Shree Guru Oppateshwara Matha, Garaga-Nagalapura

Shree Guru Oppateshwara Matha, Garaga-Nagalapura Claimed

ಶ್ರೀ ಗುರು ಒಪ್ಪತ್ತೇಶ್ವರ ಮಠ, ಗರಗ-ನಾಗಲಾಪುರ

Average Reviews

Description

ಶ್ರೀ ಗುರು ಒಪ್ಪತ್ತೇಶ್ವರ ಮಠ, ಗರಗ-ನಾಗಲಾಪುರ

ಕರ್ತೃ ಶ್ರೀ ಮ.ನಿ.ಪ್ರ. ಗುರು ಒಪ್ಪತ್ತೇಶ್ವರ ಮಹಾ ಶಿವಯೋಗಿಗಳು

ಹೊಸಪೇಟೆ ತಾಲ್ಲೂಕಿನ ಗರಗ-ನಾಗಲಾಪುರ ಅವಳಿ ಗ್ರಾಮದಲ್ಲಿ ಸುಮಾರು1450ರಲ್ಲಿ ಶ್ರೀ ಒಪ್ಪತ್ತೇಶ್ವರಸ್ವಾಮಿಗಳಿಗೋಸ್ಕರ ವಿಜಯನಗರದ ಅರಸ ಪ್ರೌಡ ದೇವರಾಯನಮಗ ಸದಾಶಿವರಾಯನು ನಾಗಲಾಪುರದಲ್ಲಿ ಸ್ಥಾಪಿಸಿದ ಎಂದು ಹೇಳಲಾದ ಶ್ರೀ ಗುರುಒಪ್ಪತ್ತೇಶ್ವರ ಮಠವು ತನ್ನ ಧಾರ್ಮಿಕ ಇತಿಹಾಸದಿಂದ ಹೆಸರಾಗಿದೆ.ಕರ್ತೃಗುರುಗಳಾದ ಶ್ರೀ ಒಪ್ಪತ್ತೇಶ್ವರ ಸ್ವಾಮಿಗಳು ನೂರೊಂದು ವಿರಕ್ತರಲ್ಲಿಒಬ್ಬರೆಂದು ಹೇಳಲಾಗಿದ್ದು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬಂದಿದ್ದು ತಮ್ಮ ಅನುಷ್ಠಾನ ಬಲದಿಂದ ಶ್ರೀಮಠವನ್ನುಅಭಿವೃದ್ಧಿಗೊಳಿಸಿದ್ದಾರೆ. ಶ್ರೀಗಳು ತಮ್ಮ ಸಮಕಾಲೀನ ಸ್ವಾಮಿಗಳ ಜೊತೆಯಲ್ಲಿ ಸುಮಧುರಬಾಂಧವ್ಯವನ್ನು ಇಟ್ಟುಕೊಂಡು ವೀರಶೈವ ಧರ್ಮವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದರುಎಂದು ತಿಳಿದುಬರುತ್ತದೆ.ನಂತರದ ಪರಂಪರೆಯಲ್ಲಿ ಬಂದ ಎಲ್ಲಾ ಗುರುಗಳು ಶ್ರೀಮಠವನ್ನುಮುನ್ನಡೆಸಿಕೊಂಡು ಬಂದಿದ್ದು ಹರಪನಹಳ್ಳಿಯ ಸೋಮಶೇಖರ ನಾಯಕ, ನಾರಾಯಣದೇವರಕೆರೆಯ ಸೋಮಶೇಖರ ದೊರೆಗಳು ಶ್ರೀಮಠಕ್ಕೆ ನಡೆದುಕೊಳ್ಳುತ್ತಿದ್ದರೆಂದು ತಿಳಿದುಬರುತ್ತಿದೆ. ಸುಮಾರು 30 ವರ್ಷಗಳ ಹಿಂದೆ ಶ್ರೀಮಠದ ಆಡಳಿತ ವ್ಯವಸ್ಥೆಯು ಅಸ್ತವ್ಯಸ್ತಗೊಂಡಾಗ ಇಲ್ಲಿನ ಭಕ್ತಾದಿಗಳು ಶ್ರೀಮಠವನ್ನು ಹೊಸಪೇಟೆ ಶ್ರೀ ಸಂಗನಬಸವ ಸ್ವಾಮಿಗಳಸನ್ನಿಧಿಗೆ ಬರೆದುಕೊಟ್ಟಿದ್ದು, ಹೊಸಪೇಟೆ ಶ್ರೀಗಳು 1988ರಲ್ಲಿ ಶ್ರೀ ಮರಿಮಹಾಂತಸ್ವಾಮಿಗಳನ್ನು ಶ್ರೀಮಠಕ್ಕೆ ನೇಮಿಸಿ ಶ್ರೀಮಠದ ಧಾರ್ಮಿಕ ಕಾರ್ಯಗಳು ನಡೆದುಕೊಂಡುಬರುವಂತೆ ಮಾಡಿದ್ದಾರೆ.ಶ್ರೀ ಮರಿಮಹಾಂತ ಸ್ವಾಮಿಗಳು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡುಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.1993ರಲ್ಲಿ ಹಾನಗಲ್ ಕುಮಾರೇಶ್ವರ ಸಂಗೀತ ಪಾಠಶಾಲೆ ಮತ್ತು ಶ್ರೀ ಬಿದರಿ ಕುಮಾರೇಶ್ವರಶಿವಾನುಭವ ಮಂಟಪಗಳನ್ನು ಸ್ಥಾಪಿಸುವುದರ ಜೊತೆಗೆ ಶ್ರೀಮಠದ ಹಾಗೂ ಶಾಖಾಮಠಗಳ ಜೀರ್ಣೋದ್ದಾರ ಕಾರ್ಯವನ್ನು ಕೈಗೆತ್ತಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮರಿ ಮಹಾಂತ ಮಹಾಸ್ವಾಮಿಗಳು
Date of Birth :
26-01-1943
Place :
ಸೋಮಸಮುದ್ರ, ಬಳ್ಳಾರಿ ತಾ||
Pattadikara :
26-2-1988
Photo :

