ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದೀಪುರ ಗ್ರಾಮವು ತಾಲ್ಲೂಕುಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ದೊಡ್ಡಬಸವೇಶ್ವರಸ್ವಾಮಿಗಳಿಂದ ಪ್ರೇರೇಪಿತಗೊಂಡ ಹಾಗೂ ಪೂಜ್ಯ ಶ್ರೀ ಚರಂತಪ್ಪಯ್ಯ ಸ್ವಾಮಿಗಳಿಂದಮುಂದುವರೆದ ಪರಂಪರೆಯ ಶ್ರೀ ದೊಡ್ಡ ಬಸವೇಶ್ವರ ಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಹಾಗೂ ಸಮಾಜಿಕ ಚಟುವಟಿಕೆಗಳ ಮೂಲಕ ಈ ಭಾಗದ ಭಕ್ತರ ಪ್ರಮುಖಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.ನಂದೀಪುರ ಶ್ರೀ ದೊಡ್ಡಬಸವೇಶ್ವರ ಮಠದ ಸ್ಥಾಪಕರು ಶ್ರೀ ಚರಂತಪ್ಪಯ್ಯಸ್ವಾಮಿಗಳು, ಆದರೆ ಇದರ ಮೂಲ ಇರುವುದು ಇದೇ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಗದ್ದಿಕೇರಿ ಗ್ರಾಮದಲ್ಲಿ. ಸುಮಾರು 15-16ನೇ ಶತಮಾನದಲ್ಲಿ ಜೀವಿಸಿದರೆಂದು ಹೇಳಲಾದಶ್ರೀ ಗುರು ದೊಡ್ಡಬಸವೇಶ್ವರ ಸ್ವಾಮಿಗಳು ಪೂರ್ಣಚೈತನ್ಯಭರಿತರಾಗಿದ್ದ ಮಹಾಮಹಿಮಪುರುಷರು. ಶ್ರೀಗಳು ಗದ್ದಿಕೇರಿ ಗ್ರಾಮದಲ್ಲಿ ನೆಲೆಸಿ ತಮ್ಮ ಲೀಲೆಗಳನ್ನು ನಡೆಸಿದವರು,ಜನಮನದ ಕತ್ತಲನ್ನು ಹೋಗಲಾಡಿಸಿ ಭಕ್ತರನ್ನು ಪಾವನಗೊಳಿಸಿದವರು.ಶ್ರೀ ದೊಡ್ಡ ಬಸವೇಶ್ವರ ಸ್ವಾಮಿಗಳು ತಮ್ಮ ಕಾಲಮಾನದಲ್ಲಿ ಈ ಭಾಗದಲ್ಲಿಸಂಚರಿಸುತ್ತಾ ಜನರಿಗೆ ಧಾರ್ಮಿಕ ಅರಿವು ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.ವೀರಶೈವ ಧರ್ಮದ ಆಚರಣೆಗಳ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಜನರಿಗೆಉಪದೇಶಿಸುತ್ತಾ ಮುನ್ನಡೆದಿದ್ದರು ಎಂದು ತಿಳಿದುಬರುತ್ತದೆ. ಗುರುಗಳು ತಾವು ಜೀವಂತಸಮಾಧಿ ಹೋಗುವ ಮೊದಲು ಭಕ್ತರಿಗೆ ನಾನು ಇನ್ನೊಮ್ಮೆ ಅವತರಿಸಿ ಬರುತ್ತೇನೆ ಎಂದುಹೇಳಿದ್ದರು ಎಂಬ ಪ್ರತೀತಿ ಇದ್ದು ಹಿಂದಿನ ಶ್ರೀಗಳಾದ ಶ್ರೀ ಚರಂತಪ್ಪಯ್ಯನವರೇ ಅವರೆಂದುಭಕ್ತರು ನಂಬುತ್ತಾರೆ.