Shree Durudundeshwara viraktamatha – Kadoli

Shree Durudundeshwara viraktamatha – Kadoli Claimed

ಶ್ರೀ ದುರುದುಂಡೇಶ್ವರ ವಿರಕ್ತ ಮಠ - ಕಡೋಲಿ

Average Reviews

Description

ಶ್ರೀ ದುರುದುಂಡೇಶ್ವರ ವಿರಕ್ತ ಮಠ – ಕಡೋಲಿ

ಕರ್ತೃ – ಪೂಜ್ಯ ಶ್ರೀ ದುರುದುಂಡೇಶ್ವರ ಶಿವಯೋಗಿಗಳು

ಬೆಳಗಾವಿ ಜಿಲ್ಲೆ ಕಡೋಲಿ ಗ್ರಾಮವು ತಾಲ್ಲೂಕು ಕೇಂದ್ರದಿಂದ ಕೇವಲ 06ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಪರಮಪೂಜ್ಯ ಶ್ರೀ ದುರುದುಂಡೇಶ್ವರಶಿವಯೋಗಿಗಳಿಂದ ಸುಮಾರು 12-13ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀದುರುದುಂಡೇಶ್ವರ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠದ ಕರ್ತೃಗುರುಗಳಾದ ಶ್ರೀ ದುರುದುಂಡೇಶ್ವರ ಶಿವಯೋಗಿಗಳುಮಹಾತಪೋನಿಷ್ಠರಾಗಿದ್ದು ಉತ್ತರದ ಕಡೆಯಿಂದ ಕರುನಾಡಿನ ಈ ಪ್ರದೇಶಕ್ಕೆ ಸಂಚಾರಬಂದಿದ್ದಾರೆ. ಕಡೋಲಿ ಗ್ರಾಮದಲ್ಲಿ ನೆಲೆಗೊಂಡ ಶ್ರೀಗಳು ಇಲ್ಲೇ ಅನುಷ್ಠಾನಗೊಂಡಿದ್ದುತಮ್ಮ ಅನುಷ್ಠಾನಬಲದಿಂದ ಶ್ರೀಮಠವನ್ನು ಸ್ಥಾಪಿಸಿ ಭಕ್ತರನ್ನು ಸನ್ಮಾರ್ಗದಲ್ಲಿಕೊಂಡೊಯ್ದಿದ್ದಾರೆ. ಶ್ರೀಗಳು ಇಲ್ಲಿ ಶ್ರೀಮಠವನ್ನು ಸ್ಥಾಪನೆ ಮಾಡಿ ಮತ್ತೆ ಸಂಚಾರಕ್ಕೆಹೊರಟು ಅರಭಾವಿಯಲ್ಲಿ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿದುಬರುತ್ತದೆ.ಶ್ರೀಮಠದ ಗುರುಪರಂಪರೆಯಲ್ಲಿ ಈವರೆಗೂ 8 ಜನ ಪೀಠಾಧಿಪತಿಗಳುಅಧಿಕಾರ ನಡೆಸಿದ್ದು ಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳುಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಶ್ರೀಗಳು 1968ರಲ್ಲಿ ಶ್ರೀಮಠದ ಅಧಿಕಾರವನ್ನುವಹಿಸಿಕೊಂಡಿದ್ದು ಸದಾ ಸಂಚಾರ ಮೂರ್ತಿಗಳಾಗಿ, ವೀರಶೈವ ಧರ್ಮಾಚರಣೆಗಳನ್ನುಪ್ರಚಾರ ಮಾಡಿದ್ದಾರೆ ಹಾಗೂ ಶ್ರೀಗಳು ಕನ್ನಡ, ಮರಾಠಿ, ಹಿಂದಿ, ಸಂಸ್ಕøತ ಭಾಷೆಗಳಲ್ಲಿಪಾಂಡಿತ್ಯವನ್ನು ಪಡೆದ ಪಂಡಿತರಾಗಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿ 2002ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಗುರುಬಸವಲಿಂಗ ಸ್ವಾಮಿಗಳು ಶ್ರೀಮಠದ 8ನೇಪೀಠಾಧಿಪತಿಗಳಾಗಿ 2007ರ ಫೆಬ್ರವರಿ 15ರಂದು ಅಧಿಕಾರ ವಹಿಸಿಕೊಂಡಿದ್ದು ಹಿಂದಿನಗುರುಗಳ ಹಾದಿಯಲ್ಲಿಯೇ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದುಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಿದ್ದಾರೆ ಹಾಗೂ ಶ್ರೀಮಠದ ಜಾತ್ರೆಯುಮಹಾಶಿವರಾತ್ರಿಗೆ ನಡೆಯುತ್ತಿದ್ದು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗುರುಬಸವಲಿಂಗ ಸ್ವಾಮಿಗಳು
Date of Birth :
01-07-1978
Place :
ದುರುದುಂಡಿ, ಗೋಕಾಕ್ ತಾ||
Pattadikara :
15-02-2007
Photo :

Programs

ಮಹಾಶಿವರಾತ್ರಿಗೆ ಶ್ರೀಮಠದ ಜಾತ್ರೆ
(ಪುಸ್ತಕ ಲೋಕಾರ್ಪಣೆ, ಉಪನ್ಯಾಸ, ಕುಸ್ತಿ ಸ್ಪರ್ಧೆ, ಕೃಷಿ ತೋಟಗಾರಿಕೆ
ವಸ್ತು ಪ್ರದರ್ಶನ, ಜಾನುವಾರುಗಳ ಪ್ರದರ್ಶನ ಮತ್ತು ಚಿಕಿತ್ಸೆ)
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂe

Institutions

ಪೂರ್ವ ಪ್ರಾಥಮಿಕ ಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ

Photos

Full Address Kannada

ಶ್ರೀ ದುರುದುಂಡೇಶ್ವರ ವಿರಕ್ತ ಮಠ
ಕಡೋಲಿ - 591 143
ಬೆಳಗಾವಿ ತಾ||, ಜಿಲ್ಲೆ

Map

Statistic

1 Views
0 Rating
0 Favorite
0 Share
error: Content is protected !!