Programs

ಫಾಲ್ಗುಣ ಶುದ್ಧ ದಶಮಿಗೆ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳ ರಥೋತ್ಸವ.
ಕಾರ್ತೀಕ ಮಾಸದಲ್ಲಿ ವಿಶೇಷ ದೀಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು. ಮಾಘ ಶುದ್ಧ ಬಿದಿಗೆಗೆ ಶ್ರೀ ತೋಂಟದ ಒಪ್ಪತ್ತೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ,
3ನೇ ಸೋಮವಾರ ಶ್ರೀಗುರು ಸಿದ್ದರಾಮೇಶ್ವರ ಪರುವು.
ನವರಾತ್ರಿಗೆ ನಿತ್ಯ ಶ್ರೀದೇವಿ ಪುರಾಣ ಪಾರಾಯಣ. ಸಂಗೀತ ಪಾಠಶಾಲೆ.

Institutions

ಸಂಗೀತ ಪಾಠಶಾಲೆ.

Photos

Full Address Kannada

ಗರಗ-ನಾಗಲಾಪುರ - 583 222.
ಹೊಸಪೇಟೆ ತಾ||, ಬಳ್ಳಾರಿ ಜಿ||

Map

Near by Places

ಗೊಲ್ಲರಹಳ್ಳಿ ಕ್ರಾಸ್ - 5 ಕಿ.ಮೀ.
ಕೂಡ್ಲಿಗಿ - 30 ಕಿ.ಮೀ.
ಸಂಡೂರು - 18 ಕಿ.ಮೀ.

Statistic

9 Views
0 Rating
0 Favorite
0 Share
error: Content is protected !!