘೇಂದ್ರಶಿವಯೋಗಿಗಳ ಪರಮಶಿಷ್ಯರಾಗಿ ಅವರ ಕೊನೆಗಾಲದಲ್ಲಿ ಸೇವೆ ಮಾಡಿದ್ದುಕೊಂಡುಶಿವಯೋಗ ಸಿದ್ದಿಯನ್ನು ಪಡೆದ ಮಹಾಮಹಿಮರು.1885ರಲ್ಲಿ ಜನಿಸಿದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಸಮರ್ಥ ಗುರುಗಳಹುಡುಕಾಟದಲ್ಲಿ ಅಥಣಿಯ ಶ್ರೀ ಗಚ್ಚಿನ ಮಠಕ್ಕೆ ಬಂದು ಶ್ರೀ ಮುರುಘೇಂದ್ರ ಶಿವಯೋಗಿಗಳಸೇವೆಯಲ್ಲಿ ಸಾರ್ಥಕತೆಯನ್ನು ಕಂಡರು. ಶಿವಯೋಗಿಗಳ ಪರಮಸೇವಕರಾಗಿ,ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಶಿಷ್ಯರಾಗಿ ಸೇವೆ ಮಾಡಿದ ಶ್ರೀಗಳು ಉಭಯರುಲಿಂಗೈಕ್ಯರಾದ ನಂತರ ಮತ್ತೆ ಸಂಚಾರಕ್ಕೆ ಹೊರಟರು. ಶ್ರೀ ಗುರುಸಿದ್ದ ಮಹಾಸ್ವಾಮಿಗಳುಸಂಚಾರದಲ್ಲಿ ಹಳ್ಯಾಳಕ್ಕೆ ಆಗಮಿಸಿ ಇಲ್ಲಿನ ಭಕ್ತರ ಅಪೇಕ್ಷೆ ಮೇರೆಗೆ ಶ್ರೀಮಠವನ್ನು ಸ್ಥಾಪಿಸಿಭಕ್ತರನ್ನುದ್ದರಿಸಿದರು. ಶ್ರೀಗಳು ಗುರು-ಲಿಂಗ-ಜಂಗಮರ ಸೇವೆ ಮಾಡುತ್ತಾ ಭಕ್ತರಿಗೆಸದುಪದೇಶಗೈಯ್ಯುತ್ತ ಶ್ರೀಮಠವನ್ನು ಮುನ್ನಡೆಸಿದರು. ಇಂತಹ ಮಹಾನ್ ಶಿವಯೋಗಿಗಳುತಮ್ಮ 96ನೇ ವಯಸ್ಸಿನಲ್ಲಿ 1981ರಲ್ಲಿ ಲಿಂಗೈಕ್ಯರಾದರು.ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು ಕರ್ತೃ ಶ್ರೀಗುರುಸಿದ್ದ ಮಹಾಸ್ವಾಮಿಗಳ ಸೇವೆ ಮಾಡುತ್ತಾ ಅವರ ಕೃಪಾಶಿರ್ವಾದಕ್ಕೆ ಪಾತ್ರರಾಗಿದ್ದರು.ಗುರುಗಳು ಲಿಂಗೈಕ್ಯರಾದ ನಂತರ 1985ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀಗಳುಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದು ಜೊತೆಗೆ ಶಿವಯೋಗ ಮಂದಿರದ ಸಮೀಪದಮಲಪ್ರಭಾ ನದಿಯ ಪೂರ್ವ ದಡದಲ್ಲಿ “ಶಿವ-ಶಕ್ತಿ-ಪೀಠ”ವನ್ನು ಹಾಗೂ ವಿಶ್ವಕಲ್ಯಾಣಕ್ಕಾಗಿವಿಶ್ವಶಾಂತಿ ಮಂದಿರವನ್ನು ಸ್ಥಾಪಿಸಿದರು.ಪ್ರಸ್ತುತ ಶ್ರೀಗಳಾದ ಶ್ರೀ. ಮ.ನಿ.ಪ್ರ. ಗುರುಸಿದ್ದ ಸ್ವಾಮಿಗಳು ಹೊಸಪೇಟೆಯಕೊಟ್ಟೂರು ಮಠ, ಶಿವಯೋಗ ಮಂದಿರ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿನಂತರ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಜಾನಪದ ವಿಷಯದಲ್ಲಿ ಎಂ.ಎ.ಪದವಿ ಪಡೆದು ಶ್ರೀಮಠಕ್ಕೆ ಆಗಮಿಸಿದರು. 2004ರ ಫೆಬ್ರವರಿ 2ರಲ್ಲಿ ಶ್ರೀಮಠದ ಅಧಿಕಾರವಹಿಸಿಕೊಂಡು ಶ್ರೀಮಠವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಸಿದ್ಧ ಸ್ವಾಮಿಗಳು
Date of Birth :
01-06-1963
Place :
ವಿರುಪಾಪುರ, ಸಿಂಧನೂರು ತಾ||
Pattadikara :
02-02-2004
Photo :
Programs
ಶಿವರಾತ್ರಿ ಮತ್ತು ಬಸವ ಜಯಂತಿಗೆ ವಿಶೇಷ ಕಾರ್ಯಕ್ರಮಗಳು
ಆಷಾಡ ಮಾಸದ ಕೃಷ್ಣಪಕ್ಷದ ದಶಮಿ ತಿಥಿಗೆ ಶ್ರೀ ಕರ್ತೃಗುರುಗಳ ಪುಣ್ಯಾರಾಧನೆ, 15 ದಿನಗಳ ಕಾಲ ರುದ್ರಾಭಿಷೇಕ, ಪುರಾಣ ಪ್ರವಚನ, ಭಜನೆ ಹಾಗೂ ವಿವಿದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಶಿವರಾತ್ರಿಗೆ ವಿಶೇಷ ಪೂಜೆ, ಜಾಗರಣೆ.
Photos
Full Address Kannada
ಶ್ರೀ ಗುರುಸಿದ್ದೇಶ್ವರ ವಿರಕ್ತ ಮಠ
ಹಳ್ಯಾಳ - 591 304
ಅಥಣಿ ತಾ||, ಬೆಳಗಾವಿ ಜಿಲ್ಲೆ