ಕರ್ತೃ – ಶ್ರೀ ಷ.ಬ್ರ. ಸೋಮಶೇಖರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು
ಮೈಸೂರು ನಗರದ ಶಂಕರಮಠದ ರಸ್ತೆಯಲ್ಲಿರುವ ಶ್ರೀ ಅರಮನೆ ಜಪದಕಟ್ಟೆಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾ ಮಠವಾಗಿ ಪಂಚಪೀಠಗಳಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಪುರಾತನ ಪರಂಪರೆಯ ಶ್ರೀಮಠದಕರ್ತೃಗುರುಗಳು ಶ್ರೀ ಷ.ಬ್ರ. ಸೋಮಶೇಖರ ಶಿವಯೋಗಿ ಶಿವಾಚಾರ್ಯಮಹಾಸ್ವಾಮಿಗಳು. ಮೊದಲು ಶ್ರೀರಂಗಪಟ್ಟಣದಲ್ಲಿ ಸ್ಥಾಪಿತಗೊಂಡಿದ್ದ ಶ್ರೀಮಠವು ನಂತರಮೈಸೂರಿಗೆ ಸ್ಥಳಾಂತರಗೊಂಡಿದೆ ಎಂದು ತಿಳಿದು ಬರುತ್ತದೆ.ಶ್ರೀ ಸೋಮಶೇಖರ ಶಿವಯೋಗಿಗಳು ಶ್ರೀರಂಗಪಟ್ಟಣದ ಕಾವೇರಿ ನದಿಯದಡದಲ್ಲಿ ಮಠವನ್ನು ಸ್ಥಾಪಿಸಿಕೊಂಡು ಆಧ್ಯಾತ್ಮ ಸಾಧನೆಯಲ್ಲಿ ತೊಡಗಿದ್ದಾಗ ಮೈಸೂರಿನಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರು ಮೈಸೂರಿನ ದೊಡ್ಡಪೇಟೆಯಲ್ಲಿ ಶ್ರೀಮಠವನ್ನು ಕಟ್ಟಿಸಿಗುರುಗಳನ್ನು ಮೈಸೂರಿಗೆ ಆಮಂತ್ರಿಸಿ ಮಠವನ್ನು ಅವರಿಗೆ ಒಪ್ಪಿಸಿದರಂತೆ. ಮೈಸೂರಿನಲ್ಲಿಮಠ ಸ್ಥಾಪನೆಗೊಂಡ ನಂತರ ಗುರುಗಳು ಸಂಚಾರ ಕೈಗೊಂಡು ಸುತ್ತಮುತ್ತಲಿನಪ್ರದೇಶಗಳಲ್ಲಿ ಶಾಖಾ ಮಠಗಳನ್ನು ಸ್ಥಾಪಿಸುತ್ತ ವೀರಶೈವ ತತ್ತ್ವಾಚರಣೆಗಳನ್ನು ಜನರಿಗೆತಲುಪಿಸುತ್ತಾ ಧರ್ಮವನ್ನು ಬೆಳೆಸಿದರು.ಈ ರೀತಿಯಾಗಿ ಸ್ಥಾಪಿತಗೊಂಡ ಮಠದ ಪರಂಪರೆ ಮುಂದುವರೆದುಇಲ್ಲಿಯವರೆಗೂ 21 ಜನ ಶ್ರೀಗಳ ಮೂಲಕ ಸಾಗಿ ಬಂದಿದೆ. ಶ್ರೀಮಠದ ಪರಂಪರೆಯಲ್ಲಿ ಶ್ರೀಗಂಗಾಧರ ಶಿವಾಚಾರ್ಯರು. ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಶ್ರೀ ಗುರುಪಾದಶಿವಾಚಾರ್ಯರು, ಶ್ರೀ ಗುರುಸಿದ್ದ ಶಿವಾಚಾರ್ಯರು ಹೀಗೆ ಹಲವಾರು ಗುರುಗಳುಮಠವನ್ನು ಮುನ್ನಡೆಸಿದ್ದು ಇವರುಗಳ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಮಠದ ಪರಂಪರೆಯ ಹತ್ತೊಂಬತ್ತನೆಯ ಗುರುಗಳಾದ ಶ್ರೀ ಷ.ಬ್ರ. ಸದಾಶಿವಶಿವಾಚಾರ್ಯ ಮಹಾಸ್ವಾಮಿಗಳು ಗುರುಕುಲವನ್ನು ಸ್ಥಾಪಿಸಿ ಸಂಸ್ಕøತ, ವೇದಾಧ್ಯಯನಮಾಡುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಲ್ಲದೆ ಪರಸ್ಥಳಗಳಿಂದ ಬರುತ್ತಿದ್ದಭಕ್ತಾದಿಗಳಿಂದ ನಿತ್ಯ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದರು. ಈ ರೀತಿ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿದ ಶ್ರೀಗಳು ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ ಲಿಂಗೈಕ್ಯರಾದರು.ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಇಮ್ಮಡಿ ಸದಾಶಿವ ಶಿವಾಚಾರ್ಯಮಹಾಸ್ವಾಮಿಗಳು 1967ರಲ್ಲಿ ಅಧಿಕಾರವನ್ನು ವಹಿಸಿಕೊಂಡು ಮಠವನ್ನುಸರ್ವತೋಮುಖವಾಗಿ ಅಭಿವೃದ್ದಿಪಡಿಸಿದರು. ಅಲ್ಲದೇ ಹಂಚಿ ಹೋಗಿ ಅನ್ಯರ ಪಾˉÁಗಿದ್ದಮಠದ ಆಸ್ತಿಯನ್ನು ಪುನಃ ಸಂಪಾದಿಸಿ ಕಾನೂನುಬದ್ದಗೊಳಿಸಿದ ಶ್ರೀಗಳು ಶಂಕರಮಠದರಸ್ತೆಯಲ್ಲಿ ನೂತನ ಮಠವನ್ನು ಕಟ್ಟಿ ಮಠದ ಆಡಳಿತವನ್ನು ಅಲ್ಲಿಗೆ ಸ್ಥಳಾಂತರಿಸಿದರು.
Swamiji
Swamiji Name :
ಶ್ರೀ ಷ.ಬ್ರ. ಡಾ. ಮುಮ್ಮುಡಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
20-05-1968
Place :
ಬನ್ನಿಕೊಪ್ಪ, ಶಿರಹಟ್ಟಿ ತಾ||
Pattadikara :
1995
Photo :
Programs
ಯುಗಾದಿ ಆದ ನಂತರ ಪಂಚಮಿ ತಿಥಿಗೆ "ಯುಗಮಾನೋತ್ಸವ" ಕಾರ್ಯಕ್ರಮ ಶಾª್ರÀಣ ಮಾಸದಲ್ಲಿ ನಿತ್ಯ ಪ್ರವಚನ ಮತ್ತು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ಗುರುಕುಲ ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀಶಾˉÉ ¥ದ Àವಿ ಪೂರ್ವ / ¥ದ Àವಿ ಕಾˉÉೀಜ್
Photos
Full Address Kannada
ಶ್ರೀ ಅರಮನೆ ಜಪದಕಟ್ಟೆ ಮಠ ಫೋರ್ಟ್ ಮೊಹˉÁ್ಲ, ಮೈಸೂರು - 570 004 ಮೈಸೂರು ತಾ|| ಮತ್ತು ಜಿˉÉ್ಲ