ಹಾಸನ ಜಿಲೆ ್ಲ ಅರಕಲಗೂಡು ಪಟ್ಟಣದ ಹೊರವಲಯದಲ್ಲಿಸ್ಥಾಪಿತಗೊಂಡಿರುವ ಶ್ರೀ ದೊಡ್ಡಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕಕಾರ್ಯಕ್ರಮಗಳ ಮೂಲಕ ಈ ಭಾಗದ ಪ್ರಮುಖ ಮಠವಾಗಿ ಗುರುತಿಸಿಕೊಂಡಿದೆ. 15ನೇಶತಮಾನದ ಶ್ರೀ ಯಡೆಯೂರು ಸಿದ್ದಲಿಂಗೇಶ್ವರರು ತಮ್ಮ ನೂರೊಂದು ವಿರಕ್ತರೊಡನೆಸಂಚಾರ ಮಾಡುತ್ತಾ ಈ ಭಾಗದಲ್ಲಿ ಕೆಲ ಕಾಲ ನೆಲೆನಿಂತು ಅನುಷ್ಠಾನಗೊಂಡಿದ್ದರು. ಈಭಾಗದ ಭಕ್ತರ ಕೋರಿಕೆ ಮೇರೆಗೆ ಶ್ರೀ ದೊಡ್ಡಮಠವನ್ನು ಸ್ಥಾಪಿಸಿದ ಗುರುಗಳು ತಮ್ಮಶಿಷ್ಯರಲ್ಲೊಬ್ಬರಾದ ಪೂಜ್ಯ ಶ್ರೀ ಚನ್ನಬಸವೇಶ್ವರ ಶಿವಯೋಗಿಗಳನ್ನು ಶ್ರೀಮಠದ ಪ್ರಥಮಗುರುಗಳಾಗಿ ನೇಮಿಸಿ ಮುಂದುವರೆದರು. ಹೀಗೆ ಶ್ರೀ ಚನ್ನಬಸವೇಶ್ವರ ಶಿವಯೋಗಿಗಳಿಂದಪ್ರಾರಂಭಗೊಂಡ ಶ್ರೀಮಠದ ಪರಂಪರೆ ಈಗಿನವರೆಗೂ ಮುಂದುವರೆದುಕೊಂಡುಬಂದಿದ್ದು ಪರಂಪರೆಯ ಬಗ್ಗೆ ನಿಖರವಾದ ದಾಖಲೆಗಳ ಕೊರತೆಯಿದೆ.ಸುಮಾರು 136 ವರ್ಷಗಳ ಹಿಂದೆ ಶ್ರೀಮಠದ ಗುರುಪರಂಪರೆಯಲ್ಲಿ ಘಂಟಕಾಯಕ ಮಾಡಿದಂತಹ ಶಿವರುದ್ರ ಸ್ವಾಮಿಗಳು ಇದ್ದರೆಂಬುದಕ್ಕೆ ದಾಖಲೆ ಇದೆ ಹಾಗೂ1876ರ ಸಮಯದಲ್ಲಿ ಶ್ರೀ ಪರ್ವತ ಒಡೆಯರ್ ಮಹಾಸ್ವಾಮಿಗಳು ಎಂಬ ಶ್ರೀಗಳುಶ್ರೀಮಠದ ಗುರುಪರಂಪರೆಯಲ್ಲಿ ಇದ್ದರೆಂಬುದಕ್ಕೆ ದಾಖಲೆ ಇದ್ದು ಈ ಶ್ರೀಗಳುಮಹಾಯೋಗ ಪುರುಷರಾಗಿದ್ದು ಇವರ ಕಾಲದಲ್ಲಿ ಇದೇ ಊರಿನ ಹೊರಭಾಗದಲ್ಲಿ ಶ್ರೀಚಿಕ್ಕಮಠವನ್ನು ಸ್ಥಾಪಿಸಿದ್ದರು. ಶ್ರೀ ಪರ್ವತ ಒಡೆಯರ್ರವರ ನಂತರ ಶ್ರೀ ಮಠಕ್ಕೆಉತ್ತರಾಧಿಕಾರಿಯನ್ನು ನೇಮಿಸಿದ್ದು ನಂತರದಲ್ಲಿ ಅವರು ಬೆಂಗಳೂರಿನ ಶ್ರೀ ಕೊಳಲುಮಠಕ್ಕೆ ಪಟ್ಟಾಧಿಕಾರ ಸ್ವೀಕರಿಸಿ ಹೋಗುತ್ತಾರೆ. ಆನಂತರ ಶ್ರೀಮಠವು ಅನ್ಯ ಧರ್ಮೀಯರವಶಕ್ಕೆ ಹೋದಾಗ ಊರ ಭಕ್ತರು ಶ್ರೀ ಕೊಳಲು ಮಠದ ಶ್ರೀಗಳ ಹತ್ತಿರ ಜಿ.ಪಿ.