ಕರ್ತೃ – ಶ್ರೀ ಷ.ಬ್ರ. ಗುರು ಗದ್ದುಗೇಶ್ವರ ಶಿವಾಚಾರ್ಯ ಸ್ವಾಮಿಗಳು
ಕನ್ನೂರು ಗ್ರಾಮದಲ್ಲಿ ಶ್ರೀ ಷ.ಬ್ರ. ಗುರು ಗದ್ದುಗೇಶ್ವರ ಶಿವಾಚಾರ್ಯಸ್ವಾಮಿಗಳಿಂದ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗುರುಮಠವು ತನ್ನ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಶ್ರೀ ಗುರುಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀಮಠದ ಕರ್ತೃಗುರುಗಳ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲವಾದರೂ ಅವರಬಗ್ಗೆ ಕೆಲ ಮಾಹಿತಿಗಳ ಲಭ್ಯತೆಯಿದೆ. ˉÉೂೀಕಸಂಚಾರದಲ್ಲಿದ್ದ ಶ್ರೀಗಳು ಕನ್ನೂರಿಗೆ ಆಗಮಿಸಿನೆˉÉನಿಂತು ಗ್ರಾಮದಲ್ಲಿ ತಮ್ಮ ಧಾರ್ಮಿಕ ಆಚರಣೆಗಳಿಂದ ಹಾಗೂ ತಪೋನಿಷ್ಠತೆಯಿಂದಭಕ್ತರನ್ನು ಸೆಳೆದು ಅವರ ಸಹಾಯದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ತಾವು ಸಂಪಾದಿಸಿಕೊಂಡಿದ್ದ ಜ್ಞಾನ ಸಿದ್ದಿಯಿಂದ ಭಕ್ತರನ್ನು ಬೆಳಗಿಸಿದರು.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಇಲ್ಲಿಗೆ ಮೂರುತˉÉಮಾರುಗಳ ಹಿಂದೆ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀ ಷ.ಬ್ರ. ಚಡಚಣಶಿವಾಚಾರ್ಯ ಸ್ವಾಮಿಗಳಿಂದ ಮುಂದಿನ ಇತಿಹಾಸ ಲಭ್ಯವಿದೆ. ಶ್ರೀ ಚಡಚಣ ಶಿವಾಚಾರ್ಯನಂತರ ಬಂದ ಶ್ರೀ ಷ.ಬ್ರ. ಗುಹೇಶ್ವರ ಶಿವಾಚಾರ್ಯ ಸ್ವಾಮಿಗಳಿಂದಾಗಿ ಶ್ರೀಮಠವು ಹೆಚ್ಚಿನಪ್ರಸಿದ್ದಿಗೆ ಬಂದಿದ್ದು, ಶ್ರೀಗಳು ತಮ್ಮ ಪುರಾಣ ಪ್ರವಚನ ಕˉÉಯಿಂದ ವೀರಶೈವ ಧರ್ಮವನ್ನುಉಳಿಸಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ.ತದನಂತರ ಶ್ರೀಮಠದ ಪಟ್ಟಕ್ಕೆ ಬಂದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಮಲ್ಲಿಕಾರ್ಜುನ ಶಿವಾಚಾರ್ಯರು ಇಲ್ಲಿನ ಅವ್ಯವಸ್ಥೆ ಕಂಡು ಶ್ರೀಮಠವನ್ನು ಅಭಿವೃದ್ಧಿಪಡಿಸಲು ಪಣತೊಟ್ಟು ಭಕ್ತರನ್ನು ಸಂಘಟಿಸಿದರು. ಶ್ರೀಗಳು ಚಿಕ್ಕವಯಸ್ಸಿನಲ್ಲಿಯೇ ಅಪಾರಜ್ಞಾನವುಳ್ಳವರಾಗಿದ್ದು ಈ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಿದ್ದು, ಜೊತೆಗೆವೀರಶೈವ ಧರ್ಮಾಚರಣೆಗಳ ಬಗ್ಗೆ ಭಕ್ತರಿಗೆ ಅರಿವು ನೀಡಿ 1996ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು 2009ರ ಮೇ 13ರಲ್ಲಿಶ್ರೀಮಠದ ಪಟ್ಟಕ್ಕೆ ಬಂದಂದಿನಿಂದ ಕ್ರಿಯಾಶೀಲರಾಗಿ ಹಿಂದಿನ ಗುರುಗಳ ಹಾದಿಯಲ್ಲಿಯೇಶ್ರೀಮಠವನ್ನು ಹಾಗೂ ಸಮಾಜವನ್ನು ಧಾರ್ಮಿಕ ನೆˉÉಗಟ್ಟಿನಲ್ಲಿ ಬೆಳೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-7-1979
Place :
ಇˉÁಳ, ಹುನಗುಂದ ತಾ||
Pattadikara :
13-5-2009
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ. ಕಾರ್ತೀಕ ಮಾಸ ಮಾರ್ಗಶಿರ ಶುದ್ಧ ಷಷ್ಠಿಗೆ ಲಿಂ. ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ. ನೂಲು ಹುಣ್ಣಿಮೆಯಂದು ಲಿಂ. ಶ್ರೀ ಷ.ಬ್ರ. ಗುರು ಗುಹೇಶ್ವರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ.