ಬೆಳಗಾವಿ ಜಿಲ್ಲೆಯ ಬಟಕುರ್ಕಿ ಗ್ರಾಮಕ್ಕೆ ಶ್ರೀ ಮ.ನಿ.ಪ್ರ. ಚನ್ನಬಸವಮಹಾಸ್ವಾಮಿಗಳೆಂಬುವರು ಸಂಚಾರಮೂರ್ತಿಗಳಾಗಿ ಆಗಮಿಸಿ ಸುಮಾರು 16ನೇಶತಮಾನದಲ್ಲಿ ಶ್ರೀ ವಿರಕ್ತಮಠವನ್ನು ಸ್ಥಾಪಿಸಿದ್ದು ನಂತರದಲ್ಲಿ ಶ್ರೀ ಚೌಕಿಮಠವೂ ಕೂಡಸ್ಥಾಪನೆಗೊಂಡಿದ್ದು ಪ್ರಸ್ತುತ ಎರಡೂ ಮಠಗಳು ಒಂದೇ ಆಡಳಿತದಲ್ಲಿ ನಡೆಸಲ್ಪಡುತ್ತಿದ್ದು ಈಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀ ಮ.ನಿ.ಪ್ರ ಚನ್ನಬಸವ ಮಹಾಸ್ವಾಮಿಗಳು ತಪೋನುಷ್ಠಾನಮೂರ್ತಿಗಳಾಗಿದ್ದು ಸದಾ ಸಂಚಾರದಲ್ಲಿದ್ದು ವೀರಶೈವ ಧರ್ಮಾಚರಣೆಗಳ ಮಹತ್ವವನ್ನುಈ ಭಾಗದಲ್ಲಿ ಪಸರಿಸಿದಿದ್ದಾರೆ. ಗುರುಗಳು ಬಟಕುರ್ಕಿ ಗ್ರಾಮಕ್ಕೆ ಬಂದು ನೆಲೆಸಿದ ನಂತರಇಲ್ಲಿ ದೀರ್ಘ ತಪಸ್ಸನ್ನಾಚರಿಸಿ ಪವಾಡಗಳನ್ನು ಮಾಡಿ ಭಕ್ತರನ್ನು ಜಾಗೃತಗೊಳಿಸಿ ಧಾರ್ಮಿಕಆಚರಣೆಗಳು ನಡೆಯುವಂತೆ ಮಾಡಿದ್ದರು ಎಂದು ತಿಳಿದು ಬರುತ್ತಿದೆ.ಕರ್ತೃಗುರುಗಳ ನಂತರ ಅಧಿಕಾರಕ್ಕೆ ಬಂದ ಶ್ರೀ ದೊಡ್ಡಯ್ಯ ಮಹಾಸ್ವಾಮಿಗಳುಶ್ರೀಮಠವನ್ನು ಪ್ರಚಲಿತಗೊಳಿಸಿ ಜೀವಂತ ಸಮಾಧಿಯಾಗಿದ್ದು ನಂತರದಲ್ಲಿ ಶ್ರೀ ಗದುಗಯ್ಯಮಹಾಸ್ವಾಮಿಗಳು ಅಧಿಕಾರ ನಡೆಸಿದ್ದು ತದನಂತರ ಶ್ರೀ ಚೌಕಯ್ಯ ಮಹಾಸ್ವಾಮಿಗಳುಅಧಿಕಾರಕ್ಕೆ ಬಂದಿದ್ದಾರೆ. ಶ್ರೀ ಚೌಕಯ್ಯ ಮಹಾಸ್ವಾಮಿಗಳು ಅಧಿಕಾರ ವಹಿಸಿಕೊಂಡ ನಂತರಶ್ರೀಮಠದಲ್ಲಿ ಅಭಿವೃದ್ದಿಕಾರ್ಯಗಳು ನಡೆದಿರುವಂತೆ ತೋರುತ್ತಿವೆ.ಈಗಿನ ಹಿರಿಯ ಶ್ರೀಗಳಾದ ಶ್ರೀ.ಮ.ನಿ.ಪ್ರ. ವೀರಭದ್ರ ಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡ ನಂತರ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದುಶ್ರೀಮಠವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ದಿದ್ದಾರೆ. ಶ್ರೀಗಳು ತಮ್ಮ ಧಾರ್ಮಿಕಆಚರಣೆಗಳಿಂದ ಭಕ್ತರನ್ನು ಸಂಪಾದಿಸಿಕೊಂಡು ದೀರ್ಘಕಾಲದಿಂದ ಶ್ರೀಮಠವನ್ನುಮುನ್ನಡೆಸಿಕೊಂಡು ಬರುತ್ತಿದ್ದು ಭಕ್ತರ ಪ್ರೀತಿಪಾತ್ರರಾಗಿದ್ದಾರೆ.ಈಗಿನ ಕಿರಿಯ ಶ್ರೀಗಳಾದ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು 2005ರ ಮೇ19ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದು ಹಿರಿಯ ಶ್ರೀಗಳಮಾರ್ಗದರ್ಶನದಲ್ಲಿ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಕಾರ್ತಿಕ ಮಾಸದಲ್ಲಿಲಿಂ|| ಶ್ರೀ.ಮ.ನಿ.ಪ್ರ. ಚೌಕೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ ನಡೆಸುತ್ತಿದ್ದು ದವನದಹುಣ್ಣಿಮೆ ಆದ ಐದನೇ ದಿನಕ್ಕೆ ಶ್ರೀಮಠದ ರಥೋತ್ಸವ ಜರುಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ವೀರಭದ್ರ ಸ್ವಾಮಿಗಳು
Date of Birth :
1927
Place :
ಬಟಕುರ್ಕಿ, ರಾಮದುರ್ಗ ತಾ||
Photo :
Programs
ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು
ಕಾರ್ತಿಕ ಮಾಸದಲ್ಲಿ ಲಿಂ|| ಶ್ರೀ ಮ.ನಿ.ಪ್ರ. ಚೌಕೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ
ದವನದ ಹುಣ್ಣಿಮೆ ಆದ ಐದನೇ ದಿನಕ್ಕೆ ಶ್ರೀ ಮಠದ ರಥೋತ್ಸವ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪೂಜೆ
Photos
Full Address Kannada
ಶ್ರೀ ಚೌಕಿ ಮಠ / ಶ್ರೀ ವಿರಕ್ತ ಮಠ
ಬಟಕುರ್ಕಿ - 591 123
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