ಕರ್ತೃ – ಶ್ರೀ ಮ.ನಿ.ಪ್ರ. ಮುರುಘ ರಾಜೇಂದ್ರ ಮಹಾಸ್ವಾಮಿಗಳು
ಮೈಸೂರು ಜಿˉÉ್ಲ ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಗ್ರಾಮದಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಬಸವಕೇಂದ್ರ ಮುರುಘಾ ಮಠವು ಚಿತ್ರದುರ್ಗದಶ್ರೀ ಮುರುಘರಾಜೇಂದ್ರ ಬೃಹನ್ಮಠದ ಶಾಖಾಮಠವಾಗಿ ಬೆಳೆದು ಬಂದಿದೆ. ಸುಮಾರು1927ರಲ್ಲಿ ಶ್ರೀ ಜಯದೇವ ಜಗದ್ಗುರುಗಳು ಇದೇ ಸ್ಥಳದಲ್ಲಿ ಅನುಷ್ಠಾನ ಕೈಗೊಂಡಿದ್ದರೆಂದುತಿಳಿದು ಬರುತ್ತಿದ್ದು ತದನಂತರ ಇಲ್ಲಿ ಮಠ ಸ್ಥಾಪನೆಯಾಯಿತು.ಶ್ರೀ ಜಯದೇವ ಜಗದ್ಗುರುಗಳು ಇಲ್ಲಿ ಅನುಷ್ಠಾನ ಕೈಗೊಂಡಿದ್ದ ಪೂರ್ವದˉÉ್ಲೀಇಲ್ಲಿ ಮಠವಿತ್ತು ಎಂದು ಕೂಡ ಹೇಳˉÁಗುತ್ತಿದ್ದು ಸ್ಪಷ್ಟತೆಯಿಲ್ಲ. ಶ್ರೀಮಠದ ಪ್ರಥಮಗುರುಗಳಾದ ಶ್ರೀ ಮ.ನಿ.ಪ್ರ. ಮುರುಘ ರಾಜೇಂದ್ರ ಮಹಾಸ್ವಾಮಿಗಳು ಅಧಿಕಾರ ನಡೆಸಿದ್ದುಶ್ರೀಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡುಬಂದಿದ್ದು 1956ರಲ್ಲಿ ಲಿಂಗೈಕ್ಯರಾಗಿದ್ದಾರೆ. ಆದರೆ ಇವರ ಕಾˉÁ ನಂತರ ಶ್ರೀಮಠವು 40ವರ್ಷಗಳ ಕಾಲ ಖಾಲಿ ಉಳಿದಿದ್ದು ಆ ಸಮಯದಲ್ಲಿ ಗ್ರಾಮಸ್ಥರೇ ಪೂಜಾ ಕಾರ್ಯಗಳನ್ನುನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮೋಕ್ಷಪತಿ ಮಹಾಸ್ವಾಮಿಗಳನ್ನು 1994ರಆಗಸ್ಟ್ 17ರಲ್ಲಿ ಚಿತ್ರದುರ್ಗದ ಮುರುಘಾ ಶರಣರು ಶ್ರೀಮಠಕ್ಕೆ ನೇಮಿಸಿ ನಂತರ 1995ರಜನವರಿ 20ರಂದು ಪಟ್ಟಾಧಿಕಾರದ ಅನುಗ್ರಹ ನೀಡಿದರು. ಶ್ರೀ ಮೋಕ್ಷಪತಿಮಹಾಸ್ವಾಮಿಗಳು ಅಧಿಕಾರಕ್ಕೆ ಬಂದ ನಂತರ ಶ್ರೀಮಠದ ಧಾರ್ಮಿಕ ಆಚರಣೆಗಳುಚುರುಕುಗೊಂಡಿದ್ದು ಭಕ್ತ ಸಮೂಹ ಮಠದತ್ತ ಹರಿದು ಬರುತ್ತಿದೆ. ಶ್ರೀ ಮೋಕ್ಷಪತಿಸ್ವಾಮಿಗಳು 1999-2000ರಲ್ಲಿ ಶ್ರೀ ಮುರುಘರಾಜೇಂದ್ರ ಗ್ರಾಮೀಣ ಅಭಿವೃದ್ದಿ & ಶೈಕ್ಷಣಿಕಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ ಹಾಗೂ 2012ರಲ್ಲಿ ಸಮಸ್ತ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಜೀರ್ಣೋದ್ದಾರ ಮಾಡಿದ್ದಾರೆ.ಶ್ರೀಮಠದ ಕರ್ತೃ ಗದ್ದುಗೆಯು ಮಠದˉÉ್ಲೀ ಇದ್ದು ಶ್ರೀಗಳು ಅದನ್ನುಅಭಿವೃದ್ದಿಪಡಿಸಿ ನಿತ್ಯ ಪೂಜೆಗೆ ಒಳಪಡಿಸಿದ್ದಾರೆ. ಶ್ರೀಮಠದ ವತಿಯಿಂದ ಪ್ರತಿ ತಿಂಗಳುಶರಣ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡು ನಾಡಿನ ಅನೇಕ ವಿದ್ವಾಂಸರನ್ನು ಕರೆಸಿಉಪನ್ಯಾಸ ಕೊಡಿಸಿ ಗೌರವಿಸಿ ಕಳುಹಿಸಿಕೊಡˉÁಗುತ್ತಿದೆ. ಸಾಹಿತ್ಯ, ಸಾಂಸ್ಕøತಿಕ, ವೈಚಾರಿಕತೆಮತ್ತು ಪರಿಸರದ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸಿರುವ ಗುರುಗಳು ವರ್ಷದಿಂದ ವರ್ಷಕ್ಕೆಶ್ರೀಮಠವನ್ನು ಹೆಚ್ಚಿನ ಅಭಿವೃದ್ದಿಗೊಳಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮೋಕ್ಷಪತಿ ಮಹಾಸ್ವಾಮಿಗಳು
Date of Birth :
12-12-1958
Place :
ಈಚಘಟ್ಟ, ಹೊಳˉÉ್ಕರೆ ತಾ||
Pattadikara :
20-01-1995
Photo :
Programs
ಪ್ರತಿ ತಿಂಗಳ 20ನೇ ತಾರೀಖು "ಶರಣ ಸಂಗಮ" ಕಾರ್ಯಕ್ರಮ
ಫೆಬ್ರುವರಿ ಹಾಗೂ ಸದ್ಭಾವನ ಪಾದಯಾತ್ರೆ"
ದೀಪಾವಳಿ ಅಮವಾಸ್ಯೆ ದಿವಸ ಮಹಾದೇಶ್ವರ ಉತ್ಸವ & ಮಹಾಪ್ರಸಾದ
ಬಸವ ಜಯಂತಿ
Institutions
ಕಿರಿಯ / ಹಿರಿಯ ಪ್ರಾಥಮಿಕ ಜಿಲ್ಲೆ
Photos
Full Address Kannada
ಶ್ರೀ ಬಸವಕೇಂದ್ರ ಮುರುಘಾಮಠ
ರಾವಂದೂರು - 571 108
ಪಿರಿಯಾಪಟ್ಟಣ ತಾ||, ಮೈಸೂರು ಜಿಲ್ಲೆ