Shree Gavimatha Chikka Kodagali

Shree Gavimatha Chikka Kodagali Claimed

ಶ್ರೀ ಗವಿಮಠ ಚಿಕ್ಕಕೊಡಗಲಿ

Average Reviews

Description

ಶ್ರೀ ಗವಿಮಠ, ಚಿಕ್ಕಕೊಡಗಲಿ

ಕರ್ತೃ ಶ್ರೀ ಮ.ನಿ.ಪ್ರ. ಮಹಾಲಿಂಗ ಶಿವಯೋಗಿಗಳು

ಹುನಗುಂದ ತಾಲ್ಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ 19ನೇ ಶತಮಾನದಲ್ಲಿ ಶ್ರೀಮ.ನಿ.ಪ್ರ. ಮಹಾಲಿಂಗ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಗವಿಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಹೆಸರಾಗಿದೆ.ಶ್ರೀ ಗವಿಮಠವು ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ಕಲ್ಮಠದ ಶಾಖಾಮಠವಾಗಿ ಅಲ್ಲಿನಗುರುಗಳ ಆಡಳಿತದಲ್ಲೇ ಮುಂದುವರೆದುಕೊಂಡು ಬರುತ್ತಿದೆ.ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ಕಲ್ಮಠವು ನಾಡಿನ ಪ್ರಮುಖ ಮಠಗಳಲ್ಲಿಒಂದಾಗಿದ್ದು ಅಲ್ಲಿನ ಗುರುಪರಂಪರೆಯ ತಪೋಶಕ್ತಿಯಿಂದಾಗಿ, ಸಾಮಾಜಿಕ ಕಾರ್ಯಕ್ರಮಗಳಿಂದಾಗಿ ಹೆಸರುವಾಸಿಯಾಗಿದೆ. ಇಂತಹ ಕಲ್ಮಠದ ಪರಂಪರೆಯ 6ನೇ ಶ್ರೀಗಳಾದ ಶ್ರೀಮ.ನಿ.ಪ್ರ. ಹಿರೇಕೊಟ್ಟೂರು ಮಹಾಸ್ವಾಮಿಗಳ ಕರಕಮಲ ಸಂಜಾತರಾದ ಪರಮಪೂಜ್ಯರೇಚಿಕ್ಕೊಡಗಲಿಯ ಮಹಾಲಿಂಗ ಶಿವಯೋಗಿಗಳು.ಗಂಗಾವತಿಯಲ್ಲಿ ಶ್ರೀ ಹಿರೇಕೊಟ್ಟೂರು ಮಹಾಸ್ವಾಮಿಗಳ ಆಶೀರ್ವಾದಬಲದೊಂದಿಗೆ ಜನಿಸಿ ಅವರ ಸಾನಿಧ್ಯದಲ್ಲಿ ಪರಿಪಕ್ವಗೊಂಡ ಶ್ರೀ ಮಹಾಲಿಂಗ ಶಿವಯೋಗಿಗಳುಸಂಚಾರಕ್ಕೆ ಹೊರಟರು. ಅಂದಿನ ಸಮಾಜದ ಮೌಢ್ಯತೆಯನ್ನು ತೊಡೆದು ಸಮಾಜವನ್ನುಕಟ್ಟಬಯಸಿದ ಗುರುವಿನಪ್ಪಣೆಯನ್ನು ಶಿರದ ಮೇಲೆ ಹೊತ್ತು ಪಟ್ಟಣಕ್ಕೆ ಪಂಚರಾತ್ರಿ, ಹಳ್ಳಿಗೆಏಕರಾತ್ರಿ ಸಂಚರಿಸಿ ಧರ್ಮಜಾಗೃತಿ ಮಾಡಿ ಸಮಾಜದ ತುಂಬೆಲ್ಲ ಶಿವಾನುಭವವನ್ನೇ ಬಿತ್ತಿಶಿವಾನುಭವದ ಬೆಳೆಯನ್ನೇ ಬೆಳೆಸಿದರು. ಹೀಗೆ ಪರ್ಯಟನೆ ಮಾಡುತ್ತಾ ಚಿಕ್ಕ ಕೊಡಗಲಿಯಗವಿಮಠಕ್ಕೆ ಬಂದು ಜಪತಪಗಳಿಂದ ಅನುಷ್ಠಾನಗೈದು, ನೀತಿ, ನಿಯಮ, ಧೈರ್ಯ,ಸ್ಥೈರ್ಯ, ಕಾರ್ಯದಕ್ಷತೆಯಿಂದ ಮೆರೆದು, ಪೀಠದ ಪರಂಪರೆಗೆ ಒಳ್ಳೇ ಸದ್ಗುರುವನ್ನುಕರುಣಿಸಿ ಗುರುವಿಗೆ ಕೊಟ್ಟ ಮಾತಿನಂತೆ, ಭಕ್ತರ ಪಾಲಿಗೆ ಬೆಳಕಾದರು.ಹೀಗೆ ಸುಮಾರು ಎಂಭತ್ತು ವರ್ಷಗಳ ಕಾಲದವರೆಗೆ ಅವಿರತವಾಗಿ ಭಕ್ತರನ್ನುಉದ್ಧರಿಸಿದ ಶಿವಯೋಗಿಗಳು ಕ್ರಿ.ಶ. 1914ರ ಮೇ ತಿಂಗಳ ದಿನದಲ್ಲಿ ಲಿಂಗದಲ್ಲಿಲೀನರಾದರು. ಗುರುಗಳ ಐಕ್ಯಾನಂತರ ಅವರ ಗದ್ದುಗೆಯನ್ನು ನಿರ್ಮಿಸಿ ನಿತ್ಯಪೂಜೆನಡೆಸುತ್ತಾ ಬರುತ್ತಿದ್ದು ಪ್ರಸ್ತುತ ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ಕಲ್ಮಠದ ಶ್ರೀ ಮ.ನಿ.ಪ್ರ.ಡಾ. ಕೊಟ್ಟೂರು ಮಹಾಸ್ವಾಮಿಗಳು ಉಸ್ತುವಾರಿ ವಹಿಸಿಕೊಂಡು ಅಭಿವೃದ್ಧಿಪಡಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಡಾ. ಕೊಟ್ಟೂರು ಮಹಾಸ್ವಾಮಿಗಳು
Date of Birth :
1-6-1960
Place :
ಕುಟಕನ ಕೇರಿ, ಬಾದಾಮಿ ತಾ||
Pattadikara :
12-5-1995
Photo :

Programs

ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ಆಗಿ ಹುಣ್ಣಿಮೆಯ ದಿನದಂದು ಕರ್ತೃ ಶ್ರೀ ಮ.ನಿ.ಪ್ರ. ಮಹಾಲಿಂಗ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಶ್ರೀಮಠದ ಜಾತ್ರೆ
(ರಥೋತ್ಸವ, ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳು)

Photos

Full Address Kannada

ಶ್ರೀ ಗವಿಮಠ
ಚಿಕ್ಕಕೊಡಗಲಿ - 587 125
ಹುನಗುಂದ ತಾ||, ಬಾಗಲಕೋಟೆ ಜಿ||

Map

Near by Places

ಹುನಗುಂದ - 16 ಕಿ.ಮೀ.
ಇಲಕಲ್ಲ - 5 ಕಿ.ಮೀ.
ಕೂಡಲಸಂಗಮ - 30 ಕಿ.ಮೀ.
ಬಾಗಲಕೋಟೆ - 65 ಕಿ.ಮೀ.

Statistic

110 Views
0 Rating
0 Favorite
0 Share
error: Content is protected !!