ಎ. ತಂದುಕೋರ್ಟಿನಲ್ಲಿ ಹೋರಾಡಿ 1903ರಲ್ಲಿ ಹೈಕೋರ್ಟಲ್ಲಿ ಜಯ ಸಾದಿಸಿ ಶ್ರೀಮಠವನ್ನು ತಮ್ಮಸುಪರ್ದಿಗೆ ವಹಿಸಿಕೊಳ್ಳುತ್ತಾರೆ.ತದನಂತರ ಶ್ರೀ ಚಂದ್ರಶೇಖರಯ್ಯನವರು ಶ್ರೀಮಠದ ಧಾರ್ಮಿಕ ಆಚರಣೆಗಳು,ಮಠದ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಾ ಸುಧೀರ್ಘ 40 ವರ್ಷಗಳ ಕಾಲಶ್ರೀಮಠವನ್ನು ಸಮರ್ಥವಾಗಿ ನೋಡಿಕೊಂಡು ಬರುತ್ತಿದ್ದರು. ಇವರ ನಂತರ ಇವರಸಂಬಂದಿಕರಾದ ಶ್ರೀ ಶಂಕರಯ್ಯ ಸ್ವಾಮಿಗಳು ಶ್ರೀಮಠದ ಆಡಳಿತ ವಹಿಸಿಕೊಂಡುಸುಮಾರು 50 ವರ್ಷಗಳ ಕಾಲ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡುಬಂದಿದ್ದು 1993ರಲ್ಲಿ ಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ ಶಂಕರಯ್ಯ ಸ್ವಾಮಿಗಳಿರುವಾಗಲೇ 1976ರಲ್ಲಿ ಪ್ರಸ್ತುತಶ್ರೀಗಳಾದ ಶ್ರೀ ಮ.ನಿ.ಪ ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡು ಚಿತ್ರದುರ್ಗ ಬೃಹನ್ಮಠದ ಜಗದ್ಗುರು ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅದ್ದೂರಿ ದಸರಾಕಾರ್ಯಕ್ರಮದೊಂದಿಗೆ 1976ರ ಅಕ್ಟೋಬರ್ 02ರಲ್ಲಿ ಪಟ್ಟಾಧಿಕಾರದ ಅನುಗ್ರಹನೀಡಿದ್ದರು.ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದಅಧಿಕಾರ ಸ್ವೀಕರಿಸಿ ತದನಂತರ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. ಯಡೆಯೂರು,ಮೈಸೂರು ಹಾಗೂ ಬೆಂಗಳೂರಿನಲ್ಲಿ ಸಂಸ್ಕøತ, ವೇದ, ಜ್ಯೋತಿಷ್ಯ ವಿಷಯಗಳನ್ನು ಆಳವಾಗಿಅಭ್ಯಸಿಸಿ ಪರಿಣಿತಿ ಪಡೆದ ಶ್ರೀಗಳು ಶ್ರೀಮಠಕ್ಕೆ ಮರಳಿ ಪೂರ್ಣ ಅಧಿಕಾರವನ್ನು ಸ್ವೀಕರಿಸಿದ್ದುಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದಜೊತೆಯಲ್ಲಿ ಬೆಂಗಳೂರಿನ ಶ್ರೀ ಸರ್ಪಭೂಷಣ ಮಠದ ಅಧಿಕಾರವನ್ನೂ ವಹಿಸಿಕೊಂಡಿದ್ದುಉಭಯ ಮಠಗಳನ್ನು ಪ್ರಗತಿ ಪಥದತ್ತ ಮುನ್ನಡೆಸುತ್ತಿದ್ದಾರೆ.