ಶ್ರೀ ದೊಡ್ಡ ಬಸವೇಶ್ವರರು ಜೀವಂತ ಸಮಾಧಿ ಹೋದ ಮೇಲೆ ಅಲ್ಲಿ ಗದ್ದುಗೆ ಕಟ್ಟಿಪೂಜಿಸುತ್ತಾ ಬರಲಾಗಿದೆ. ಈ ಕಾರ್ಯವನ್ನು ಗ್ರಾಮಸ್ಥರೇ ನಡೆಸಿಕೊಂಡು ಬಂದಿದ್ದಾರೆಂದುತಿಳಿದುಬರುತ್ತದೆ. ಕರ್ತೃಗುರುಗಳ ಅವತಾರವೆಂದೇ ಪರಿಗಣಿಸುವ ಶ್ರೀ ಚರಂತಪ್ಪಯ್ಯನವರು1933ರ ಡಿಸೆಂಬರ್ 07ರಂದು ಗದ್ದಿಕೇರಿಯಲ್ಲಿಯೇ ಜನ್ಮತಾಳಿದವರು. ಶ್ರೀಗಳು ಬಾಲ್ಯದಲ್ಲಿಯೇ ಆಧ್ಯಾತ್ಮಿಕತೆಯ ಬಗ್ಗೆ ಒಲವು ಹೊಂದಿದವರಾಗಿದ್ದರೂ ಹಿರಿಯರ ಆಸೆಯಂತೆಸಂಸಾರ ಬಂಧನಕ್ಕೆ ಒಳಗಾದವರು. ಹಾಗೆಯೇ ಶಾಲಾ ಶಿಕ್ಷಕರಾಗಿಯೂ, ಪೋಸ್ಟ್ ಮಾಸ್ಟರರಾಗಿಯೂ ಸೇವೆ ಸಲ್ಲಿಸಿದವರು.ಶ್ರೀ ಚರಂತಪ್ಪಯ್ಯನವರಿಗೆ ಕರ್ತೃಗುರುಗಳಾದ ಶ್ರೀ ದೊಡ್ಡಬಸವೇಶ್ವರರಪ್ರೇರಣೆಯಾಗಿ ಶ್ರೀಗಳು ಭಕ್ತರಿಗೆ ಪ್ರತಿ ಭಾನುವಾರದಂದು ಮಾತ್ರ ಅಪ್ಪಣೆ ಕೊಡುತ್ತಾಬರುತ್ತಿದ್ದರು. ತದನಂತರ ತಮ್ಮ ವೃತ್ತಿಯಿಂದ ನಿವೃತ್ತರಾದ ನಂತರ ಪ್ರತಿ ಭಾನುವಾರ,ಸೋಮವಾರ ಹಾಗೂ ಗುರುವಾರಗಳಲ್ಲಿ ಅಪ್ಪಣೆ ಕೊಡುತ್ತಾ ಮುಂದುವರೆದರು. ಶ್ರೀಗಳುತಮ್ಮನ್ನು ನಂಬಿಕೊಂಡು ಬರುವ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಿದ್ದರು.ಶ್ರೀ ಚರಂತಪ್ಪಯ್ಯನವರು ಮೊದಲು ಗದ್ದಿಕೇರಿಯಲ್ಲಿನ ಕರ್ತೃಗುರುಗಳಗದ್ದುಗೆಯನ್ನು ಅಭಿವೃದ್ಧಿಗೊಳಿಸಿ ದೇವಸ್ಥಾನ ಕಟ್ಟಿದರು ಹಾಗೂ ಮಹಾಶಿವರಾತ್ರಿಯಮರುದಿನ ಶ್ರೀ ಗುರು ದೊಡ್ಡ ಬಸವಸ್ವಾಮಿಯ ರಥೋತ್ಸವ ನಡೆಸುವ ವ್ಯವಸ್ಥೆ ಮಾಡಿದರು.ತದನಂತರ ಪುಣ್ಯಕ್ಷೇತ್ರ ನಂದೀಪುರದಲ್ಲಿ ದೇವಸ್ಥಾನ ಕಟ್ಟಿಸಿ ನಂದಿಮೂರ್ತಿಯನ್ನು ಸ್ಥಾಪಿಸಿಮಾಘ ಶುದ್ಧ ದಶಮಿಯಂದು ಶ್ರೀಗುರು ದೊಡ್ಡ ಬಸವೇಶ್ವರ ಸ್ವಾಮಿಯ ರಥೋತ್ಸವವನ್ನುನಡೆಸುವ ವ್ಯವಸ್ಥೆ ಮಾಡಿದರು.