ಕರ್ತೃ – ಶ್ರೀ ಷ. ಬ್ರ. ಉಜ್ಜಿನೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಅಂಬಲದೇವರಹಳ್ಳಿ ಗ್ರಾಮದಲ್ಲಿಅಸ್ತಿತ್ವದಲ್ಲಿರುವ ಶ್ರೀ ಅಂಬಲದೇವರ ಹಳ್ಳಿ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕಪ್ರಚಲಿತದಲ್ಲಿದೆ. ಪಂಚಪೀಠಗಳ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವ ಶ್ರೀಮಠವನ್ನು ಶ್ರೀ ಷ. ಬ್ರ. ಉಜ್ಜಿನೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಾಪಿಸಿದರೆಂದುಹೇಳಲಾಗುತ್ತದೆ. ಈ ಕಾರಣದಿಂದಾಗಿ ಶ್ರೀ ಮಠಕ್ಕೆ ಶ್ರೀ ಉಜ್ಜಿನೇಶ್ವರ ಮಠವೆಂದೂ ಹೆಸರಿದೆ.ಕರ್ತೃ ಗುರುಗಳು ಸಂಚಾರ ಮೂರ್ತಿಗಳಾಗಿದ್ದು ಈ ನೆಲದಲ್ಲಿ ಅನುಷ್ಠಾನಕೈಗೊಂಡಿದ್ದಾಗ ಗ್ರಾಮದ ಭಕ್ತರ ಒತ್ತಾಯದ ಮೇರೆಗೆ ನೆಲೆನಿಂತರೆಂದು, ಗುರುಗಳಿಗೆ ಭಕ್ತರೇನಿಂತು ಮಠ ಕಟ್ಟಿಸಿಕೊಟ್ಟರೆಂದು ಹೇಳಲಾಗುತ್ತದೆ. ಹೀಗೆ ಭಕ್ತರೇ ಕಟ್ಟಿಸಿಕೊಟ್ಟ ಮಠದಲ್ಲಿನೆಲೆನಿಂತ ಶ್ರೀಗಳು ಧಾರ್ಮಿಕ ಚಟುವಟಿಕೆಗಳನ್ನು ನಡೆಸಿ ತಮ್ಮ ಉಪದೇಶಗಳಿಂದಧರ್ಮಜಾಗೃತಿ ಮಾಡಿದರು ಎಂದು ಹೇಳಲಾಗುತ್ತದೆ.ಕರ್ತೃ ಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳುಲಭ್ಯವಿಲ್ಲ. ಅನೇಕ ಮಠಾದೀಶರು ಶ್ರೀ ಮಠವನ್ನು ಮುನ್ನಡೆಸಿದ್ದರಾದರೂ ಕಾಲಕ್ರಮೇಣ ಶ್ರೀಮಠ ಖಾಲಿ ಉಳಿದಿದ್ದರಿಂದ ಎಲ್ಲ ದಾಖಲೆಗಳು ನಶಿಸಿಹೋಗಿವೆ. ಬಹುಕಾಲದ ನಂತರ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಕೆಲ ಸಮಯ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದಾರೆ. ಆದರೆ ಇವರ ಗದ್ದುಗೆಯ ಬಗ್ಗೆತಿಳಿದುಬರುವುದಿಲ್ಲ ಹಾಗೂ ಇವರ ನಂತರ ಮತ್ತೊಮ್ಮೆ ಶ್ರೀ ಮಠವು ಐವತ್ತು ವರ್ಷಗಳುಖಾಲಿ ಉಳಿದಿದೆ.ಬಹುಕಾಲ ಖಾಲಿ ಉಳಿದಿದ್ದ ಶ್ರೀ ಮಠಕ್ಕೆ 1987ರ ಮೇ 10ರಂದು ಅಧಿಕಾರವಹಿಸಿಕೊಂಡವರು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಉಜ್ಜಿನೇಶ್ವರ ಶಿವಾಚಾರ್ಯ ಸ್ವಾಮಿಗಳು.ಶ್ರೀಗಳು ಸಿದ್ದಗಂಗಾ, ಯಡೆಯೂರುಗಳಲ್ಲಿ ಸಂಸ್ಕøತ, ವೇದಾಭ್ಯಾಸ, ಮಾಡಿದ್ದು ಶ್ರೀ ಮಠದಅಧಿಕಾರ ವಹಿಸಿಕೊಂಡಾಗ ಮಠದ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ನಂತರ ಶ್ರೀಗಳು ತಮ್ಮಕೈಲಾದಷ್ಟು ಅಭಿವೃದ್ಧಿ ಮಾಡಿದ್ದು 1999ರಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿಪ್ರತಿಷ್ಠಾಪಿಸಿದ್ದಾರೆ. ಶ್ರೀ ಮಠಕ್ಕೆ ಭಕ್ತರ ಸಂಖ್ಯೆ ಕಡಿಮೆ ಇದ್ದು ಶ್ರೀಗಳಕಾರ್ಯಚಟುವಟಿಕೆಗಳಿಗೆ ಸೂಕ್ತ ಬೆಂಬಲವಿರದಿರುವುದು ಬೇಸರದ ಸಂಗತಿ.
Swamiji
Swamiji Name :
ಶ್ರೀ ಷ. ಬ್ರ. ಉಜ್ಜಿನೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
ಅಂಬಲದೇವರಗಳ್ಳಿ, ತುರುವೇಕೆರೆ ತಾ||
Place :
01-06-1957
Pattadikara :
10-05-1987
Photo :
Programs
ಶಿವರಾತ್ರಿಗೆ ವಿಶೇಷ ಪೂಜೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ಅಂಬಲದೇವರಹಳ್ಳಿ ಮಠ ಅಂಬಲದೇವರಹಳ್ಳಿ, ದಾಸಿಹಳ್ಳಿ ಪೋ. - 572 221 ತುರುವೇಕೆರೆ ತಾ||, ತುಮಕೂರು ಜಿಲ್ಲೆ