Shree Guru Balaleela Sangameshwara Sambayyanavara Matha
Claimed
ಶ್ರೀ ಗುರು ಬಾಲಲೀಲಾ ಸಂಗಮೇಶ್ವರ ಸಾಂಬಯ್ಯನವರ ಮಠ
Average Reviews
Description
ಶ್ರೀ ಗುರು ಬಾಲಲೀಲಾ ಸಂಗಮೇಶ್ವರ ಸಾಂಬಯ್ಯನವರ ಮಠ – ಹೂಲಿ
ಕರ್ತೃ – ಶ್ರೀ ಗುರು ಬಾಲಲೀಲಾ ಸಂಗಮೇಶ್ವರ ಅಜ್ಜನವರು
ಕೇದಾರ ಸಮೀಪದ ಮಾಸೂಲಿ ಎಂಬಲ್ಲಿಂದ ಸಂಚಾರ ಹೊರಟಶರಣಶರಣೆಯರಾದ ಅಕ್ಕ-ತಮ್ಮರು. ಭೀಷ್ಮ ಬ್ರಹ್ಮಚಾರಿಗಳಾಗಿ ಅಲ್ಲಲ್ಲಿ ವಾಸ್ತವ್ಯ ಹೂಡುತ್ತಾದಾಸೋಹ ಭಾವದಿಂದ ಸಂಚಾರ ಮಾಡುತ್ತಾ ಹೂಲಿ ಕ್ಷೇತ್ರಕ್ಕೆ ಆಗಮಿಸಿ ಸಮೀಪದ ಗುಡ್ಡದಪಕ್ಕದ ಈಶ್ವರ ಗುಡಿಯಲ್ಲಿ ನೆಲೆಸಿ ಈ ಕ್ಷೇತ್ರವನ್ನು ಸುಕ್ಷೇತ್ರವನ್ನಾಗಿ ಮಾಡಿದರು. ಇವರಶಿವಲೀಲೆಗೆ ಭಕ್ತಸ್ತೋಮವೇ ಆಕರ್ಷಿತರಾಗಿ ಇವರ ಸೇವೆಯಲ್ಲಿ ತನ್ಮಯರಾದರು. ಅವರಬದುಕಿಗೆ ಪ್ರಭಾವಿತರಾದ ಭಕ್ತರು ಅವರಿಗೆ ಸಾಂಬಶಿವ ಎಂದು ಕರೆದರು. ಮುಂದೆ ಅದುವೆಸಾಂಬಯ್ಯನ ಮಠ ಎಂದು ಕರೆಯಲು ಕಾರಣವಾಯಿತು.ಹೀಗೆ ಪ್ರಾರಂಭಗೊಂಡಿರಬಹುದಾದ ಶ್ರೀಮಠವು ನಂತರದಲ್ಲಿ ಶ್ರೀ ಗುರುಬಂಗಾರಪ್ಪ ಚರಮೂರ್ತಿಗಳ ಕಾಲದಲ್ಲಿ ಅಸ್ತಿತ್ವಕಂಡಿದ್ದು ಶ್ರೀಗಳು ಹೆಚ್ಚಾಗಿ ಬೈಲಹೊಂಗಲತಾಲ್ಲೂಕಿನ ಏಣಿಗೆಯಲ್ಲಿ ವಾಸ್ತವ್ಯ ಮಾಡುತಿದ್ದು ಅಲ್ಲೇ ಅವರ ಜಾಗೃತ ಗದ್ದುಗೆಯೂಸ್ಥಾಪಿತಗೊಂಡಿದೆ. ಇವರ ಆಶೀರ್ವಾದ ಬಲದಿಂದ ಜನ್ಮತಳೆದು ಮುಂದೆ ಈ ಕ್ಷೇತ್ರವನ್ನುಪ್ರಖ್ಯಾತವನ್ನಾಗಿ ಮಾಡಿದವರು ಲಿಂ|| ಶ್ರೀ ಗುರು ಬಾಲಲೀಲಾ ಸಂಗಮೇಶ್ವರ ಅಜ್ಜನವರು.ಶ್ರೀ ಅಜ್ಜನವರ ತಪೋನುಷ್ಠಾನ ಫಲದಿಂದ ಶ್ರೀಮಠವು ನಾಡಿನ ನಾಲ್ಕು ದಿಕ್ಕಿಗೆತನ್ನ ಬೆಳಕಿನ ಕಿರಣಗಳನ್ನು ಚಾಚಿದೆ. ಅಜ್ಜನವರು ತಮ್ಮ ಪವಾಡಗಳಿಂದ ಕರ್ತೃತ್ವಶಕ್ತಿಯಿಂದಇಂದಿಗೂ ಹೂಲಿಯನ್ನು ಪ್ರಕಾಶಿಸುತ್ತಲಿದ್ದಾರೆ. ಶ್ರೀಗಳು ಸುತ್ತಮುತ್ತಲಿನ ಸ್ಥಳಗಳಲ್ಲೆಲ್ಲಾಸಂಚರಿಸಿ ಆ ಪ್ರದೇಶಗಳ ಭಕ್ತರನ್ನುದ್ದರಿಸಿದ್ದು ಆ ಕಾರಣದಿಂದಾಗಿ ಗುರ್ಲಹೊಸೂರು,ಜೋಡಳ್ಳಿ, ಹರಳಕಟ್ಟಿ, ಕಣಕಿಕೊಪ್ಪ ಮುಂತಾದೆಡೆಗಳಲ್ಲಿ ಅಜ್ಜನವರ ಮಠಗಳುಸ್ಥಾಪನೆಗೊಂಡು ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಲಿವೆ. ಈ ಕಾರಣಗಳಿಂದಾಗಿಅಜ್ಜನವರನ್ನು ಭಕ್ತರ ಭಾಗ್ಯನಿಧಿ ಎಂದೇ ಕರೆಯಲಾಗುತ್ತದೆ.ಇಂತಹ ಮಹಾಮಹಿಮ ಗುರುಗಳ ನಂತರ ಶ್ರೀಮಠದ ಅಧಿಕಾರವಹಿಸಿಕೊಂಡವರು ಶ್ರೀ ಗುರು ಬಾಲಲೀಲಾ ಸಂಗಮೇಶ್ವರ ಅಜ್ಜನವರು. ಇವರು ಅಜ್ಜನವರಆಶೀರ್ವಾದ ಬಲದಿಂದ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುತ್ತಾಶತಾಯುಷಿಗಳಾಗಿ ಭಕ್ತರನ್ನುದ್ದರಿಸಿದ್ದಾರೆ. ಪ್ರಸ್ತುತ ಇವರ ಕರಕಮಲ ಸಂಜಾತರಾದ ಶ್ರೀಷ.ಬ್ರ. ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು
Place :
ಹೂಲಿ, ಸವದತ್ತಿ ತಾ||
Photo :
Programs
ಕರ್ತೃ ಶ್ರೀ ಗುರು ಬಾಲಲೀಲಾ ಸಂಗಮೇಶ್ವರ ಅಜ್ಜನವರು
ಪ್ರತಿ ಅಮವಾಸೆಗೆ ವಿಶೇಷ ಪೂಜೆ ಜನವರಿಯಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪುರಾಣ ಪ್ರವಚನ
Photos
Full Address Kannada
ಶ್ರೀ ಗುರು ಬಾಲಲೀಲಾ ಸಂಗಮೇಶ್ವರ ಸಾಂಬಯ್ಯನವರ ಮಠ
ಹೂಲಿ - 591 126
ಸವದತ್ತಿ ತಾ||, ಬೆಳಗಾವಿ ಜಿಲ್ಲೆ