Shree Charamurteshwara Matha

Shree Charamurteshwara Matha Claimed

ಶ್ರೀ ಚರಮೂರ್ತೇಶ್ವರ ಮಠ

Average Reviews

Description

ಶ್ರೀ ಚರಮೂರ್ತೇಶ್ವರ ಮಠ

ಕರ್ತೃ – ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು

ಗುರುಗುಂಟಾ ಗ್ರಾಮದಲ್ಲಿ ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಚರಮೂರ್ತೇಶ್ವರ ಮಠವು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಭಾಗದ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ. ಕರ್ತೃಗುರುಗಳುˉÉೂೀಕಸಂಚಾರ ಕೈಗೊಂಡು ಗುರುಗುಂಟಾ ಗ್ರಾಮದ ಹೊರಭಾಗದಲ್ಲಿ ಕಲ್ಲಿನಿಂದಆವೃತಗೊಂಡ ಗುಡ್ಡದ ಪ್ರದೇಶದಲ್ಲಿ ಅನುಷ್ಠಾನಕ್ಕೆ ಕುಳಿತಿರುವ ವಿಚಾರವನ್ನು ತಿಳಿದುಕೊಂಡಈ ಭಾಗದ ದೊರೆಯು ಗುರುಗಳ ಆಶೀರ್ವಾದ ಪಡೆದು ಗುರುಗಳ ಮಹಿಮೆಯನ್ನು ಅರಿತುಗುರುಗಳಿಗೋಸ್ಕರ ಶ್ರೀಮಠವನ್ನು ಸ್ಥಾಪಿಸಿ ಧಾರ್ಮಿಕ ಆಚರಣೆಗಳಿಗೆ ವ್ಯವಸ್ಥೆ ಮಾಡಿದನು.ಅಂದಿನಿಂದ ಇಂದಿನವರೆಗೂ ಶ್ರೀಮಠವು ಬೆಳೆದು ಬಂದಿದ್ದು ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಾ ಬಂದಿದೆ.ಶ್ರೀಮಠದ ಪರಂಪರೆಯಲ್ಲಿ ಒಟ್ಟು 7 ಜನ ಶ್ರೀಗಳು ಅಧಿಕಾರ ನಡೆಸಿದ್ದು ಈಗಿನಶ್ರೀಗಳು 8ನೆಯವರೆಂದು ಹೇಳˉÁಗಿದೆ. ಶ್ರೀಮಠದ ಆವರಣದಲ್ಲಿ 4 ಗದ್ದುಗೆಗಳು ಹಾಗೂರಾಯಚೂರಿನ ಶಾಖಾಮಠದಲ್ಲಿ ಒಂದು ಗದ್ದುಗೆಯು ನಿರ್ಮಾಣಗೊಂಡಿದ್ದು ಉಳಿದಗದ್ದುಗೆಗಳು ಎಲ್ಲಿವೆ ಎಂದು ತಿಳಿದು ಬಂದಿಲ್ಲ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ವಿರೂಪಾಕ್ಷಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕ ಆಚರಣೆಗಳಮೂಲಕ ಭಕ್ತರಿಗೆ ಸನ್ಮಾರ್ಗ ತೋರಿದ್ದಾರೆ. ಇವರ ನಂತರ ಸುಮಾರು ಮೂರು ದಶಕಗಳಕಾಲ ಮಠವು ಖಾಲಿ ಉಳಿದು ನಂತರ 1996ರ ಫೆಬ್ರವರಿ 26ರಲ್ಲಿ ಗ್ರಾಮದ ಭಕ್ತರು ಶ್ರೀಷ.ಬ್ರ. ಸದಾನಂದ ಶಿವಾಚಾರ್ಯ ಸ್ವಾಮಿಗಳನ್ನು ಅಧಿಕಾರಕ್ಕೆ ತಂದಿದ್ದಾರೆ.ಶ್ರೀಗಳು ಕ್ರಿಯಾಶೀಲರಾಗಿದ್ದು ಖಾಲಿ ಉಳಿದಿದ್ದ ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿ, ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಶ್ರೀಗಳು ಶ್ರೀಮಠದಲ್ಲಿರುವ ಗದ್ದುಗೆಗಳನ್ನುನವೀಕರಿಸಿ ನಿತ್ಯಪೂಜೆಗೆ ಒಳಪಡಿಸಿದ್ದು ಶ್ರಾವಣ ಮಾಸದಲ್ಲಿ ಅನುಷ್ಠಾನ ಕೈಗೊಳ್ಳುತ್ತಾರೆ.ಹಾಗೂ ಕಾರ್ತೀಕ ಮಾಸದಲ್ಲಿ ನಿತ್ಯ ಆಧ್ಯಾತ್ಮ ಪ್ರವಚನಗಳನ್ನು ನಡೆಸುವುದರ ಜೊತೆಯಲ್ಲಿಸಾಮೂಹಿಕ ವಿವಾಹಗಳನ್ನು ನಡೆಸುತ್ತಾರೆ. ಶ್ರೀಗಳು ಸ್ವತಃ ಆಯುರ್ವೇದ ಪಂಡಿತರಾಗಿದ್ದುಗಿಡಮೂಲಿಕೆಗಳಿಂದ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಸದಾನಂದ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1979
Place :
ಗುರುಗುಂಟಾ, ಲಿಂಗಸೂಗೂರು ತಾ||
Pattadikara :
26-2-1996
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಶ್ರೀಗಳ ಅನುಷ್ಠಾನ. ಕಾರ್ತೀಕ ಮಾಸದಲ್ಲಿ ನಿತ್ಯ ಆಧ್ಯಾತ್ಮ ಪ್ರವಚನ ಹಾಗೂ ಸಾಮೂಹಿಕ ವಿವಾಹಗಳು. ನವಮಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಚರಮೂರ್ತೇಶ್ವರ ಮಠ ಗುರುಗುಂಟಾ - 584 139 ಲಿಂಗಸೂಗೂರು ತಾ||, ರಾಯಚೂರು ಜಿ||

Map

Near by Places

ತಿಂಥಿಣಿ ಬ್ರಿಡ್ಜ್ - 10 ಕಿ.ಮೀ. ಲಿಂಗಸೂಗೂರು - 18 ಕಿ.ಮೀ. ರಾಯಚೂರು - 100 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!