ಶ್ರೀ ಚರಂತಪ್ಪಯ್ಯನವರು ಮಹಾಮಹಿಮ ಪುರುಷರಾಗಿದ್ದು ಅವರ ಅಪ್ಪಣೆಎಂದಿಗೂ ಸುಳ್ಳಾಗಿಲ್ಲವೆಂದು ಭಕ್ತರು ಹೇಳುತ್ತಾರೆ. ಹಾಗೆಯೇ ಶ್ರೀಗಳವರ ದರ್ಶನ ಮಾತ್ರದಿಂದ ನಮ್ಮ ಸಮಸ್ಯೆ ನೀಗುತ್ತಿದ್ದವೆಂದು ಭಾವಪರವಶರಾಗಿ ನುಡಿಯುತ್ತಾರೆ. ಶ್ರೀಗಳುನಂದೀಪುರವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಗದ್ದಿಕೇರಿ ಹಾಗೂ ಸುತ್ತಮುತ್ತಲಿನಭಾಗದ ಭಕ್ತರಿಗೆ ದರ್ಶನ ನೀಡುತ್ತಿದ್ದರು. ಇಂತಹ ಮಹಾಮಹಿಮರು 2005ರ ಫೆಬ್ರವರಿ 6ರಂದು ಲಿಂಗದೊಳಗೆ ಲೀನರಾದರು.ಈಗಿನ ಶ್ರೀಗಳಾದ ಶ್ರೀ ಮಹೇಶ್ವರ ಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಹಿಂದಿನ ಶ್ರೀಗಳ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದು ಶ್ರೀಮಠದಲ್ಲಿ ಧಾರ್ಮಿಕಕಾರ್ಯಗಳ ಜೊತೆಯಲ್ಲಿ ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಗಳುಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುತ್ತಾ ಸಾಗುತ್ತಿದ್ದು, ಗದ್ದಿಕೇರಿಯಲ್ಲಿನ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ.
Swamiji
Swamiji Name :
ಪರಮ ಪೂಜ್ಯ ಶ್ರೀ ಮಹೇಶ್ವರ ಸ್ವಾಮಿಗಳು
Date of Birth :
10-2-1975
Place :
ಗದ್ದಿಕೇರಿ, ಹಗರಿಬೊಮ್ಮನಹಳ್ಳಿ ತಾ||
Photo :
Programs
ಪ್ರತಿ ಭಾನುವಾರ, ಸೋಮವಾರ, ಗುರುವಾರಗಳಂದು ಶ್ರೀಗಳ ದರ್ಶನ ಮತ್ತು ಆಯುರ್ವೇದ ಔಷಧ ವಿತರಣೆ.
ದಸರಾ ಉತ್ಸವ ಮತ್ತು ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವ.
ಫೆಬ್ರವರಿ ತಿಂಗಳಲ್ಲಿ ಶ್ರೀಮಠದ ಜಾತ್ರೆ.
ಜುಲೈ ತಿಂಗಳಲ್ಲಿ ಕುಂಭಾಭಿಷೇಕ ಕಾರ್ಯಕ್ರಮ.
ಶ್ರಾವಣ ಮಾಸದಲ್ಲಿ ಕುಂಭಾಭಿಷೇಕ ಬೇಸಿಗೆ ಶಿಬಿರ: ವ್ಯಕ್ತಿತ್ವ ವಿಕಸನದಲ್ಲಿ
Photos
Full Address Kannada
ಶ್ರೀ ದೊಡ್ಡ ಬಸವೇಶ್ವರ ಮಠ ನಂದೀಪುರ,
ಬ್ಯಾಸಿಗಿದೇರಿ ಪೋಸ್ಟ್ -583 224
ಹಗರಿಬೊಮ್ಮನಹಳ್ಳಿ ತಾ|| ಬಳ್ಳಾರಿ ಜಿ||