ಬಸವಾದಿ ಶರಣರಿಂದ ಪ್ರವರ್ತನೆಗೊಂಡ ಲಿಂಗಾಯತ ಧರ್ಮಕ್ಕೆ ಸಾವಿರವರ್ಷಗಳ ಇತಿಹಾಸವಿದೆ. ಭವ್ಯಪರಂಪರೆ ಇದೆ. ಇದು ವೈಚಾರಿಕ ತಳಹದಿಯ ಮೇಲೆರೂಪುಗೊಂಡ ಧರ್ಮ. ಬಸವಣ್ಣನವರ ಕಾಲದಲ್ಲಿ ಲಿಂಗಾಯತ ಧರ್ಮದಲ್ಲಿ ಸಮಾವೇಶಗೊಂಡಿದ್ದ ಬೇರೆ ಬೇರೆ ಕಾಯಕದವರೆಲ್ಲಾ ಕಾಲಕ್ರಮೇಣ ಬೇರೆ ಬೇರೆ ಜಾತಿಗಳಾಗಿಗುರುತಿಸಿಕೊಂಡು ಪ್ರತ್ಯೇಕವಾಗಿ ಹೋದದ್ದು ದುರ್ದೈವದ ಸಂಗತಿ. ಹೀಗೆ ಬೇರೆಯಾದಜಾತಿಗಳಲ್ಲಿ ಲಿಂಗಾಯತರಲ್ಲೇ ಬಹುಸಂಖ್ಯಾತರಾದ ಪಂಚಮಸಾಲಿಗಳೂ ಒಬ್ಬರು.ಪಂಚಮಸಾಲಿಗಳು ಬಹುಸಂಖ್ಯಾತರಾಗಿದ್ದರೂ ಸಮರ್ಥ ನಾಯಕರಿಲ್ಲದಸಂದರ್ಭದಲ್ಲಿ ಪಂಚಮಸಾಲಿಗಳ ಪ್ರತ್ಯೇಕ ಸಂಘವನ್ನು ಸ್ಥಾಪಿಸಲು ಹಿರಿಯರು ತುಂಬಶ್ರಮಪಟ್ಟರು. 2005-06ರ ಹೊತ್ತಿಗೆ ಪಂಚಮಸಾಲಿ ಸಂಘಟನೆ ಎಲ್ಲರ ಗಮನ ಸೆಳೆಯಿತು.ಆಗ ತಮ್ಮದೇ ಆದ ಒಂದು ಪೀಠವನ್ನು ಸ್ಥಾಪಿಸಿ ಇದಕ್ಕೆ ಸಮರ್ಥ ಪೀಠಾಧಿಪತಿಯನ್ನುಪಡೆಯುವ ಕಾರ್ಯ ಪ್ರಾರಂಭವಾಯಿತಾದರೂ ಒಡಕುಂಟಾಗಿ ಇಬ್ಬಾಗವಾಯಿತು. ಇಂತಹವಿಶಿಷ್ಟ ಸಂದರ್ಭದಲ್ಲಿ 2008ರ ಫೆಬ್ರವರಿ 12 ರಂದು ಕೂಡಲಸಂಗಮದಲ್ಲಿ ಲಿಂಗಾಯತಪಂಚಮಸಾಲಿಗಳ ಜಗದ್ಗುರು ಮಹಾಪೀಠ ಸ್ಥಾಪಿತಗೊಂಡಿತು. ಪ್ರಥಮ ಜಗದ್ಗುರು ಗಳಾಗಿಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಅಧಿಕಾರವನ್ನು ಸ್ವೀಕರಿಸಿದರು.ಹೀಗೆ ಸ್ಥಾಪಿತಗೊಂಡ ಶ್ರೀಮಠವು ಇಂದು ಕೇವಲ 6 ವರ್ಷಗಳಲ್ಲೇ ನಾಡಿನಪ್ರಮುಖ ಮಠವಾಗಿ ರೂಪುಗೊಂಡಿದ್ದು ಐತಿಹಾಸಿಕ ಸಂಗತಿ. ಇದಕ್ಕೆಲ್ಲ ಕಾರಣ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಪಂಚಮಸಾಲಿ ಸಮಾಜ ಎಂದರೆ ತಪ್ಪಾಗಲಾರದು. ಶ್ರೀಗಳು ಈ ಮೊದಲು ದಾವಣಗೆರೆಯ ಶ್ರೀ ವಿರಕ್ತಮಠಕ್ಕೆ ಪೀಠಾಧಿಪತಿಗಳಾಗಿಅಧಿಕಾರ ಸ್ವೀಕರಿಸಿ ಮುನ್ನಡೆಸಿದ್ದವರು. ಮಾಸಿಕ ಶಿವಾನುಭವ ಗೋಷ್ಠಿಗಳು, ಲಿಂಗಪೂಜಾಪ್ರಾತ್ಯಕ್ಷತೆಗಳು, ಸಾಮೂಹಿಕ ವಿವಾಹಗಳು, ರೈತಪರ ಹೋರಾಟಗಳು ಇನ್ನೂ ಮುಂತಾದಸಮಾಜಮುಖಿ ಕಾರ್ಯಕ್ರಮಗಳ ಮೂಲಕ ದಾವಣಗೆರೆಯಲ್ಲಿ ಹೆಸರಾಗಿದ್ದವರು.ಇಂತಹ ಕ್ರಿಯಾಶೀಲ, ಧಾರ್ಮಿಕ, ಪ್ರಗತಿಪರ ಚಿಂತಕರೂ ಆದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಪ್ರಥಮ ಜಗದ್ಗುರುಗಳಾಗಿ ನಾಡಿನಾದ್ಯಂತ 4 ಲಕ್ಷ ಕಿ.ಮೀ. ಗಳಿಗೂ ಅಧಿಕ ಪ್ರವಾಸ ಮಾಡಿಜನಸಾಮಾನ್ಯರ ಕಷ್ಟಸುಖಗಳನ್ನು ಆಲಿಸಿದವರು. ಶ್ರೀಗಳು ಗಾಮೀಣ ಮಟ್ಟದಿಂದ ರಾಜ್ಯಮಟ್ಟದವರೆಗೆ ಸಮಾವೇಶಗಳನ್ನು ನಡೆಸುತ್ತಾ ಆ ಮೂಲಕ ಪಂಚಮಸಾಲಿ ಸಮಾಜದಏಳಿಗೆಗಾಗಿ ಶ್ರಮಿಸುತ್ತಲಿದ್ದಾರೆ. ಕೂಡಲಸಂಗಮ ಮತ್ತು ದಾವಣಗೆರೆಗಳಲ್ಲಿ ಮಾಸಿಕಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಾ ಬಂದಿದ್ದು ಸಮಾಜದ ಯುವಕರಿಗೆ ವ್ಯಕ್ತಿ ವಿಕಸನದಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಶ್ರೀಗಳು ಪ್ರತಿವರ್ಷ ಬಸವಣ್ಣನವರ ಐಕ್ಯದಿನದಲ್ಲಿ ‘ಬಸವ ಪಂಚಮಿ’ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದುಜೊತೆಗೆ ಶ್ರಾವಣ ಮಾಸದಲ್ಲಿ ‘ಮನೆಮನಗಳಲ್ಲಿ ಕೂಡಲಸಂಗಮ’ ಎಂಬ ಚಿಂತನಗೋಷ್ಠಿಗಳನ್ನು ಆಯೋಜಿಸುತ್ತಿದ್ದಾರೆ. ಹಾಗೂ ಮೂಢ ನಂಬಿಕೆಗಳ ವಿರುದ್ಧ ನಿರಂತರ ಹೋರಾಟನಡೆಸುತ್ತಿರುವ ಶ್ರೀಗಳು ತಮ್ಮ ಪ್ರಗತಿಪರ ಚಿಂತನೆಗಳೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ತೊಡಗಿದ್ದಾರೆ.ಶ್ರೀಗಳು ಪ್ರಾರಂಭಿಸಿರುವ ಇನ್ನೊಂದು ಪ್ರಮುಖ ಕಾರ್ಯವೆಂದರೆ ಶ್ರೀಮಠದತತ್ವಾದರ್ಶಗಳಿಗೆ ಮಾರುಹೋಗಿ ಲಿಂಗಾಯತರಾಗಿ ಪರಿವರ್ತನೆಗೊಳ್ಳಲು ಸಿದ್ಧವಿರುವವರಿಗೆಲಿಂಗದೀಕ್ಷೆ ನೀಡುವ ಮೂಲಕ ಅವರನ್ನು ಲಿಂಗಾಯಿತರನ್ನಾಗಿ ಮಾಡಿಕೊಳ್ಳುವ’ಹೃದಯಾಂತರ ದೀಕ್ಷೆ’ ಎಂಬ ವಿನೂತನ ಕಾರ್ಯಕ್ರಮ. ಅಲ್ಲದೇ ಕೆಲವರು ಸನ್ಯಾಸದೀಕ್ಷೆಯನ್ನು ಬಯಸಿದರೆ ಅವರಿಗೆ ದೀಕ್ಷೆಯನ್ನು ಸಹ ನೀಡುತ್ತಾ ಬಂದಿದ್ದಾರೆ. ವೀರರಾಣಿಚೆನ್ನಮ್ಮನವರು ಲಿಂಗ್ಯೆಕ್ಯರಾದ ದಿನವನ್ನು ‘ಚೆನ್ನಮ್ಮ ಸ್ಮರಣೋತ್ಸವ’ ಕಾರ್ಯಕ್ರಮವನ್ನಾಗಿಆರಂಭಿಸಿದ ಕೀರ್ತಿ ಶ್ರೀಗಳದ್ದು. ಹೀಗೆ ಪ್ರಗತಿಪರ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಶ್ರೀಗಳು ಸಮಾಜದ ಕಣ್ತೆರೆಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.