Shree Guru Siddalingeshwara Samsthana Hirematha – Rayanna Sangolli
Claimed
ಶ್ರೀ ಗುರುಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ - ರಾಯಣ್ಣ ಸಂಗೊಳ್ಳಿ
Average Reviews
Description
ಶ್ರೀ ಗುರುಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ – ರಾಯಣ್ಣ ಸಂಗೊಳ್ಳಿ
ಕರ್ತೃ – ಶ್ರೀ ಗುರು ಸಿದ್ದಲಿಂಗೇಶ್ವರ ಶಿವಯೋಗಿಗಳು
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ರಾಯಣ್ಣ ಸಂಗೊಳ್ಳಿ ಗ್ರಾಮವುತಾಲ್ಲೂಕು ಕೇಂದ್ರದಿಂದ 16 ಕಿ.ಮೀ. ದೂರದಲ್ಲಿದ್ದು ಈ ಗ್ರಾಮವು ಕರ್ನಾಟಕದ (ಭಾರತದ)ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ವೀರರಾಣಿ ಕಿತ್ತೂರುಚನ್ನಮ್ಮಳ ಬಲಗೈ ಬಂಟ ಕ್ರಾಂತಿವೀರ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿ. ಇಂತಹ ಗ್ರಾಮದಲ್ಲಿಅಸ್ತಿತ್ವದಲ್ಲಿರುವ ಶ್ರೀ ರಂಭಾಪುರಿ ಶಾಖಾಮಠವಾದ ಶ್ರೀ ಗುರುಸಿದ್ದಲಿಂಗೇಶ್ವರ ಸಂಸ್ಥಾನಹಿರೇಮಠವು ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀ ಮಠವು ಪುರಾತನ ಕಾಲದ್ದಾಗಿದ್ದು ನೂರಾರು ವರ್ಷಗಳ ಭವ್ಯ ಪರಂಪರೆಯಇತಿಹಾಸ ಹೊಂದಿ ಧಾರ್ಮಿಕ ಸಂಸ್ಕಾರ ಕೊಡುವಲ್ಲಿ ನಿರತವಾಗಿದೆ. ಶ್ರೀಮಠವು ಶ್ರೀಗುರುಸಿದ್ದಲಿಂಗೇಶ್ವರ ಶಿವಯೋಗಿಗಳಿಂದ ಪ್ರಾರಂಭಗೊಂಡಿದ್ದು ಅವರೇ ಶ್ರೀಮಠದಕರ್ತೃಗಳಾಗಿದ್ದಾರೆ. ಶ್ರೀಗಳು ಮಹಾಮಹಿಮ ಪುರುಷಾಗಿದ್ದು ಭಕ್ತರ ಕಲ್ಪವೃಕ್ಷ, ಚಿಂತಾಮಣಿ,ಕಾಮಧೇನುವಾಗಿ ಬೇಡಿದವರಿಗೆ ಬೇಡಿದ್ದನ್ನು ನೀಡುವ ಮಹಾಶಕ್ತಿಯಾಗಿದ್ದರು ಎಂದುಹೇಳಲಾಗುತ್ತಿದ್ದು ಇವರ ಕರ್ತೃಗದ್ದುಗೆ ಶ್ರೀಮಠದಲ್ಲಿದ್ದು ಜಾಗೃತವಾಗಿದೆ.ಶ್ರೀಮಠದ ಪರಂಪರೆಯಲ್ಲಿ ಕರ್ತೃಗುರುಗಳ ನಂತರ ಬಂದಿರುವ ಗುರುಗಳ ಬಗ್ಗೆಸೂಕ್ತವಾದ ಆಧಾರಗಳ ಕೊರತೆಯಿಂದ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಹಿಂದಿನಗುರುಗಳಾದ ಶ್ರೀ ಷ.ಬ್ರ.ಲಿಂ|| ಸಿದ್ದಲಿಂಗ ಶಿವಾಚಾರ್ಯರು ಶ್ರೀಮಠದಲ್ಲಿ ಭಕ್ತರಉದ್ದಾರಕ್ಕಾಗಿ ಪೂಜೆ, ಪ್ರವಚನ, ಆಶೀರ್ವಾದ ನೀಡುತ್ತಾ ಬಂದಿದ್ದರು. ಶ್ರೀಗಳ ಕಾಲದಲ್ಲಿಶ್ರೀಮಠದ ಧಾರ್ಮಿಕ ಆಚರಣೆಗಳು ಚುರುಕುಗೊಂಡಿದ್ದು ಶ್ರೀಗಳು 2003ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಗುರುಗಳಾದ ಶ್ರೀ. ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳುಹಿಂದಿನ ಗುರುಗಳಿರುವಾಗಲೇ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಎಡೆಯೂರಿನಲ್ಲಿವೈದಿಕ ಶಿಕ್ಷಣವನ್ನು ಮುಗಿಸಿ ಶ್ರೀ ರಂಭಾಪುರಿ ಗುರುಕುಲದಲ್ಲಿ ಆಗಮ, ಸಂಸ್ಕøತ,ಜ್ಯೋತಿಷ್ಯವನ್ನು ಅಧ್ಯಯನ ಮಾಡಿ ಹಲಗೂರ ಬೃಹನ್ಮಠ ಹಾಗೂ ಬೆಂಗಳೂರಿನಮಹಾಂತರ ಮಠದಲ್ಲಿ ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ. ತದನಂತರಶ್ರೀಮಠಕ್ಕೆ ಮರಳಿದ ಶ್ರೀಗಳು 2010ರ ಮೇ 21ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದುಶ್ರೀಮಠವನ್ನು ಅಭಿವೃದ್ದಿಗೊಳಿಸುವತ್ತ ಚಿತ್ತಹರಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
22-07-1981
Place :
ಸಂಗೊಳ್ಳಿ, ಬೈಲಹೊಂಗಲ ತಾ||
Pattadikara :
21-05-2010
Photo :
Programs
ಮಾರ್ಗಶಿರ ಬಹುಳ ಸಪ್ತಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಏಪ್ರಿಲ್ / ಮೇ ತಿಂಗಳಲ್ಲಿ ಶ್ರೀಗಳ ವಾರ್ಷಿಕೋತ್ಸವ
Photos
Full Address Kannada
ಶ್ರೀ ಗುರುಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ
ರಾಯಣ್ಣ ಸಂಗೊಳ್ಳಿ - 591 115
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