ತುಮಕೂರು ತಾಲ್ಲೂಕಿನ ಚಿಕ್ಕತೊಟ್ಲುಕೆರೆ ಗ್ರಾಮದಿಂದ 2 ಕಿ.ಮೀ. ಅಂತರದಲ್ಲಿಗುಡ್ಡ-ಬೆಟ್ಟಗಳ ತಪ್ಪಲಿನಲ್ಲಿ ಸುಂದರ ಪ್ರಕೃತಿ ತಾಣದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಅಟವೀಸ್ವಾಮಿ ಮಠವು ಜಂಗಮ ಸುಕ್ಷೇತ್ರವೆಂದೇ ಹೆಸರಾಗಿದೆ. ಶ್ರೀ ಕ್ಷೇತ್ರಕ್ಕೆ ಶ್ರೀ ಓಂಕಾರಕೆ ್ಷೀತ ್ರವೆಂತಲೂ ಕರೆಯಲಾಗುತ ್ತದೆ. ಸುಮಾರು 600 ವರ್ಷಗಳ ಹಿಂದೆಸ್ಥಾಪಿತಗೊಂಡಿದೆಯೆಂದು ಹೇಳಲಾಗುವ ಶ್ರೀ ಮಠದ ಸ್ಥಾಪಕ ಗುರುಗಳು ಶ್ರೀ ಮ. ನಿ. ಪ್ರ.ಓಂಕಾರ ಮಹಾಸ್ವಾಮಿಗಳು.ಶ್ರೀ ಓಂಕಾರ ಸ್ವಾಮಿಗಳು ಆಂಧ್ರಪ್ರದೇಶದ ಉರುವಕೊಂಡ ಗವಿಮಠದಜಗದ್ಗುರು ಶ್ರೀ ಶ್ರೀ ಕರಿಬಸವ ಮಹಾಸ್ವಾಮಿಗಳವರ ನೆಚ್ಚಿನ ವರಕರಸಂಜಾತರು. ಗುರುಗಳಸೇವೆಯಲ್ಲಿ ಪರಿಪಕ್ವಗೊಂಡಿದ್ದ ಶ್ರೀಗಳು ಚಿಕ್ಕತೊಟ್ಲುಕೆಗೆ ಗ್ರಾಮದ ಹೊರವಲಯದ ಬೆಟ್ಟಗಳಸಾಲಿನ, ದಟ್ಟಡವಿಯಿಂದ ಕೂಡಿದ ಪ್ರಶಾಂತ ಪ್ರದೇಶಕ್ಕೆ ಮನಸೋತು ಇಲ್ಲಿಯೇಅನುಷ್ಟಾನಗೊಳ್ಳುತ್ತಾರೆ. ತಮ್ಮ ತಪೆÇೀಶಕ್ತಿಯಿಂದ ಈ ಪ್ರದೇಶವನ್ನು ಬೆಳಗಿದ ಶ್ರೀಗಳಿಗೆಅಪಾರ ಭಕ್ತಸಮೂಹ ರೂಡಿಗೊಂಡಿತ್ತು. ತಮ್ಮ ಹಠಯೋಗ – ಶಿವಯೋಗಗಳಿಂದವಜ್ರಕಾಠಿಣ್ಯದ ಸಾಮಥ್ರ್ಯವನ್ನು ಹೊಂದಿದ್ದ ಶ್ರೀಗಳ ಗದ್ದುಗೆಯು ಅತ್ಯಂತಪೂಜ್ಯನೀಯವಾಗಿದ್ದು ಮಹಿಮೆಯುಳ್ಳದ್ದಾಗಿದೆ.ಕರ್ತೃ ಗುರುಗಳ ನಂತರ ಶ್ರೀ ಕ್ಷೇತ್ರದಲ್ಲಿ ತಮ್ಮ ಲೀಲೆಗಳನ್ನು ಮೆರೆದವರು ಶ್ರೀ ಮ.ನಿ. ಪ್ರ. ಸ್ವ. ಜಡೆಯ ಶಾಂತ ಬಸವ ಶಿವಯೋಗಿಗಳು. ಶ್ರೀಗಳು ತಮ್ಮ ತಪೋಬಲದೊಂದಿಗೆಅಷ್ಟಸಿದ್ದಿಗಳನ್ನು ಸಿದ್ದಿಸಿಕೊಂಡವರಾಗಿದ್ದು, ಚಾಡಿ-ಮಂತ್ರ, ಮಾಟ ಮುಂತಾದ ದುಷ್ಟವಿದ್ಯೆಗಳು, ಭೂತಗಳು ಅವರ ದೃಷ್ಟಿಗೆ ನಾಶವಾಗುತ್ತಿದ್ದವಂತೆ. ಇಷ್ಟೆಲ್ಲಾ ಸಿದ್ದಿ ಪಡೆದಿದ್ದಶ್ರೀಗಳ ಜಡೆಗಳು ಪಾದದವರೆಗೂ ಬೆಳೆದಿದ್ದು, ಎಂದೂ ತಮ್ಮ ಶಾಂತತೆಯನ್ನು ಶ್ರೀಗಳುಕಳೆದುಕೊಳ್ಳದೇ ಬಂದ ಭಕ್ತರ ಸಮಸ್ಯೆಗಳನ್ನು ನಿವಾರಿಸುತ್ತಿದ್ದರಿಂದ ಇವರಿಗೆ ಭಕ್ತರು ಶ್ರೀಜಡೆಯ ಶಾಂತ ಬಸವ ಶಿವಯೋಗಿಗಳೆಂದು ಕರೆದರೆಂದು ಪ್ರತೀತಿಯುಂಟು. ಇಂದಿಗೂಶ್ರೀಗಳ ಗದ್ದುಗೆಯೂ ಭೂತಬಾಧೆ ಮೋಡಿ, ಮಾಟ, ಮಂತ್ರಗಳ ನಾಶ ಮಾಡುತ್ತದೆಂದುಭಕ್ತರು ನಂಬಿದ್ದಾರೆ.ಕರ್ನಾಟಕದ ಉತ್ತರದಲ್ಲಿ ಅಂಕಲಗಿ ಎಂಬ ಸುಕ್ಷೇತ್ರವಿದ್ದು ಅಲ್ಲಿ ಶ್ರೀ ಮ. ನಿ. ಪ್ರ.ಅಟವೀ ಮಹಾಸ್ವಾಮಿಗಳು ಮೆರೆದು ಜೀವಂತ ಸಮಾದಿಗೊಂಡು ಪವಾಡ ರೂಪದಲ್ಲಿ ಆಡಿಗ್ರಾಮದಲ್ಲಿ ಕಾಣಿಸಿಕೊಂಡು ಅಲ್ಲಿಂದ ಗುಬ್ಬಿ-ಚಿಕ್ಕತೊಟ್ಲುಕೆರೆ ಪ್ರದೇಶಕ್ಕೆ ಬಂದುನೆಲೆನಿಂತರೆಂಬ ಜಾನಪದ ಕಥೆ ಪ್ರಚಲಿತದಲ್ಲಿದ್ದು. ಈ ಶ್ರೀಗಳು ಚನ್ನಬಸವಣ್ಣನವರಶಿಷ್ಯರಾಗಿದ್ದು 777 ವರ್ಷಗಳ ಕಾಲ ಬಾಳಿ ಭಕ್ತರ ಪಾಲಿನ ದೇವರಾಗಿ, ಚಿಕ್ಕತೊಟ್ಲುಕೆರೆಯಲ್ಲಿನಿರ್ವಿಕಲ್ಪ ಸಮಾದಿ ಹೊಂದಿದರೆಂದು ಹೇಳಲಾಗಿದೆ.ಶ್ರೀ ಮ. ನಿ. ಪ್ರ. ಅಟವೀ ಮಹಾಶಿವಯೋಗಿಗಳು ನಾಡಿನಾದ್ಯಂತ ಸಂಚರಿಸುತ್ತಾಗುಬ್ಬಿ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿನ ಚನ್ನಬಸವ ಗದ್ದುಗೆಯ ಪರಿಚರ್ಯದಲ್ಲಿದ್ದು ಶ್ರೀ ತೊರೆಮಠವನ್ನು ಸ್ಥಾಪಿಸಿದರೆಂದು ತಿಳಿದು ಬರುತ್ತದೆ. ಶ್ರೀಗಳು ಗುಬ್ಬಿ ಕ್ಷೇತ್ರದಲ್ಲಿ ಅನೇಕಪವಾಡಗಳನ್ನು ಮೆರೆದು ಶ್ರೀ ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿದರು. ಅಲ್ಲಿನ ಗುರುಗಳಾದ ಶ್ರೀಸಿದ್ದಲಿಂಗ ಸ್ವಾಮಿಗಳ ಭಿನ್ನವದಂತೆ, ಅಲ್ಲಿಯೇ ಕೆಲಕಾಲ ನೆಲೆನಿಂತು ಸಂಸ್ಕøತ ವೇದಪಾಠಶಾಲೆಯನ್ನು ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗಾಗಿ ಪ್ರಪ್ರಥಮವಾಗಿ ದಾಸೋಹವನ್ನುಪ್ರಾರಂಭಿಸಿ ಆ ದಾಸೋಹದ ಹೊಲೆಯ ಬೆಂಕಿ ಎಂದಿಗೂ ಆರದಿರಲೆಂದುಆಶೀರ್ವದಿಸಿದರಂತೆ. ಅದರಂತೆ ಇಂದು ಸಿದ್ದಗಂಗಾ ಕ್ಷೇತ್ರವು ಮಹಾದಾಸೋಹದಕೇಂದ್ರವಾಗಿ ಹೆಸರಾಗಿದೆ.ಸಿದ್ದಗಂಗೆಯಿಂದ ಶ್ರೀ ಓಂಕಾರ ಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳು ಚಿಕ್ಕತೊಟ್ಲುಕೆರೆಯಜಂಗಮ ಸುಕ್ಷೇತ್ರದಲ್ಲಿಯೇ ಚಿರಂತನವಾಗಿ ನೆಲೆಸಿದರು. ಬಸವಾದಿ ಶರಣರಸಂದೇಶಗಳನ್ನು ಪಸರಿಸುತ್ತಾ, ಭಕ್ತರ ಜಾಗೃತಿಗಾಗಿ ಅನೇಕ ಲೀಲೆಗಳನ್ನು ಮೆರೆದರು.ದರ್ಶನಾಶೀರ್ವಾದಗಳಿಂದ ಭಕ್ತರ ಕುಂದು ಕೊರತೆಗಳನ್ನು ದೂರಗೊಳಿಸುತ್ತಾ ಅವರನ್ನುಭಕ್ತಿ ಮಾರ್ಗದಲ್ಲಿ ಕೊಂಡೊಯ್ದ ಶ್ರೀಗಳು ಶ್ರೀ ಗುಬ್ಬಿ ಕ್ಷೇತ್ರ, ಶ್ರೀ ಸಿದ್ದಗಂಗಾ ಕ್ಷೇತ್ರ,ಚಿಕ್ಕತೊಟ್ಲುಕೆರೆಯ ಶ್ರೀ ಓಂಕಾರ ಕ್ಷೇತ್ರಗಳೆಲ್ಲವನ್ನು ಅಭಿವೃದ್ಧಿ ಪಡಿಸಿದ್ದಾರೆ. ಕೊನೆಯಲ್ಲಿ ಕ್ರಿ.ಶ.1901 ಕಾರ್ತೀಕ ಮಾಸ ಶುಕ್ಲ ಪಕ್ಷದ ದಶಮಿಯ ದಿವಸ ಚಿಕ್ಕತೊಟ್ಲುಕೆರೆಯ ಶ್ರೀ ಓಂಕಾರಕ್ಷೇತ್ರದಲ್ಲಿಯೇ ನಿರ್ವಿಕಲ್ಪ ಸಮಾದಿ ಹೊಂದಿದ್ದು ಅಂದಿನಿಂತ ಶ್ರೀ ಕ್ಷೇತ್ರವನ್ನು ಶ್ರೀ ಅಟವೀಜಂಗಮ ಸುಕ್ಷೇತ್ರವೆಂದೇ ಕರೆಯಲಾಗುತ್ತಿದೆ.ಶ್ರೀ ಅಟವೀ ಸ್ವಾಮಿಗಳು ನಿರ್ವಿಕಲ್ಪ ಸಮಾದಿ ಹೊಂದಿದ ಸಂದರ್ಭದಲ್ಲಿಗುರುಗಳ ಕರಸಂಜಾತರಾದ ಶ್ರೀ ಮ. ನಿ. ಪ್ರ. ಅಟವೀ ಸಿದ್ದಲಿಂಗ ಸ್ವಾಮಿಗಳು ಶ್ರೀ ಅಟವೀಶಿವಯೋಗಿಗಳಿಂದ ಅನುಗ್ರಹ ಪಡೆದು ಶ್ರೀ ಅಟವೀ ಸ್ವಾಮಿ ಮಠದ ಅಧಿಕಾರನಡೆಸುತ್ತಿದ್ದರು. ಗುರುಗಳ ಆಶೀರ್ವಾದ ಬಲದಿಂದ ಶ್ರೀ ಕ್ಷೇತ್ರವನ್ನು ಸಮರ್ಥವಾಗಿಮುನ್ನಡೆಸಿದ ಶ್ರೀಗಳು 1950ರಲ್ಲಿ ಲಿಂಗದಲ್ಲಿ ಬೆರೆತರು. ಅಲ್ಲಿಂದ ಮುಂದೆ ಐದು ದಶಕಗಳಕಾಲ ಶ್ರೀ ಮಠವು ಖಾಲಿ ಉಳಿದಿದ್ದು 2000ದ ಫೆಬ್ರವರಿ 14ರಂದು ಶ್ರೀ ಕ್ಷೇತ್ರದ ಅಧಿಕಾರಕ್ಕೆಬಂದವರು ಈಗಿನ ಶ್ರೀಗಳಾದ ಶ್ರೀ ಮ. ನಿ. ಪ್ರ. ಸ್ವ. ಅಟವೀ ಶಿವಲಿಂಗ ಮಹಾಸ್ವಾಮಿಗಳು.ಶ್ರೀಗಳೂ ಕೂಡ ಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀ ಮಠವನ್ನು ಸಮರ್ಥವಾಗಿಮುನ್ನಡೆಸುತ್ತಿದ್ದು ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.
Swamiji
Swamiji Name :
ಶ್ರೀ ಮ. ನಿ. ಪ್ರ. ಸ್ವ. ಅಟವೀ ಶಿವಲಿಂಗ ಮಹಾಸ್ವಾಮಿಗಳು
Date of Birth :
19-02-1947
Place :
ಸಾಸನೂರು, ಬಸವನಬಾಗೇವಾಡಿ ತಾ||
Pattadikara :
14-02-2000
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ ಮತ್ತು "ಅಂಗೈಯಲ್ಲಿ ಅನುಭವ ಗೋಷ್ಠಿ" ಕಾರ್ಯಕ್ರಮ ಮಕರ ಸಂಕ್ರಾಂತಿಗೆ ಶ್ರೀ ಮಠದ ಜಾತ್ರೆ ಬಸವ ಜಯಂತಿ ಆಚರಣೆ ಆಷಾಡ ಮಾಸದಲ್ಲಿ ನಿತ್ಯ ಶ್ರೀಗಳ ಪ್ರವಚನ (ತುಮಕೂರಿನಲ್ಲಿ) ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಮತ್ತು ಧನುರ್ಮಾಸದಲ್ಲಿ ಸಾಮೂಹಿಕವಾಗಿ ವಿದ್ಯಾರ್ಥಿಗಳಿಗೆ ಪೂಜಾ ತರಬೇತಿ ಕಾರ್ತೀಕ ಶುದ್ಧ ದಶಮಿಯಂದು ಲಿಂಗೈಕ್ಯ ಶ್ರೀ ಮ.ನಿ.ಪ್ರ. ಅಟವೀ ಮಹಾಸ್ವಾಮಿಗಳ ಪುಣ್ಯಾರಾಧನೆ
Institutions
ಸಂಸ್ಕøತ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ವಿದ್ಯಾರ್ಥಿ ನಿಲಯ ಗೋಶಾಲೆ
Photos
Full Address Kannada
ಶ್ರೀ ಅಟವೀ ಸ್ವಾಮಿ ಮಠ ಚಿಕ್ಕತೊಟ್ಲುಕೆರೆ - 572 128 ತುಮಕೂರು ತಾ|| & ಜಿಲ್ಲೆ