ಜಮಖಂಡಿ ತಾಲ್ಲೂಕಿನ ಮರೆಗುದ್ದಿ ಗ್ರಾಮದ ಹೊರವಲಯದ ದಿಬ್ಬದ ಮೇಲೆಶ್ರೀ ದಿಗಂಬರೇಶ್ವರ ಸ್ವಾಮಿಗಳಿಂದ ಸುಮಾರು 16ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವಶ್ರೀ ದಿಗಂಬರೇಶ್ವರ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕಈ ಗ್ರಾಮದ ಭಕ್ತರಿಗೆ ಸನ್ಮಾರ್ಗ ತೋರುವ ಕಾರ್ಯ ನಿರ್ವಹಿಸುತ್ತಿದೆ.ಕರ್ತೃಗುರುಗಳಾದ ಶ್ರೀ ದಿಗಂಬರೇಶ್ವರರು ಮಹಾನ್ ತಪೋನಿಷ್ಠರಾಗಿದ್ದು,ನಿರ್ಜನವಾದ ಭಯಾನಕ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿದ್ದ ಸಮಯದಲ್ಲಿ ಬೇಟೆಗೆಂದುಕಾಡಿಗೆ ಬಂದಿದ್ದ ಶಿವಾಜಿ ಮಹಾರಾಜನು ಶ್ರೀಗಳ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರತಪೋನುಷ್ಠಾನ ಶಕ್ತಿಯ ಅರಿವಾಗಿ ಬೇಟೆಯನ್ನು ಅಂದಿನಿಂದ ಬಿಟ್ಟು ಶ್ರೀಗಳಿದ್ದ ಸ್ಥಳದಲ್ಲೇಮಠವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.ಕರ್ತೃಗುರುಗಳ ನಂತರ ಬಂದಿರಬಹುದಾದ ಪರಂಪರೆಯ ಬಗ್ಗೆ ಸೂಕ್ತದಾಖಲೆಗಳ ಅಲಭ್ಯತೆಯಿದ್ದು ಪರಂಪರೆಯ ಇಬ್ಬರು ಸ್ವಾಮಿಗಳ ಬಗ್ಗೆ ಮಾತ್ರ ಅಲ್ಪ ಮಾಹಿತಿಸಿಗುತ್ತದೆ.
ಹಿಂದಿನ ಶ್ರೀಗಳಾದ ಶ್ರೀ ನಾಗಭೂಷಣ ಸ್ವಾಮಿಗಳು ಧಾರವಾಡದ ಮುರುಘಾಮಠದಲ್ಲಿ ಸಂಸ್ಕøತ, ವೇದಾಧ್ಯಯನ ಮಾಡಿ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದಚಿನ್ನದ ಪದಕವನ್ನು ಪಡೆದು, ಶ್ರೀಮಠಕ್ಕೆ ಮರಳಿ 1978ರಲ್ಲಿ ಪಟ್ಟಕ್ಕೆ ಬರುತ್ತಾರೆ.
ಶ್ರೀಗಳುಧಾರ್ಮಿಕ ಚಿಂತಕರಾಗಿದ್ದು ತಮ್ಮ ಚಿಂತನ ಕಾರ್ಯಗಳಿಂದಾಗಿ ಮಠದ ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದರು.ಶ್ರೀ ನಾಗಭೂಷಣ ಸ್ವಾಮಿಗಳು ತಮ್ಮ ಜೀವಿತಾವಧಿಯಲ್ಲಿಯೇ ಈಗಿನ ಶ್ರೀಗಳಾದಪೂಜ್ಯ ಶ್ರೀ ತೋಂಟದಾರ್ಯ ದೇವರುಗಳನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಂಡುಲಿಂಗೈಕ್ಯರಾದರು. ಶ್ರೀ ತೋಂಟದಾರ್ಯ ದೇವರು ಕಾಶಿಗೆ ವಿದ್ಯಾಭ್ಯಾಸಕ್ಕೆ ತೆರಳಿ ಬನಾರಸ್ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದು ಹಿಂತಿರುಗಿ ನಂತರ ಕನ್ನಡದಲ್ಲೂಸಹ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕವಾಗಿಯೂ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಶ್ರೀಮಠವನ್ನುಪೂರ್ಣ ಅಭಿವೃದ್ಧಿಗೊಳಿಸಿದ ನಂತರವಷ್ಟೇ ಪಟ್ಟಾಧಿಕಾರದ ಅನುಗ್ರಹ ಪಡೆಯುವುದೆಂದುತೀರ್ಮಾನಿಸಿ ಅದರಂತೆ ಶ್ರೀಮಠವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ತೋಂಟದಾರ್ಯ ದೇವರು
Date of Birth :
6-6-1966
Place :
ಮರೇಗುದ್ದಿ, ಜಮಖಂಡಿ ತಾ||
Photo :
Programs
ಪ್ರತಿ ಹುಣ್ಣಿಮೆಗೆ 'ಪೌರ್ಣಮಿಯ ಮಾಸಿಕ ಶಿವಾನುಭವ ಗೋಷ್ಠಿ'.
ಶ್ರಾವಣ ಮಾಸದಲ್ಲಿ ತ್ರಿಕಾಲ ಪೂಜೆ, ರುದ್ರಾಭಿಷೇಕ.
ಭಾದ್ರಪದ ಬಹುಳ ತೃತೀಯದಲ್ಲಿ ಶ್ರೀ ಮ.ನಿ.ಪ್ರ. ನಾಗಭೂಷಣ
ಮಹಾಶಿವಯೋಗಿಗಳ ಪುಣ್ಯಾರಾಧನೆ ಹಾಗೂ
ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
(ಮುಧೋಳ ತಾಲ್ಲೂಕಿನ ಬುಧನಿ ಪಿ.ಎಂ. ಶಾಖಾಮಠದಲ್ಲಿ)
ಹಾಗೂ ವಿವಿಧ ಕಾರ್ಯಕ್ರಮಗಳು.
Photos
Full Address Kannada
ಶ್ರೀ ದಿಗಂಬರೇಶ್ವರ ಸಂಸ್ಥಾನ ಮಠ
ಮರೇಗುದ್ದಿ - 587 121
ಜಮಖಂಡಿ ತಾ||, ಬಾಗಲಕೋಟೆ ಜಿ||