Shree Guru Siddeshwara Sukshetra Karimatha – Hattargi

Shree Guru Siddeshwara Sukshetra Karimatha – Hattargi Claimed

ಶ್ರೀ ಗುರು ಸಿದ್ದೇಶ್ವರ ಸುಕ್ಷೇತ್ರ ಕಾರಿಮಠ - ಹತ್ತರಗಿ

Average Reviews

Description

ಶ್ರೀ ಗುರು ಸಿದ್ದೇಶ್ವರ ಸುಕ್ಷೇತ್ರ ಕಾರಿಮಠ – ಹತ್ತರಗಿ

ಕರ್ತೃ – ಶ್ರೀ ಗುರು ಸಿದ್ದೇಶ್ವರ ಸುಕ್ಷೇತ್ರ ಕಾರಿಮಠ

ಹುಕ್ಕೇರಿ ತಾಲ್ಲೂಕಿನ ಹತ ್ತರಗಿ ಗ್ರಾಮದ ಹೊರವಲಯದಲ್ಲಿಸ್ಥಾಪಿತಗೊಂಡಿರುವ ಶ್ರೀ ಸಿದ್ದೇಶ್ವರ ಸುಕ್ಷೇತ್ರ ಕಾರಿಮಠವು ತನ್ನ ಧಾರ್ಮಿಕ ಆಚರಣೆಗಳಿಂದಹಾಗೂ ಕರ್ತೃ ಗದ್ದುಗೆಯ ಪ್ರಭಾವದಿಂದ ಬಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿದೆ. ಪರಮ ಪೂಜ್ಯ ಶ್ರೀ ಅಡವಿ ಸಿದ್ದೇಶ್ವರರುನಾಡಿನ ಧಾರ್ಮಿಕ ಇತಿಹಾಸದಲ್ಲಿ ಬರುವ ಪ್ರಮುಖರಲ್ಲಿ ಒಬ್ಬರು. ತಮ್ಮ ಪವಾಡಗಳಿಂದಹಾಗೂ ವೀರಶೈವ ಧರ್ಮವನ್ನು ವಿಸ್ತರಿಸಿದ ರೀತಿಯಿಂದ ಇಂದಿಗೂ ಲಕ್ಷಾಂತರ ಭಕ್ತರಮನೆಮನಗಳನ್ನು ಆವರಿಸಿಕೊಂಡಿದ್ದಾರೆ. ಇಂತಹ ಪರಮ ಪೂಜ್ಯರು ಅನುಷ್ಟಾನಕೈಗೊಂಡು ಜಾಗೃತಗೊಳಿಸಿದ ಸ್ಥಳಗಳಲ್ಲಿ ಹತ್ತರಗಿ ಸುಕ್ಷೇತ್ರವೂ ಕೂಡ ಒಂದು.ಹೀಗೆ ಶ್ರೀ ಅಡವಿ ಸಿದ್ದೇಶ್ವರಿಂದ ಜಾಗೃತಗೊಂಡ ಸ್ಥಳದಲ್ಲಿ ಶ್ರೀಮಠವುಸ್ಥಾಪನೆಗೊಂಡು ಭಕ್ತರ ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರವಾಗಿ ರೂಪುಗೊಂಡಿದೆ.ಶ್ರೀಮಠದ ಪರಂಪರೆಯ ಬಗ್ಗೆ ನಿಖರ ಮಾಹಿತಿಗಳು ದೊರೆಯದೇ ಇದ್ದರೂ ಈಗ್ಗೆ ಮೂರುತಲೆಮಾರುಗಳ ವಿವರ ಲಭ್ಯವಿದೆ. ಪರಂಪರೆಯಲ್ಲಿ ಕಾಣಸಿಗುವ ಶ್ರೀ ಮ.ನಿ.ಪ್ರ. ಸಿದ್ದೇಶ್ವರಮಹಾಸ್ವಾಮಿಗಳಿಂದಾಗಿ ಮಠವು ಪ್ರಚಲಿತಕ್ಕೆ ಬಂದಿದೆಯೆಂದು ಹೇಳಲಾಗಿದೆ. ಇವರನಂತರ ಶ್ರೀ ಮ.ನಿ.ಪ್ರ. ಗುರುಪಾದ ಮಹಾಸ್ವಾಮಿಗಳು ಆಡಳಿತ ನಡೆಸಿದ್ದಾರೆ.ತದನಂತರ 1939ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಮ.ನಿ.