ಕರ್ತೃ – ಶ್ರೀ ಮ.ನಿ.ಪ್ರ. ಚನ್ನವೀರ ದೇಶಿಕೇಂದ್ರ ಸ್ವಾಮಿಗಳು
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಗ್ರಾಮವು ತಾಲ್ಲೂಕುಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವಶ್ರೀ ಗವಿಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀ ಎಡೆಯೂರುಸಿದ್ದಲಿಂಗೇಶ್ವರರು 15ನೇ ಶತಮಾನದಲ್ಲಿ ನಾಡಿನಾದ್ಯಂತ ಸಂಚರಿಸುತ್ತಾ ಅಲ್ಲಲ್ಲಿ ನೆಲೆಸಿಅನುಷ್ಠಾನಗೊಂಡು ಮುನ್ನಡೆಯುತ್ತಿದ್ದರು. ಈ ರೀತಿ ಅನುಷ್ಠಾನಗೊಂಡಿದ್ದ ಸ್ಥಳಗಳಲೆಲ್ಲಾಅವರ ಶಿಷ್ಯವರ್ಗ ನೆಲೆಗೊಂಡು ಮಠ ಸ್ಥಾಪಿಸಿ ಧರ್ಮಜಾಗೃತಿ ಮೂಡಿಸುವ ಕಾರ್ಯದಲ್ಲಿನಿರತರಾದರು ಆ ರೀತಿ ಸ್ಥಾಪನೆಯಾದ ಮಠವೇ ಶ್ರೀ ಗವಿಮಠ.ಶ್ರೀ ಮ.ನಿ.ಪ್ರ. ಚನ್ನವೀರ ದೇಶಿಕೇಂದ್ರ ಸ್ವಾಮಿಗಳನ್ನು ಶ್ರೀ ಗವಿಮಠದಸ್ಥಾಪಕರೆಂದು ಗುರುತಿಸಲಾಗಿದೆ. ಆದರೆ ಕರ್ತೃಗುರುಗಳ ಹಾಗೂ ನಂತರದಪರಂಪರೆಯಲ್ಲಿ ಬಂದಿರುವ ಗುರುಗಳ ಬಗ್ಗೆ ಸ್ಪಷ್ಟತೆಯಿಲ್ಲ. ಇದುವರೆಗೂ 8 ಜನ ಶ್ರೀಗಳುಅಧಿಕಾರಕ್ಕೆ ಬಂದಿದ್ದು ತಾವು 9ನೇಯವರೆಂದು ಈಗಿನ ಶ್ರೀಗಳು ಅಭಿಪ್ರಾಯಿಸುತ್ತಾರೆ. ಇದಕ್ಕೆಸೂಕ್ತ ದಾಖಲೆಗಳ ಕೊರತೆ ಇದೆ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ ಸಿದ್ದಬಸವ ದೇಶಿಕೇಂದ್ರ ಮಹಾಸ್ವಾಮಿಗಳು ಶ್ರೀಮಠ ಹಾಗೂ ಗ್ರಾಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತಾ ಮಠವನ್ನು ಮುನ್ನಡೆಸಿದ್ದು 1973ರಲ್ಲಿಲಿಂಗೈಕ್ಯರಾಗಿದ್ದಾರೆ. ಮೊದಲು ಶಿಂಷಾ ನದಿ ಪ್ರದೇಶದಲ್ಲಿದ್ದ ಮಠವು ಶಿಂಷಾ ನದಿಗೆಅಡ್ಡಲಾಗಿ ಕಟ್ಟಿದ ಅಣೆಕಟ್ಟೆಯಲ್ಲಿ ಮುಳುಗಿದ್ದು ಶ್ರೀ ಮಠವನ್ನು 1965ರಲ್ಲಿ ಇಲ್ಲಿಗೆಸ್ಥಳಾಂತರಿಸಿದವರು ಶ್ರೀ ಸಿದ್ದಬಸವ ದೇಶೀಕೇಂದ್ರ ಮಹಾಸ್ವಾಮಿಗಳು. ತದ ನಂತರ 1975ರಮೇ 22 ರಂದು ಈಗಿನ ಶ್ರೀಗಳಾದ ಶ್ರೀ ಮ. ನಿ. ಪ್ರ. ತೋಂಟದಾರ್ಯ ಸ್ವಾಮಿಗಳು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಭಕ್ತರ ಸಹಕಾರದೊಂದಿಗೆ ಶ್ರೀ ಮಠವನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀ ಮಠದ ಎಲ್ಲಾ ಗುರುಗಳು ಯಡೆಯೂರು ಸಿದ್ದಲಿಂಗೇಶ್ವರರಪರಂಪರೆಯನ್ನು ಪರಿಪಾಲಿಸುತ್ತಾ ಬಂದಿದ್ದು ಸಿದ್ದಲಿಂಗೇಶ ್ವರ ದೇವಸಾ್ಥನದಕಾರ್ಯಕ್ರಮಗಳಲ್ಲಿ ಆಚರಣೆಗಳಲ್ಲಿ ತಪ್ಪದೇ ಭಾಗವಹಿಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ. ನಿ. ಪ್ರ. ತೊಂಟದಾರ್ಯ ಸ್ವಾಮಿಗಳು
Date of Birth :
21-05-1941
Place :
ಕಗ್ಗೆರೆ, ಕುಣಿಗಲ್ ತಾ||
Pattadikara :
22-05-1975
Photo :
Programs
ಪ್ರತಿ ತಿಂಗಳ ಅಮವಾಸ್ಯೆಗೆ ರುದ್ರಾಭಿಷೇಕ ಕಾರ್ತೀಕ ಮಾಸದ ಪೌರ್ಣಿಮೆಯಂದು ಶ್ರೀ ಸಿದ್ದಲಿಂಗೇಶ್ವರರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ಪಾಲ್ಗುಣ ಶುದ್ಧ ಸಪ್ತಮಿಯಂದು ಕಗ್ಗೆರೆ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಜಾತ್ರಾ ಮಹೋತ್ಸವ ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಬಾಗಿಯಾಗುವಿಕೆ
Photos
Full Address Kannada
ಶ್ರೀ ಗವಿಮಠ ಕಗ್ಗೆರೆ - 572 130 ಕುಣಿಗಲ್ ತಾ||, ತುಮಕೂರು ಜಿಲ್ಲೆ