ಬಾಗಲಕೋಟೆ ನಗರವು ಒಂದು ಐತಿಹಾಸಿಕ ಸ್ಥಳವಾಗಿದ್ದು ಆಲಮಟ್ಟಿ
ಜಲಾಶಯದ ಹಿನ್ನೀರಿನಿಂದಾಗಿ ಪುನರ್ವಸತಿಗೊಂಡಿದ್ದು ನವನಗರದಲ್ಲಿ ನವಜೀನ
ಕಂಡುಕೊಳ್ಳುವತ್ತ ಚಿತ್ತ ಹರಿಸಿದೆ. ಇಂತಹ ಪುರಾತನ ವೈಶಿಷ್ಟ್ಯ ನಗರವನ್ನು ಕೇಂದ್ರವಾಗಿಟ್ಟು
ಕೊಂಡಿರುವ ಬಾಗಲಕೋಟೆ ಜಿಲ್ಲೆಯಾದ್ಯಂತ ಐತಿಹಾಸಿಕ, ಪೌರಾಣಿಕ, ಧಾರ್ಮಿಕ
ಕೇಂದ್ರಗಳೇ ಕಾಣಸಿಗುತ್ತವೆ. ಇಲ್ಲಿ 12ನೇ ಶತಮಾನಕ್ಕಿಂತಲೂ ಪೂರ್ವದಿಂದಲೇ ವೀರಶೈವ
ಧರ್ಮವು ಪ್ರಖರವಾಗಿ ಬೆಳೆದಿದ್ದು ಇಂತಹ ನಗರದ ಮದ್ಯಭಾಗದಲ್ಲಿ ಶ್ರೀ ಮಳೇಂದ್ರ ಮಹಾ
ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಚರಂತಿ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ
ಚಟುವಟಿಕೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಾ
ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವೆನಿಸಿದೆ.
ಕರ್ತೃ ಗುರುಗಳಾದ ಶ್ರೀ ಮ.ನಿ.ಪ್ರ. ಮಳೇಂದ್ರ ಮಹಾಸ್ವಾಮಿಗಳು ಮಹಾನ್
ಶಿವಯೋಗಿಗಳಾಗಿದ್ದು ತಮ್ಮ ಧಾರ್ಮಿಕ ಚಿಂತನೆಗಳ ಮೂಲಕ ಶ್ರೀಮಠವನ್ನು ಸ್ಥಾಪಿಸಿ
ಭಕ್ತರಿಗೆ ವೀರಶೈವ ಧರ್ಮದ ಆಚರಣೆಗಳ ಬಗ್ಗೆ ಉಪದೇಶಿಸುತ್ತಾ ಶ್ರೀಮಠಕ್ಕೆ ಭಕ್ತರನ್ನು
ಸೆಳೆದು ಪ್ರಸಿದ್ದ್ದಿಗೊಳಿಸಿದ್ದಾರೆ. ಕರ್ತೃಗಳ ನಂತರದ ಪರಂಪರೆಯಲ್ಲಿ ಈವರೆಗೂ ಮೂರು
ಜನ ಶ್ರೀಗಳು ಅಧಿಕಾರ ನಡೆಸಿದ್ದು ಶ್ರೀಮಠದ ಆವರಣದಲ್ಲಿ ನಾಲ್ಕು ಗದ್ದುಗೆಗಳು ಇವೆ.
ಶ್ರೀಮಠದ ಪರಂಪರೆ:-
1. ಶ್ರೀ ಮ.ನಿ.ಪ್ರ. ಮಳೇಂದ್ರ ಮಹಾಸ್ವಾಮಿಗಳು.
2. ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು
3. ಶ್ರೀ ಮ.ನಿ.ಪ್ರ. ಶಿವಮೂರ್ತಿ ಮಹಾಸ್ವಾಮಿಗಳು
4. ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳು.
ಹಿಂದಿನ ಶ್ರೀಗಳಾದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಪಂಡಿತರಾಗಿದ್ದು ತಮ್ಮ
ಧಾರ್ಮಿಕ ಚಿಂತನೆಗಳ ಮೂಲಕ ಮಠವನ್ನು ಹೆಚ್ಚು ಪ್ರಚಲಿತಗೊಳಿಸಿದ್ದಾರೆ. ಹಾಗೂ ತಮ್ಮ
ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಧರ್ಮವನ್ನು ಸಮರ್ಥವಾಗಿ
ಬೆಳೆಸಿ ಹೆಚ್ಚು ಪ್ರಖ್ಯಾತಗೊಂಡರು. ಇವರ ಕಾಲದಲ್ಲಿ ಶ್ರೀಮಠವು ಹೆಚ್ಚಿನ ಅಭಿವೃದ್ಧಿ
ಗೊಂಡಿದ್ದು ಸದಾ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಆದರೆ ಶ್ರೀಗಳ ನಂತರ ಶ್ರೀಮಠವು
ಉತ್ತಾಧಿಕಾರಿಗಳಲ್ಲಿದೆ ಮತ್ತೊಮ್ಮೆ ಖಾಲಿ ಉಳಿದದ್ದು ವಿಷಾದನೀಯ.
