ಅಂಕಲಗಿಯ ಶ್ರೀ ಅಡವಿ ಸಿದ್ದೇಶ್ವರರೆಂದರೆ ಈ ಭಾಗದಲ್ಲಿ ಪ್ರಸಿದ್ಧ ಹೆಸರು.ಶ್ರೀಗಳು ನಾಡಿನ ಧಾರ್ಮಿಕ ಪರಂಪರೆಯಲ್ಲಿ ಬರುವ ಪ್ರಮುಖರು. ಜನಪದರ ಪ್ರಕಾರಶ್ರೀಗಳು ಏಳುನೂರು ಎಪ್ಪತ್ತು ವರ್ಷಗಳಿಗೂ ಅಧಿಕ ಕಾಲ ಬಾಳಿ ಬದುಕಿ ಭಕ್ತರನ್ನುಉದ್ದರಿಸಿದವರು. ಇಂತಹ ಪುಣ್ಯಪುರುಷರಿಂದ ಸುಮಾರು 1820ರಲ್ಲಿ ಸ್ಥಾಪಿತಗೊಂಡಿರುವಶ್ರೀ ಅಡವಿ ಸಿದ್ದೇಶ್ವರ ಮಠವು ಅಂಕಲಗಿಯಲ್ಲಿ ಅಸ್ತಿತ್ವದಲ್ಲಿರುವುದು ಈ ಭಾಗದ ಭಕ್ತರಪಾಲಿನ ಪುಣ್ಯ.ಶ್ರೀ ಅಡವಿ ಸಿದ್ದೇಶ್ವರರು 12ನೇ ಶತಮಾನದ ಚನ್ನಬಸವಣ್ಣನವರಅನುಯಾಯಿಯಾಗಿದ್ದ ರೇಚಪ್ಪನವರೇ ಎಂಬುದು ಜನಪದದ ಅಭಿಪ್ರಾಯ. ಈ ಎಲ್ಲಾತರ್ಕಗಳಿಗೂ ಮೀರಿ ಶ್ರೀಗಳು ಉತ್ತರದ ಕಡೆಯಿಂದ ಬಂದು ಸುಂದರಗಿ ಗ್ರಾಮದಲ್ಲಿಅನುಷ್ಠಾನ ಕೈಗೊಂಡು ಕೊನೆಯಲ್ಲಿ ಅಂಕಲಗಿಗೆ ಬಂದು ನೆಲೆನಿಂತಿದ್ದಾರೆ ಎಂದುಹೇಳಬಹುದು. ಶ್ರೀಗಳು ಅಂಕಲಗಿಯಲ್ಲಿ ಸುಮಾರು 36 ವರ್ಷಗಳ ಕಾಲ ಭಕ್ತರನ್ನುಉದ್ದರಿಸಿದ್ದಾರೆ. ಈಗಲೂ ಈ ಸ್ಥಳದಲ್ಲಿ ಮಹಿಮೆ ಇದ್ದು ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳಿಗೆಅಡವಿ ಸಿದ್ದೇಶ್ವರರ ಗದ್ದುಗೆಯ ಮೊರೆ ಹೋಗುವುದು ಸಾಮಾನ್ಯ.ಗುರುಗಳು ಇಲ್ಲಿ ಮಠ ಸ್ಥಾಪಿಸಿ ಭಕ್ತರಿಗೆ ಸತ್ಯ ಧರ್ಮೋಪದೇಶ ಹಾಗೂಅನ್ನದಾಸೋಹವನ್ನು ನಡೆಸುವ ಮೂಲಕ ಜನರಲ್ಲಿ ಧರ್ಮಜಾಗೃತಿಯನ್ನುಂಟುಮಾಡಿದರು. ಇವರು ಅನೇಕ ಪವಾಡಗಳ ಮೂಲಕ ಭಕ್ತರಿಗೆ ಸನ್ಮಾರ್ಗ ತೋರಿ ಪವಾಡದರೀತಿಯಲ್ಲೇ ಜೀವಂತ ಸಮಾದಿಯಾದರೆಂದು ಹೇಳಲಾಗಿದೆ. ಭಕ್ತರು ಗುರುಗಳಗದ್ದುಗೆಯನ್ನು ಸ್ಥಾಪಿಸಿ ನಿತ್ಯ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಬಂದಿದ್ದಾರೆ.ಆನಂತರ ಶ್ರೀ.ಮ.ನಿ.ಪ್ರ. ಸಿದ್ದರಾಮ ಮಹಾಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡು ಮುನ್ನಡೆಸಿದ್ದು ಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಪ್ರಸ್ತುತಮೂರನೇ ಶ್ರೀಗಳಾದ ಶ್ರೀ.ಮ.ನಿ.ಪ್ರ. ಗುರುಸಿದ್ದರಾಮ ಮಹಾಸ್ವಾಮಿಗಳು 1982ರ ಮಾರ್ಚ್01ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡು ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಗಳು ಶೈಕ್ಷಣಿಕ ಹಾಗೂ ಸಾಹಿತ್ಯಿಕವಾಗಿಯೂಕಾರ್ಯತತ್ಪರರಾಗಿದ್ದು ಶ್ರೀಮಠದಲ್ಲಿ ಜ್ಞಾನದಾಸೋಹ ಹಾಗೂ ಅನ್ನದಾಸೋಹಗಳನ್ನುವ್ಯವಸ್ಥಿತವಾಗಿ ನಡೆಸುತ್ತಾ ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಸಿದ್ದರಾಮ ಮಹಾಸ್ವಾಮಿಗಳು
Date of Birth :
01-03-1947
Place :
ಅಳಗವಾಡಿ, ನವಲಗುಂದ ತಾ||
Pattadikara :
01-03-1982
Photo :
Programs
ಪ್ರತಿ ಹುಣ್ಣಿಮೆ, ಅಮವಾಸೆಗೆ ವಿಶೇಷ ಪೂಜೆ ಶ್ರಾವಣ
ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ
ಶಿವರಾತ್ರಿಯಾದ 8ನೇ ದಿನಕ್ಕೆ ಶ್ರೀಮಠದ ಜಾತ್ರೆ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ / ಪದವಿ ಕಾಲೇಜ್
Photos
Full Address Kannada
ಶ್ರೀ ಅಡವಿ ಸಿದ್ದೇಶ್ವರ ಮಠ
ಅಂಕಲಗಿ - 591 102
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