Shree Adrushanandashrama Simimatha – Kadaravalli

Shree Adrushanandashrama Simimatha – Kadaravalli Claimed

ಶ್ರೀ ಅದೃಶಾನಂದಾಶ್ರಮ ಸೀಮೀಮಠ - ಕಾದರವಳ್ಳಿ

Average Reviews

Description

ಶ್ರೀ ಅದೃಶಾನಂದಾಶ್ರಮ ಸೀಮೀಮಠ – ಕಾದರವಳ್ಳಿ

ಪೂಜ್ಯ ಡಾ|| ಶ್ರೀ ಅಭಿನವ ಸೀಮೀ ಮಠಾಧೀಶ್ವರ ಬಹಳಾಕ್ಷ ಶಿವಯೋಗೀಶ್ವರರು

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಕಾದರವಳ್ಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 28 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿರುವ ಪುರಾತನ ಶ್ರೀ ಅದೃಶಾನಂದಾಶ್ರಮ ಸೀಮೀಮಠವು ಅಸ್ಥಿತ್ವದಲ್ಲಿದೆ.ಸುಮಾರು 10ನೇ ಶತಮಾನದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಲಾಗಿರುವ ಶ್ರೀಮಠದಪೂರ್ವೇತಿಹಾಸ ಹಾಗೂ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀಮಠದ ಕರ್ತೃಗುರುಗಳ ಕುರಿತಾಗಿ ತಿಳಿದುಬರುವುದಿಲ್ಲವಾದರೂಪರಂಪರೆಯಲ್ಲಿ ಈಗ್ಗೆ 3-4 ತಲೆಮಾರುಗಳ ಹಿಂದೆ ಬಂದಿರುವ ಶ್ರೀ ಅದೃಶ್ಯ ಶಿವಯೋಗಿಗಳಕುರಿತಾಗಿ ತಿಳಿದುಬರುತ್ತದೆ. ಪವಾಡ ಪುರುಷರಾಗಿ ಹೆಸರಾಗಿದ್ದ ಶ್ರೀಗಳು ಭಕ್ತರಭವರೋಗಗಳನ್ನು ನಿವಾರಿಸುತ್ತಾ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಇವರಕಾರಣದಿಂದಲೇ ಶ್ರೀಮಠಕ್ಕೆ ಶ್ರೀ ಅದೃಶಾನಂದಾಶ್ರಮ ಸೀಮೀಮಠವೆಂಬ ಹೆಸರುಬಂದಿತೆಂದು ಹೇಳಲಾಗುತ್ತದೆ.ಶ್ರೀಮಠದ ಪರಂಪರೆಯಲ್ಲಿ ಕಂಡಬರುವ ಪ್ರಮುಖ ಶ್ರೀಗಳು ಪೂಜ್ಯ ಶ್ರೀಚರಂತಪ್ಪಜ್ಜನವರು ಹಾಗೂ ಹಿಂದಿನ ಶ್ರೀಗಳಾದ ಪೂಜ್ಯ ಲಿಂ|| ಶ್ರೀ ಅಪ್ಪಯ್ಯಶಿವಯೋಗಿಗಳು. ಶರಣರ ಹಾಗೂ ಆಚಾರ್ಯರ ತತ್ವಗಳಿಗನುಗುಣವಾಗಿ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿರುವ ಶ್ರೀಮಠದಪರಂಪರೆಯಲ್ಲಿ ಕಾಣಸಿಗುವ ಪಟ್ಟಾಧ್ಯಕ್ಷರಲ್ಲಿ ಕೆಲವು ಶ್ರೀಗಳು ಸನ್ಯಾಸಿಗಳಾಗಿದ್ದರೆ ಇನ್ನೂಕೆಲವು ಶ್ರೀಗಳು ಸಂಸಾರಿಗಳಾಗಿದ್ದಾರೆ.ಶ್ರೀಮಠದ ಹಿಂದಿನ ಶ್ರೀಗಳಾದ ಪೂಜ್ಯ ಶ್ರೀ ಅಪ್ಪಯ್ಯ ಶಿವಯೋಗಿಗಳ ಕಾಲದಲ್ಲಿಶ್ರೀಮಠವು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ 1978ರಲ್ಲಿಲಿಂಗೈಕ್ಯರಾಗಿದ್ದಾರೆ. ಇವರ ನಂತರ 1978ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿರುವ ಪ್ರಸ್ತುತಶ್ರೀಗಳಾದ ಪೂಜ್ಯ ಡಾ|| ಶ್ರೀ ಅಭಿನವ ಸೀಮೀ ಮಠಾಧೀಶ್ವರ ಬಹಳಾಕ್ಷ ಶಿವಯೋಗೀಶ್ವರರುಶ್ರೀಮಠವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ ಸ್ನಾತಕೋತ್ತರಪದವೀದರರಾದ ಶ್ರೀಗಳು 2015ರಲ್ಲಿ ಮಂಡಿಸಿದ “ಜಾನಪದ ಸಾಹಿತ್ಯದಲ್ಲಿ ಶರಣರು ಒಂದುಅಧ್ಯಯನ” ಪ್ರಬಂಧಕ್ಕೆ ಪಿ.ಎಚ್ಡಿ., ಪದವಿ ನೀಡಲಾಗಿದೆ. ಶ್ರೀಗಳು ಶ್ರೀಮಠವನ್ನು ಸದಾಚಟುವಟಿಕೆಯ ಕೇಂದ್ರವನ್ನಾಗಿಸಿಕೊಂಡು ಪ್ರತಿದಿನ ವಚನಗಾಯನ ಮತ್ತು ಶಾಸ್ತ್ರ ಪ್ರವಚನಕಾರ್ಯಕ್ರಮದಂತಹ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

