Shree Gurupadeshwara Matha, Babaleshwara

Shree Gurupadeshwara Matha, Babaleshwara Claimed

ಶ್ರೀ ಗುರುಪಾದೇಶ್ವರ ಮಠ, ಬಬಲೇಶ್ವರ

Average Reviews

Description

ಶ್ರೀ ಗುರುಪಾದೇಶ್ವರ ಮಠ, ಬಬಲೇಶ್ವರ

ಕರ್ತೃ ಶ್ರೀ ಷ.ಬ್ರ. ಶಾಂತವೀರ ಶಿವಾಚಾರ್ಯ ಸ್ವಾಮಿಗಳು

ಬಬಲೇಶ್ವರಗ್ರಾಮದಲ್ಲಿ ಶ್ರೀ ಷ.ಬ್ರ. ಶಾಂತವೀರ ಶಿವಾಚಾರ್ಯ ಸ್ವಾಮಿಗಳಿಂದಸುಮಾರು 17ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗುರುಪಾದೇಶ್ವರ ಮಠವುಶ್ರೀರಂಭಾಪುರಿ ಪೀಠದ ಶಾಖಾ ಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ.ಷ.ಬ್ರ.ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಲೋಕಸಂಚಾರ ಕೈಗೊಂಡು ಬಬಲೇಶ್ವರ ಗ್ರಾಮಕ್ಕೆ ಆಗಮಿಸಿ ಗ್ರಾಮದ ಹೊರಭಾಗದಲ್ಲಿ ಧೀರ್ಘಾನುಷ್ಠಾನಗೊಂಡರು.ಶ್ರೀಗಳ ತಪೋಶಕ್ತಿಗೆ ಬೆರಗಾದ ಗ್ರಾಮದ ಭಕ್ತರು ಶ್ರೀಗಳಿಗೋಸ್ಕರ ಶ್ರೀಮಠವನ್ನು ನಿರ್ಮಿಸಿಕೊಟ್ಟು ವೀರಶೈವ ಧರ್ಮದ ಬೆಳವಣಿಗೆಗೆ ಕಾರಣರಾದರು. ತದನಂತರ ಶ್ರೀಗಳು ತಮ್ಮಉತ್ತರಾಧಿಕಾರಿಗಳನ್ನಾಗಿ ಶ್ರೀ ಗುರುಪಾದಯ್ಯ ದೇವರನ್ನು ನೇಮಿಸಿಕೊಂಡರು.ಹಿರಿಯ ಗುರುಗಳ ಸೇವೆಯನ್ನು ಮಾಡಿ ಪರಿಪಕ್ವಗೊಂಡ ಶ್ರೀ ಗುರುಪಾದಯ್ಯದೇವರು, ಹಿರಿಯ ಗುರುಗಳ ಕಾˉÁನಂತರ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ, ಶ್ರೀ ಷ.ಬ್ರ.ಗುರುಪಾದ ಶಿವಾಚಾರ್ಯರೆಂಬ ಅಭಿದಾನ ಪಡೆದರು. ಶ್ರೀಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿದ್ದು ಮೈಸೂರು ಅರಸರು ಹಾಗೂ ಶ್ರೀ ರಂಭಾಪುರಿಜಗದ್ಗುರುಗಳಿಂದ ಗೌರವಕ್ಕೆ ಪಾತ್ರರಾಗಿದ್ದರು.ಶ್ರೀ ಗುರುಪಾದ ಶಿವಾಚಾರ್ಯರ ನಂತರ ಅನೇಕ ಶ್ರೀಗಳು ಶ್ರೀಮಠವನ್ನುಮುನ್ನಡೆಸಿಕೊಂಡು ಬಂದಿದ್ದು ಹಿಂದಿನ ಶ್ರೀಗಳಾದ ಶ್ರೀ ಶಾಂತವೀರ ಶಿವಾಚಾರ್ಯಸ್ವಾಮಿಗಳು ಬಂದ ನಂತರ ಶ್ರೀಮಠದ ಕಾರ್ಯಕ್ರಮಗಳು ಚುರುಕುಗೊಂಡಿವೆ. ಶ್ರೀಗಳುಲಿಂಗೈಕ್ಯರಾದ ನಂತರ ಸುಮಾರು ಇಪ್ಪತ್ತು ವರ್ಷಗಳ ಕಾಲ ಶ್ರೀಮಠವು ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಡಾ. ಮಹಾದೇವ ಶಿವಾಚಾರ್ಯ ಸ್ವಾಮಿಗಳುಅಧಿಕಾರಕ್ಕೆ ಬಂದು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳುಕಾಶಿಯಲ್ಲಿ ಆಚಾರ್ಯ ಪದವಿ ಪಡೆದು ತದನಂತರ ಬನಾರಸ್ ವಿಶ್ವವಿದ್ಯಾನಿಲಯದಲ್ಲಿಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಇದಲ್ಲದೆ “ಶಕ್ತಿ ವಿಶಿಷ್ಟಾದ್ವೈತ ವೇದಾಂತಒಂದು ಸಮೀಕ್ಷಾತ್ಮಕ ಅಧ್ಯಯನ’ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ಪಡೆದರು. ಇಂತಹ ಶ್ರೀಗಳು ಶ್ರೀಮಠದಲ್ಲಿ ಶಿವಾನುಭವಗೋಷ್ಠಿ, ಆಧ್ಯಾತ್ಮ ಚಿಂತನೆ, ಪುರಾಣಪ್ರವಚನಗಳಂತಹ ಕಾರ್ಯಕ್ರಮಗಳ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಡಾ. ಮಹಾದೇವ ಶಿವಾಚಾರ್ಯ
Date of Birth :
11-7-1948
Place :
ಗಲಗಲಿ, ಬೀಳಗಿ ತಾ||
Photo :

Programs

ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಗುರುಪಾದೇಶ್ವರ ಮಠ
ಬಬಲೇಶ್ವರ- 586 113
ವಿಜಯಪುರ ತಾ||, ಜಿ||

Map

Near by Places

ವಿಜಯಪುರ - 22 ಕಿ.ಮೀ.
ಜಮಖಂಡಿ - 32 ಕಿ.ಮೀ.

Statistic

279 Views
0 Rating
0 Favorite
1 Share
error: Content is protected !!