ತದನಂತರ ದೀರ್ಘಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆ ಉತ್ತರಾಧಿಕಾರಿಗಳಾಗಿ ಬಂದವರು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು. ಶ್ರೀಗಳು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕೆ.ಬಿದರೆ ಗ್ರಾಮದಲ್ಲಿ ಜನಿಸಿದವರಾಗಿದ್ದು
ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಂತರ ಶ್ರೀಮಠಕ್ಕೆ
ಆಗಮಿಸಿದ ಶ್ರೀಗಳು 1984ರ ಏಪ್ರಿಲ್ 16ರಂದು ಶ್ರಿಮಠದ ಅಧಿಕಾರ ವಹಿಸಿಕೊಂಡರು.
ಶ್ರೀಗಳು ಶ್ರೀಮಠಕ್ಕೆ ಬಂದಾಗ ಶ್ರೀಮಠದ ಪರಿಸ್ಥಿತಿಯು ಉತ್ತಮವಾಗಿರಲಿಲ್ಲ.
ಶ್ರೀಗಳು ತಮ್ಮ ಕ್ರಿಯಾತ್ಮಕ ಚಟುವಟಿಕೆಗಳು ಹಾಗೂ ಧಾರ್ಮಿಕ ಕ್ರಿಯಾಶೀಲತೆಯಿಂದ
ಕಡಿಮೆ ಅವಧಿಯಲ್ಲಿಯೇ ಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದರು. ಶ್ರೀಗಳು
ಶಿಥಿಲಗೊಂಡಿದ್ದ ಶ್ರೀಮಠದ ಕಟ್ಟಡವನ್ನು ಜೀರ್ಣಾಭಿವೃದ್ಧಿಗೊಳಿಸಿದರಲ್ಲದೇ ಶ್ರೀಮಠದಲ್ಲಿ
ನಿರಂತರವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಡೆಯುವ ವ್ಯವಸ್ಥೆ
ಮಾಡಿದರು. ಶ್ರೀಮಠದ ವತಿಯಿಂದ ಕಲ್ಯಾಣ ಮಂಟಪವನ್ನು ನಿರ್ಮಿಸಿ ಹೆಚ್ಚು ಆದಾಯ
ಬರುವಂತೆ ಮಾಡಿದ್ದಾರೆ. ಅಲ್ಲದೇ ಶ್ರೀಮಠದ ಆಸ್ತಿಯನ್ನು ಕಾನೂನುಬದ್ಧಗೊಳಿಸಿ ಭಕ್ತರ
ನೆರವಿನಿಂದ ಮಠವು ಶ್ರೀಮಂತ ಮಠವಾಗಿ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿ
ದ್ದಾರೆ. ಗುರುಗಳ ಕತೃತ್ವ ಶಕ್ತಿಯಿಂದ ಶ್ರೀಮಠವು ಇಂದು ಧಾರ್ಮಿಕ, ಸಾಮಾಜಿಕ ಹಾಗೂ
ಸಾಂಸ್ಕøತಿಕವಾಗಿ ಹೆಚ್ಚು ಹೆಸರು ಮಾಡಿದೆ.
ಶ್ರೀಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಲ್ಲದೇ ಶೈಕ್ಷಣಿಕವಾಗಿ ಬಡಮಕ್ಕಳ
ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜುಗಳನ್ನು ತೆರೆದು ಆ ಮೂಲಕ ಈ ಭಾಗದ ಬಡಮಕ್ಕಳ
ಸಾಮಾಜಿಕ ಮಟ್ಟವನ್ನು ಸುಧಾರಿಸುವ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀಗಳ
ಕ್ರಿಯಾಶೀಲತೆಯನ್ನು ಗುರುತಿಸಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ನಿಡಸೋಸಿ
ಗ್ರಾಮದ ಶ್ರೀ ದುರುದುಂಡೇಶ್ವರ ಮಠಕ್ಕೆÀ ಉತ್ತರಾಧಿಕಾರಿಗಳನ್ನಾಗಿ ನೇಮಿಸಲಾಗಿದ್ದು ಶ್ರೀಗಳು
ಉಭಯ ಮಠಗಳನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯ ಬಸವ
ಜಯಂತಿ ಆಚರಣೆಯನ್ನು ಆಯೋಜಿಸಲಾಗುತ್ತಿದ್ದು ಆ ಮೂಲಕ ಜನರಲ್ಲಿನ ಮೌಢ್ಯಗಳ
ನಿವಾರಣೆಗೆ ಶ್ರೀಮಠವು ಶ್ರಮಿಸುತ್ತಲಿದೆ. ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ
ಪ್ರವಚನ ಕಾರ್ಯಕ್ರಮಗಳು, ಶಿವರಾತ್ರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮುಂತಾದ