ರಬಕವಿ ಪಟ್ಟಣವು ನೇಕಾರಿಕೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು ಇಲ್ಲಿ1966ರಲ್ಲಿ ಶ್ರೀ ಸದ್ಗುರು ಬ್ರಹ್ಮಾನಂದ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮವು ತನ್ನ ಪ್ರವಚನಗಳಿಂದ, ಧಾರ್ಮಿಕ ಆಚರಣೆಗಳಿಂದಾಗಿಬಹುಬೇಗನೆ ಈ ಭಾಗದಲ್ಲಿ ಪ್ರಸಿದ್ದಿಗೆ ಬಂದಿದೆ.
ಶ್ರೀ ಸದ್ಗುರು ಬ್ರಹ್ಮಾನಂದ ಶಿವಯೋಗಿಗಳುಮೂಲದಲ್ಲಿ ಶಿಕ್ಷಕರಾಗಿದ್ದವರು. ನಿರಂತರವಾಗಿ ಗದುಗಿನ ಶಿವಾನಂದ ಮಠದ ಸಂಪರ್ಕದಲ್ಲಿದ್ದು, ಶ್ರೀ ಶಿವಾನಂದ ಸ್ವಾಮಿಗಳ ಪ್ರವಚನ ಕೇಳುತ್ತಾ ಅದನ್ನು ಮನನ ಮಾಡುತ್ತಾಆಧ್ಯಾತ್ಮಿಕವಾಗಿ ತಾವೂ ಬೆಳೆದವರು. ಹೀಗಿದ್ದಾಗ ಶ್ರೀಗಳು ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿಶಿವಾನಂದ ಮಠದ ಸೇವಕರಾಗಿ ಪೂಜ್ಯ ಶ್ರೀ ಶಿವಾನಂದ ಶ್ರೀಗಳವರಿಂದ ಸನ್ಯಾಸ ಆಶ್ರಮಹಾಗೂ ಗುರು ಉಪದೇಶ ಪಡೆದು ಲೋಕ ಸಂಚಾರ ಹೊರಟವರು.
ಶ್ರೀಗಳು ಸತತ 30 ವರ್ಷ ಕೌಪೀನ ಧರಿಸಿ ದೇಶ ಸಂಚಾರ ಮಾಡಿದ್ದಾರೆಂದರೆಅದೇನು ಸಾಮಾನ್ಯ ಸಂಗತಿಯಲ್ಲ. ರಾಯಪುರ, ಕುಂದಗೋಳ ತಾಲ್ಲೂಕಿನ ಶಿರೂರ, ಸಂಶಿಗ್ರಾಮ (1952ರಲ್ಲಿ), ಪರಮಾನಂದವಾಡಿ, ತೇರದಾಳ, ರಬಕವಿ ಮುಂತಾದೆಡೆಗಳಲ್ಲಿ ನೆಲೆಸಿಪ್ರವಚನ ಮಾಡಿದ್ದಾರೆ. ಅಲ್ಲೆಲಾ ಭಕ್ತರಿಗೆ ತಮ್ಮ ಪ್ರವಚನಗಳ ಮೂಲಕ ದಾರಿದೀಪವಾದಶ್ರೀಗಳು 1926ರ ಮೇ 2ರಲ್ಲಿ ಲಿಂಗೈಕ್ಯರಾದರು ಈಗ ಅವರು ನೆಲೆಸಿ ಪ್ರವಚನ ಕೈಗೊಂಡಸ್ಥಳಗಳಲ್ಲೆಲ್ಲ ಶ್ರೀ ಬ್ರಹ್ಮಾನಂದ ಆಶ್ರಮಗಳು ಸ್ಥಾಪಿತಗೊಂಡಿವೆ.ಕರ್ತೃಗುರುಗಳ ನಂತರ ಗುರುವನ್ನು ಮೀರಿಸುವ ಶಿಷ್ಯರಾಗಿ ಬೆಳೆದ ಶ್ರೀಸಿದ್ದೇಶ್ವರರು ಶ್ರೀಮಠದ ಆಡಳಿತ ನೋಡಿಕೊಂಡು ಪ್ರವಚನಗಳನ್ನು ನಡೆಸುತ್ತಾ ಗುರುಗಳುಸ್ಥಾಪಿಸಿದ್ದ ಆಶ್ರಮಗಳಿಗೆ ನೂತನ ಕಟ್ಟಡದೊಂದಿಗೆ ಅಭಿವೃದ್ಧಿಗೊಳಿಸುತ್ತಾ ಮುನ್ನಡೆದರು.
ಶ್ರೀಗಳು ಪ್ರಖರ ಆಧ್ಯಾತ್ಮ ಚಿಂತಕರಾಗಿದ್ದು ತಮ್ಮ ಚಿಂತನ ಕಾರ್ಯಕ್ರಮಗಳಿಂದ ಈಭಾಗದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿದ್ದು 2006ರ ಜುಲೈ 6 ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು 2012ರ ಡಿಸೆಂಬರ್29ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಶ್ರೀಗಳು ಎಂ.ಎ (ಕನ್ನಡ), ಎಂ.ಎ.(ತತ್ವಶಾಸ್ತ್ರ), ಪಿ.ಜಿ.ಡಿ.ವಾಯ್.ಎಸ್(ಯೋಗ) ಮುಂತಾದ ಪದವಿಗಳನ್ನು ಪಡೆದು ತಮ್ಮಪಾಂಡಿತ್ಯ ಪೂರ್ಣ ಪ್ರವಚನ ಕಲೆಯಿಂದ ಬಹುಬೇಗನೇ ಪ್ರಸಿದ್ದಿಗೆ ಬಂದಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು
Date of Birth :
31-7-1984
Place :
ಜಂತ್ಲಿ ಶಿರೂರ, ಮುಂಡರಗಿ ತಾ||
Pattadikara :
29-12-2012
Photo :
Programs
ಪ್ರತಿ ಅಮವಾಸ್ಯೆಗೆ ಅನುಭವದ ಅಂಗಳ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ.
ಗಣೇಶ ಹಬ್ಬ ಆದ ಮರುದಿನ ಪ್ರವಚನ ಮಂಗಳ ಹಾಗೂ
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಡಿಸೆಂಬರ್ 29ರಿಂದ ಜನವರಿ 14ರವರೆಗೆ ವಿಶೇಷ ಪ್ರವಚನ
ಹಾಗೂ ವಿವಿಧ ಕಾರ್ಯಕ್ರಮಗಳು.