ಕೆ.ಆರ್.ನಗರ ತಾಲ್ಲೂಕು ಕೇಂದ್ರದಿಂದ 18 ಕಿ.ಮೀ. ದೂರದಲ್ಲಿರುವ ನರಚನಹಳ್ಳಿಗ್ರಾಮದ ಹೊರವಲಯದ ತೋಟದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಅಂಬಲಿ ಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ಈ ಭಾಗದ ಪ್ರಮುಖ ಧಾರ್ಮಿಕಕೇಂದ್ರವಾಗಿ ಬೆಳೆದು ಬಂದಿದೆ. ಶ್ರೀಮಠದ ಕರ್ತೃ ಗುರುಗಳು ಪೂಜ್ಯ ಲಿಂ. ಶ್ರೀ ವೀರಭದ್ರಮಹಾಸ್ವಾಮಿಗಳು.ಕಗ್ಗೆರೆ ಹತ್ತಿರ ಕಾಮೋನಹಳ್ಳಿಯಲ್ಲಿ ಸ್ಥಾಪಿತಗೊಂಡು ಧಾರ್ಮಿಕ ಆಚರಣೆಗಳನ್ನುಮುಂದುವರೆಸಿಕೊಂಡು ಬಂದಿದ್ದ ಶ್ರೀ ಅಂಬಲಿ ಮಠದ ಮೂಲಮಠವು ತದನಂತರಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣವಾದ ಮೇˉÉ ಮುಳುಗಡೆ ಕಂಡಿತು. ಆಗ ಶ್ರೀವೀರಭದ್ರಸ್ವಾಮಿಗಳು ಸಂಚಾರ ಬಂದು ನರಚನಹಳ್ಳಿ ಗ್ರಾಮದ ಭಕ್ತರ ಅಪೇಕ್ಷೆ ಮೇರೆಗೆಇಲ್ಲಿಯೇ ಶ್ರೀ ಅಂಬಲಿ ಮಠವನ್ನು ಸ್ಥಾಪಿಸಿದ್ದಾರೆ. ಕಾಮೋನಹಳ್ಳಿಯಲ್ಲಿದ್ದ ಮೂಲ ಮಠವುಪುರಾತನ ಮಠವಾಗಿದ್ದು ಅದರ ನಿರ್ಧಿಷ್ಟ ಇತಿಹಾಸವು ಲಭ್ಯವಾಗುವುದಿಲ್ಲ, ಹಾಗೂಶ್ರೀಮಠದಲ್ಲಿ ಬಂದ ಭಕ್ತರಿಗೆ ರಾಗಿ ಅಂಬಲಿ ಪ್ರಸಾದ ನೀಡುತ್ತಿದ್ದ ಕಾರಣ ಶ್ರೀಮಠಕ್ಕೆ ಅಂಬಲಿಮಠವೆಂದು ಹೆಸರು ಬಂದಿತ್ತು ಎನ್ನˉÁಗಿದೆ.ಶ್ರೀ ವೀರಭದ್ರ ಮಹಾಸ್ವಾಮಿಗಳು ಧರ್ಮನಿಷ್ಠರಾಗಿದ್ದು ನರಚನಹಳ್ಳಿಯಲ್ಲಿ ಮಠಸ್ಥಾಪಿಸಿದ ನಂತರ ಭಕ್ತರಿಗೆ ವೀರಶೈವ ಧರ್ಮದ ತತ್ತ್ವಾಚರಣೆಗಳ ಬಗ್ಗೆ ಅರಿವನ್ನುಮೂಡಿಸುತ್ತಾ ಬಂದರು. ಹೀಗೆ ಶ್ರೀಮಠವನ್ನು ಅಭಿವೃದ್ದಿಪಥದತ್ತ ಕೊಂಡೊಯ್ಯುತ್ತಿದ್ದಶ್ರೀಗಳು ಪ್ರಸ್ತುತ ಶ್ರೀಗಳಾದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳನ್ನು 1975ರಲ್ಲಿ ಪಟ್ಟಕ್ಕೆ ತಂದು1986ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕಹಾಗೂ ಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಭಕ್ತರ ಪ್ರೀತಿಗೆಪಾತ್ರರಾಗಿದ್ದಾರೆ. ಶ್ರೀಗಳು ಹಂತ ಹಂತವಾಗಿ ಶ್ರೀಮಠವನ್ನು ಅಭಿವೃದ್ದಿಗೊಳಿಸುತ್ತಿದ್ದುಶ್ರೀಮಠಕ್ಕೆ ಕಟ್ಟಡವನ್ನು ಜೀಣೋದ್ಧಾರ ಮಾಡಿದ್ದಾರೆ, ಹಾಗೂ ಪ್ರತಿ ಹುಣ್ಣಿಮೆಯಲ್ಲಿ ವಿಶೇಷಪೂಜಾ ಕಾರ್ಯಕ್ರಮಗಳು ಮತ್ತು ಫಾಲ್ಗುಣ ಮಾಸದಲ್ಲಿ ಲಿಂ. ಶ್ರೀ ವೀರಭದ್ರ ಸ್ವಾಮಿಗಳಆರಾಧನಾ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಚನ್ನಬಸವ ಸ್ವಾಮಿಗಳು
Date of Birth :
03-06-1954
Place :
ನಂಚನಹಳ್ಳಿ, ಕೆ.ಆರ್.ನಗರ ತಾ||
Pattadikara :
1975
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು
ಫಾಲ್ಗುಣ ಮಾಸದಲ್ಲಿ ಲಿಂ. ಶ್ರೀ ವೀರಭದ್ರಸ್ವಾಮಿಗಳ ಆರಾಧನೆ
Photos
Full Address Kannada
ಶ್ರೀ ಅಂಬಲಿ ಮಠ
ನರಚನಹಳ್ಳಿ, ವಿರ್ಲೆ ಪೋಸ್ಟ್
ಕೆ.ಆರ್.ನಗರ ತಾ||, ಮೈಸೂರು ಜಿಲ್ಲೆ