ಶ್ರೀಗಳು ಶ್ರೀದೊಡ್ಡ ಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವುಜೀರ್ಣೋದ್ಧಾರಗೊಂಡಿದ್ದು ನೂತನ ಮಠವನ್ನು ಕಟ್ಟಿದ್ದಾರೆ. ಶ್ರೀಮಠದಲ್ಲಿ ಕಲ್ಯಾಣಮಂಟಪವನ್ನು ಕಟ್ಟಿಸಿದ್ದು ಇನ್ನೂ ಅನೇಕ ಯೋಜನೆಗಳನ್ನು ಹೊಂದಿದ್ದಾರೆ. ಶ್ರೀಗಳುಅರಕಲಗೂಡು ತಾಲ್ಲೂಕಿನ ಹಳ್ಳಿಗಳಲ್ಲಿ ಶಿಥಿಲಗೊಂಡಿದ್ದ 40ಕ್ಕೂ ಹೆಚ್ಚಿನ ದೇವಸ್ಥಾನಗಳನ್ನುಆ ಹಳ್ಳಿಗಳ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ದಾರಗೊಳಿಸಿದ್ದಾರೆ.ಶ್ರೀಗಳು ಮಠದೊಂದಿಗೆ ಸಮಾಜದ ಅಭಿವೃದ್ದಿಯಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಎರಡು ಬಾರಿ ವಿದೇಶ ಪ್ರವಾಸ ಕೈಗೊಂಡು ಧರ್ಮ ಪ್ರಚಾರ ಕಾರ್ಯಮಾಡಿರುವ ಶ್ರೀಗಳು 2000ನೇ ಇಸವಿಯಲ್ಲಿ ಸಾಹಿತಿ ಕಲಬುರ್ಗಿಯವರ ನೇತೃತ್ವದಲ್ಲಿನ್ಯೂಜಿಲ್ಯಾಂಡಿನಲ್ಲಿ ಬಸವ ಸಮಿತಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಗಳುಹಾಸನ ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾದ ಗೌರವ ಅಧ್ಯಕ್ಷರಾಗಿಯೂಕಾರ್ಯನಿರ್ವಹಿಸುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳು
Date of Birth :
15-04-1963
Place :
ರಟ್ಟಿಹಳ್ಳಿ, ಹಿರೇಕೇರೂರು ತಾ||
Pattadikara :
02-10-1976
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ
ಜನವರಿಯಲ್ಲಿ ಲಿಂ|| ಶ್ರೀ ಶಂಕರ ಸ್ವಾಮಿಗಳ ಆರಾಧನೆ
ಕಾರ್ತೀಕ ಮಾಸದ ಅಮವಾಸ್ಯೆಯಂದು ಶ್ರೀಮಠದಲ್ಲಿ
ಕಾರ್ತೀಕೋತ್ಸವ ಪ್ರಾರಂಭ
ಗುರುಪೂರ್ಣಿಮೆಯಂದು ಗುರುವಂದನಾ ಕಾರ್ಯಕ್ರಮ
ಶ್ರೀಕ್ಷೇತ್ರ ಸುತ್ತೂರು ಶ್ರೀ ಜಗದ್ಗುರು ಶಿವರಾತ್ರಿ ರಾಜೇಂದ್ರ
ಮಹಾಸ್ವಾಮಿಗಳ ಜಯಂತ್ಯುತ್ಸವ
ಬಸವ ಜಯಂತಿ ಆಚರಣೆ