ವಿರಾಜಪೇಟೆ ತಾಲ್ಲೂಕು ಕೇಂದ್ರದಿಂದ ಕೇವಲ 7 ಕಿ.ಮೀ. ದೂರದಲ್ಲಿರುವಅರಮೇರಿ ಗ್ರಾಮದ ಹೊರವಲಯದ ತೋಟದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಅರಮೇರಿಕಳಂಚೇರಿ ಮಠವು ಈ ಭಾಗದಲ್ಲಿ ವೀರಶೈವ ಧರ್ಮ ಹಾಗೂ ಧರ್ಮದತತ್ತ್ವಾಚರಣೆಗಳನ್ನು ಪ್ರಚುರಪಡಿಸುತ್ತಿದೆ. ವಿರಕ್ತ ಸಂಪ್ರದಾಯದಲ್ಲಿ ಬೆಳೆದು ಬಂದಿರುವಶ್ರೀಮಠದ ಕರ್ತೃಗುರುಗಳು ಶ್ರೀ ಮ.ನಿ.ಪ್ರ.ಸ್ವ. ಸೋಮಶೇಖರ ಮಹಾಸ್ವಾಮಿಗಳು.ಆಂಗ್ಲರಿಂದಲೇ ಶ್ಲಾಘಿಸಲ್ಪಟ್ಟಿದ್ದ ಶ್ರೀಮಾನ್ ಮಹಾರಾಜ ಲಿಂಗರಾಜಒಡೆಯರ್ರವರು ತಮ್ಮ ತಂಗಿ ನೀಲಮ್ಮಾಜಿಗೆ ಪ್ರಾಪ್ತವಾದ ಅಕಾಲ ವೈದವ್ಯದಿಂದ ಆಕೆಯಮನಸ್ಸನ್ನು ಆಧ್ಯಾತ್ಮಿಕದತ್ತ ತಿರುಗಿಸಿ ಮಿಕ್ಕ ಬದುಕನ್ನು ಸಹನೀಯಗೊಳಿಸಲು 1812ರಲ್ಲಿಅರಮೇರಿ ಶ್ರೀಮಠ ಹಾಗೂ ವಿರಾಜಪೇಟೆ ವಿರಕ್ತ ಮಠಗಳೆರಡನ್ನೂ ಏಕಕಾಲದಲ್ಲಿಸ್ಥಾಪಿಸಿದರೆಂದು ತಿಳಿದು ಬರುತ್ತದೆ. ಶ್ರೀ ಅರಮೇರಿ ಕಳಂಚೇರಿ ಮಠದ ಪ್ರಥಮಪೀಠಾಧಿಪತಿಗಳಾಗಿ ಶ್ರೀ ಮ.ನಿ.ಪ್ರ.ಸ್ವ. ಸೋಮಶೇಖರ ಸ್ವಾಮಿಗಳು ನೇರ ಅರಮನೆಸಂಪರ್ಕವನ್ನು ಪಡೆದುಕೊಂಡು ರಾಜಗುರುವಾಗಿದ್ದರು. ರಾಜರಿಗೆ ಮಾರ್ಗದರ್ಶಕರಾಗಿದ್ದಶ್ರೀಗಳ ದರ್ಶನಕ್ಕೆ ಆಗಾಗ ರಾಜರು ಶ್ರೀಮಠಕ್ಕೆ ಭೇಟಿಕೊಡುತ್ತಿದ್ದರಿಂದ ಇದು ಅರಮನೆ ಕೇರಿ(ಮುಂದೆ ಅರಮೇರಿ) ಮಠವೆಂದು ಪ್ರಸಿದ್ದಿ ಪಡೆಯಿತು.ಶ್ರೀಮಠವು ಚಾರಿತ್ರಿಕ ಮಹತ್ವ ಪಡೆದ ಮಠವಾಗಿದ್ದು ಕರ್ತೃಗಳ ನಂತರ ಅನೇಕಕಾಲ ಶ್ರೀಮಠವು ಖಾಲಿ ಉಳಿಯಿತು. ಆ ಸಮಯದಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿಬಂದ ಶ್ರೀ ಮ.ನಿ.ಪ್ರ. ಶಾಂತಮಲ್ಲ ಸ್ವಾಮಿಗಳು, ಸಂಪೂರ್ಣ ಜೀರ್ಣಗೊಂಡಿದ್ದ ಮಠವನ್ನುಜೀರ್ಣಾಭಿವೃದ್ದಿಗೊಳಿಸಿದರು. ಮಠದ ಜಮೀನನ್ನು ಅಭಿವೃದ್ದಿಪಡಿಸಿ ಮಠದ ಆರ್ಥಿಕಸ್ಥಿತಿಯನ್ನು ಸುದಾರಿಸಿದರು ಎಂದು ತಿಳಿದು ಬರುತ್ತದೆ.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಾಂತಮಲ್ಲಿಕಾರ್ಜುನ ಸ್ವಾಮಿಗಳುಸ್ನಾತಕೋತ್ತರ ಪದವೀದರರಾಗಿದ್ದು ಶ್ರೀಮಠವನ್ನು ವೈಚಾರಿಕ ಚಿಂತನೆಯ ನೆಲೆಗಟ್ಟಿನಲ್ಲಿಅಭಿವೃದ್ದಿಪಡಿಸುತ್ತಿದ್ದಾರೆ. ಶರಣ ತತ್ತ್ವವನ್ನು ಪ್ರಚುರ ಪಡಿಸುತ್ತಾ ಭಕ್ತರಲ್ಲಿನ ಮೂಡನಂಬಿಕೆ,ಅಂದಶ್ರದ್ದೆಗಳನ್ನು ಹೊಡೆದೋಡಿಸಲು ಶ್ರಮಿಸುತ್ತಿದ್ದಾರೆ. ಶ್ರೀಮಠದ ವತಿಯಿಂದ ಅನೇಕಶಾಲಾ ಕಾಲೇಜುಗಳನ್ನು ನಡೆಸುತ್ತಿರುವ ಶ್ರೀಗಳು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆಸಹಾಯ ಹಸ್ತ ಚಾಚುತ್ತಾ ಬಂದಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು
Photo :
Programs
ಪ್ರತಿ ತಿಂಗಳು ಮೊದಲನೇ ಭಾನುವಾರ “ಹೊಂಬೆಳಕು” ಕಾರ್ಯಕ್ರಮ
ಭಾದ್ರಪದ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ / ಪದವಿ ಕಾಲೇಜ್
ವಿದ್ಯಾರ್ಥಿ ನಿಲಯ ಗೋಶಾಲೆ
Photos
Full Address Kannada
ಶ್ರೀ ಅರಮೇರಿ ಕಳಂಚೇರಿ ಮಠ
ಅರಮೇರಿ - 571 218
ವಿರಾಜಪೇಟೆ ತಾ||, ಕೊಡಗು ಜಿಲ್ಲೆ