Shree Charanti Matha

Shree Charanti Matha

ಶ್ರೀ ಚರಂತಿಮಠ

Average Reviews

Description

ಶ್ರೀ ಚರಂತಿಮಠ, ಕೆರೂರು

ಕರ್ತೃ – ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ಐತಿಹಾಸಿಕ ಹಾಗೂಸಾಂಸ್ಕøತಿಕವಾಗಿ ಪ್ರಸಿದ್ದಿ ಪಡೆದಿದ್ದು ಇಲ್ಲಿನ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಇಂತಹಬಾದಾಮಿಯಿಂದ 22 ಕಿ.ಮೀ. ದೂರದಲ್ಲಿರುವ ಕೆರೂರು ಗ್ರಾಮದಲ್ಲಿ ಪುರಾತನಕಾಲದ್ದೆಂದು ಹೇಳಲಾದ ಶ್ರೀ ಗದ್ದುಗಯ್ಯ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರಬಹುದಾದ ಶ್ರೀ ಚರಂತಿ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀಮಠವು ಕಾಶಿಪೀಠದ ಶಾಖಾಮಠವಾಗಿದ್ದುಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ .ಶ್ರೀಮಠವು ಪುರಾತನ ಕಾಲದ್ದೆಂದು ಹೇಳಲಾದರೂ ಶ್ರೀಮಠದ ಹಾಗೂಗುರುಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಹಾಗೂ ಕರ್ತೃಗುರುಗಳಬಗ್ಗೆಯೂ ಸ್ಪಷ್ಟತೆಯಿಲ್ಲದೆ ರೂಢಿಗತವಾಗಿ ಭಕ್ತರಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಶ್ರೀಗದ್ದುಗಯ್ಯ ಸ್ವಾಮಿಗಳನ್ನೇ ಕರ್ತೃಗುರುಗಳಿರಬಹುದೆಂದು ನಿರ್ಣಯಿಸಬಹುದು.ಶ್ರೀಗಳ ನಂತರದ ಪರಂಪರೆಯ ಬಗ್ಗೆಯೂ ಸ್ಪಷ್ಟತೆಯಿಲ್ಲದಿರುವುದು ಬೇಸರದಸಂಗತಿ. ತೀರಾ ಇತ್ತೀಚೆಗೆ ಆಡಳಿತ ನಡೆಸಿದ ಹಿಂದಿನ ಶ್ರೀಗಳಾದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮಿಗಳ ಬಗ್ಗೆ ಮಾತ್ರ ಮಾಹಿತಿ ಲಭ್ಯವಿದೆ. ಶ್ರೀ ಸಿದ್ದಲಿಂಗ ಸ್ವಾಮಿಗಳುಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಶ್ರೀಗಳ ಐಕ್ಯಾನಂತರ ಮಠ ಮತ್ತೆ ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಪಟ್ಟಾಧಿಕಾರ ವಹಿಸಿಕೊಂಡ ನಂತರ ಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ದಿ ಕಂಡಿದೆ.ಶ್ರೀಗಳು ಮಹಾನ್ ವಿದ್ವಾಂಸರಾಗಿದ್ದು ಶಿವಯೋಗ ಮಂದಿರ, ಬೆಂಗಳೂರು ಮತ್ತುಕಾಶಿಯಲ್ಲಿ ಅಭ್ಯಸಿಸಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಸಂಸ್ಕøತದಲ್ಲಿಸ್ನಾತಕೋತ್ತರ ಪದವಿ ಪಡೆದು ನಂತರ “ವಚನ ಮತ್ತು ಉಪನಿಷತ್ತು – ಒಂದು ತೌಲನಿಕಅಧ್ಯಯನ” ಎಂಬ ವಿಷಯದ ಮೇಲೆ ಪಿ.ಎಚ್.ಡಿ. ಪಡೆದಿದ್ದಾರೆ. ಶ್ರೀಗಳು ಮಠದ ಅಧಿಕಾರವಹಿಸಿಕೊಂಡು ಧಾರ್ಮಿಕ ಚಟುವಟಿಕೆಗಳನ್ನು ಮುಂದುವರಿಸಿರುವುದಲ್ಲದೇ ಶ್ರೀಮಠದಹಳೆಯ ಕಟ್ಟಡ ತೆಗಿಸಿ ನೂತನ ಕಟ್ಟಡ ನಿರ್ಮಿಸಿ ಅಭಿವೃದ್ದಿ ಪಡಿಸುತ್ತಿದ್ದಾರೆ .

Swamiji

Swamiji Name :
ಶ್ರೀ ಷ.ಬ್ರ. ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು
Date of Birth :
20-5-1966
Place :
ಕೆರೂರು, ಬಾದಾಮಿ ತಾ||
Pattadikara :
12-5-1994
Photo :

Programs

ಶಿವರಾತ್ರಿ ದಿನದಂದು ವಿಶ್ವಾರಾದ್ಯರ ಜಯಂತಿ
ನವರಾತ್ರಿಗೆ ಶ್ರೀದೇವಿ ಆರಾಧನೆ ಮತ್ತು ಪುರಾಣ ಪ್ರವಚನ
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ವಿದ್ಯಾರ್ಥಿ ನಿಲಯ

Full Address Kannada

ಶ್ರೀ ಚರಂತಿಮಠ ಕೆರೂರು - 587 206
ಬಾದಾಮಿ ತಾ||, ಬಾಗಲಕೋಟೆ ಜಿ||

Map

Near by Places

ಗದ್ದನಕೇರಿ - 20 ಕಿ.ಮೀ
ಬಾದಾಮಿ - 22 ಕಿ.ಮೀ.
ಬಾಗಲಕೋಟೆ - 30 ಕಿ.ಮೀ.

Statistic

26 Views
0 Rating
0 Favorite
0 Share
error: Content is protected !!