Swamiji

Swamiji Name :
ಪೂಜ್ಯ ಡಾ|| ಶ್ರೀ ಅಭಿನವ ಸೀಮೀ ಮಠಾಧೀಶ್ವರ ಬಹಳಾಕ್ಷ ಶಿವಯೋಗೀಶ್ವರರು
Date of Birth :
12-10-1962
Place :
ಕಾದರವಳ್ಳಿ, ಬೈಲಹೊಂಗಲ ತಾ||
Pattadikara :
1978
Photo :

Programs

ಪ್ರತಿ ದಿನ ವಚನ ಗಾಯನ ಮತ್ತು ಶಾಸ್ತ್ರ ಪ್ರವಚನ
ಪ್ರತಿ ಅಮವಾಸೆಗೆ “ಆಧ್ಯಾತ್ಮ ಗೋಷ್ಠಿ” ಮಕರ ಸಂಕ್ರಾಂತಿಗೆ “ಕುಂಭಮೇಳ ಸಪ್ತಾಹ”
ಗಣೇಶ ಚತುರ್ಥಿಗೆ ಶ್ರೀ ಅಪ್ಪಯ್ಯ ಶಿವಯೋಗೀಶ್ವರರ ಮತ್ತು ಗೌರಾಂಬೆ ಅಮ್ಮನವರ ಪುಣ್ಯಾರಾಧನೆ ಶ್ರಾವಣ ಮಾಸದಲ್ಲಿ ನಿತ್ಯ “ವಿದ್ವಾಂಸರ ಗೋಷ್ಠಿ”

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ

Photos

Full Address Kannada

ಶ್ರೀ ಅದೃಶಾನಂದಾಶ್ರಮ ಸೀಮೀ ಮಠ
ಕಾದರವಳ್ಳಿ - 591 153
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ

Map

Near by Places

ಇಟಗಿ ಕ್ರಾಸ್ - 2 ಕಿ.ಮೀ.
ಕಿತ್ತೂರು - 12 ಕಿ.ಮೀ.
ಬೈಲಹೊಂಗಲ - 28 ಕಿ.ಮೀ.
ಬೆಳಗಾವಿ - 35 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!