ಪ್ರ. ಶಾಂತಸಿದ್ದೇಶ್ವರಮಹಾಸ್ವಾಮಿಗಳಿಂದಾಗಿ ಶ್ರೀಮಠವು ಹೆಚ್ಚು ಪ್ರಸಿದ್ದಿಗೆ ಬಂದಿದೆ. ಶ್ರೀಗಳು ಸ್ವತಃಕಾಯಕಯೋಗಿಗಳಾಗಿ ಮಠದ ಜಮೀನಿನಲ್ಲಿ ಬೆಳೆ ಬೆಳೆಯುತ್ತಾ ಇತರರಿಗೆಮಾದರಿಯಾಗಿದ್ದರು ಹಾಗೂ ಈ ಗಡಿಭಾಗದ ಮಕ್ಕಳಿಗೋಸ್ಕರ ಕನ್ನಡ ಶಾಲೆಯನ್ನುಪ್ರಾರಂಭಿಸಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ್ದು 1994ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಸಿದ್ದೇಶ್ವರ ಮಹಾಸ್ವಾಮಿಗಳು 1995ರಮಾರ್ಚ್ 01ರಲ್ಲಿ ಶ್ರೀ ಮಠದ ಅಧಿಕಾರ ವಹಿಸಿಕೊಂಡು ಕ್ರಿಯಾಶೀಲರಾಗಿ ಮಠವನ್ನುಮುನ್ನಡೆಸುತ್ತಿದ್ದಾರೆ. ಶ್ರೀಗಳು ಅಧಿಕಾರಕ್ಕೆ ಬಂದ ನಂತರ 1996ರಲ್ಲಿ ಶ್ರೀ ಸಿದ್ದೇಶ್ವರ ನೂತನದೇವಾಲಯ ನಿರ್ಮಾಣ, 1999ರಲ್ಲಿ ದಾಸೋಹ ಭವನ, 2001ರಲ್ಲಿ ನೂತನ ಮಹಾದ್ವಾರ,2007ರಲ್ಲಿ ನೂತನ ಶಿಖರದ ಕಟ್ಟಡ, 2012ರಲ್ಲಿ ಸಾರ್ವಜನಿಕ ಸಭಾಭವನ ನಿರ್ಮಾಣಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗುರುಸಿದ್ದೇಶ್ವರ ಮಹಾಸ್ವಾಮಿಗಳು
Date of Birth :
07-02-1965
Place :
ಉ.ಖಾನಾಪುರ, ಹುಕ್ಕೇರಿ ತಾ||
Pattadikara :
01-03-1995
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಮಹಾ ಶಿವರಾತ್ರಿಗೆ ಶ್ರೀಮಠದ ಜಾತ್ರೆ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು
ಶ್ರಾವಣದ ಕೊನೆಯ ಸೋಮವಾರ ಶ್ರೀಗಳ ಅಧ್ಯಕ್ಷತೆಯಲ್ಲಿ ಚಂದನಕೊಡು ಶ್ರೀ ಗುರುಸಿದ್ದೇಶ್ವರ ದೇವಸ್ಥಾನ ಗುಡ್ಡದಲ್ಲಿ ಉತ್ಸವ ನಡೆಯುತ್ತದೆ

Photos

Full Address Kannada

ಶ್ರೀ ಗುರು ಸಿದ್ದೇಶ್ವರ ಸುಕ್ಷೇತ್ರ
ಕಾರಿಮಠ ಹತ್ತರಗಿ - 591 243
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಚಿಕ್ಕಲಗುಡ್ಡ - 8 ಕಿ.ಮೀ
ಬೆಳಗಾವಿ - 8 ಕಿ.ಮೀ
ಹುಕ್ಕೇರಿ - 15 ಕಿ.ಮೀ
ಸಂಕೇಶ್ವರ - 18 ಕಿ.ಮೀ

Statistic

4 Views
0 Rating
0 Favorite
0 Share
error: Content is protected !!