ಶ್ರೀಗಳು ಕೃಷಿ ಸಂಬಂಧಿತ, ರೈತ ಪರವಾದ ಒಲವು ಹೊಂದಿದ್ದು ದಾವಣಗೆರೆಯವಿರಕ್ತ ಮಠದಲ್ಲಿದ್ದಾಗಿನಿಂದಲೂ ಹಲವಾರು ರೈತ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ.ಆ ಮೂಲಕ ರೈತ ಬಾಂಧವರ ಸಮಸ್ಯೆಗಳಿಗೆ ದನಿಯಾಗಿದ್ದಾರೆ. ಅವುಗಳಲ್ಲಿ ಕೆಲವುದಾವಣಗೆರೆ ಜಿಲ್ಲೆಯ 19 ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಮಾಡಿದ್ದು, 2007ರಲ್ಲಿದಾವಣಗೆರೆ ನಗರದಲ್ಲಿ 7 ದಿನಗಳ ಕಾಲ ನೈಸರ್ಗಿಕ ಕೃಷಿ ಶಿಬಿರಗಳನ್ನು ಆಯೋಜಿಸಿಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಮುಂತಾದವು. ಹಾಗೂ ಶ್ರೀಗಳು ಸಂಕ್ರಾಂತಿಯದಿನದಂದು ‘ಬಸವ ಕೃಷಿ ಸಂಕ್ರಾಂತಿ’ ಆಚರಣೆಗೆ ಚಾಲನೆ ನೀಡಿದ್ದು ಬಸವ ಕೃಷಿ ರಾಷ್ಟ್ರೀಯಪ್ರಶಸ್ತಿಯನ್ನು ಅರ್ಹ ಸಾಧಕರನ್ನು ಗುರುತಿಸಿ ಪ್ರದಾನ ಮಾಡುತ್ತಾ ಬಂದಿದ್ದಾರೆ.ಈ ರೀತಿಯಾಗಿ ಶ್ರೀಗಳು ಶ್ರೀಮಠವನ್ನು ಕೇವಲ 6 ವರ್ಷಗಳಲ್ಲಿ ಅದ್ಭುತವೆನಿಸುವರೀತಿಯಲ್ಲಿ ಅಭಿವೃದ್ಧಿಪಡಿಸಿದ್ದು ಜೊತೆಯಲ್ಲಿ ಸಮಾಜದ ಒಗ್ಗೂಡುವಿಕೆಗೆ ಶ್ರಮಿಸುತ್ತಿದ್ದಾರೆ.ತಮ್ಮ ಹೋರಾಟಗಳ ಮೂಲಕ ಸಾಮಾಜಿಕ ಕಳಕಳಿಯ ಮೂಲಕ ನಾಡಿನ ಪ್ರಗತಿಪರಸ್ವಾಮಿಗಳ ಸಾಲಿನ ಪ್ರಮುಖರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ.ಬಸವಾದಿ ಶರಣರಿಂದ ಪ್ರವರ್ತನೆಗೊಂಡ ಲಿಂಗಾಯತ ಧರ್ಮಕ್ಕೆ ಸಾವಿರವರ್ಷಗಳ ಇತಿಹಾಸವಿದೆ. ಭವ್ಯಪರಂಪರೆ ಇದೆ. ಇದು ವೈಚಾರಿಕ ತಳಹದಿಯ ಮೇಲೆರೂಪುಗೊಂಡ ಧರ್ಮ. ಬಸವಣ್ಣನವರ ಕಾಲದಲ್ಲಿ ಲಿಂಗಾಯತ ಧರ್ಮದಲ್ಲಿ ಸಮಾವೇಶಗೊಂಡಿದ್ದ ಬೇರೆ ಬೇರೆ ಕಾಯಕದವರೆಲ್ಲಾ ಕಾಲಕ್ರಮೇಣ ಬೇರೆ ಬೇರೆ ಜಾತಿಗಳಾಗಿಗುರುತಿಸಿಕೊಂಡು ಪ್ರತ್ಯೇಕವಾಗಿ ಹೋದದ್ದು ದುರ್ದೈವದ ಸಂಗತಿ. ಹೀಗೆ ಬೇರೆಯಾದಜಾತಿಗಳಲ್ಲಿ ಲಿಂಗಾಯತರಲ್ಲೇ ಬಹುಸಂಖ್ಯಾತರಾದ ಪಂಚಮಸಾಲಿಗಳೂ ಒಬ್ಬರು.ಪಂಚಮಸಾಲಿಗಳು ಬಹುಸಂಖ್ಯಾತರಾಗಿದ್ದರೂ ಸಮರ್ಥ ನಾಯಕರಿಲ್ಲದಸಂದರ್ಭದಲ್ಲಿ ಪಂಚಮಸಾಲಿಗಳ ಪ್ರತ್ಯೇಕ ಸಂಘವನ್ನು ಸ್ಥಾಪಿಸಲು ಹಿರಿಯರು ತುಂಬಶ್ರಮಪಟ್ಟರು. 2005-06ರ ಹೊತ್ತಿಗೆ ಪಂಚಮಸಾಲಿ ಸಂಘಟನೆ ಎಲ್ಲರ ಗಮನ ಸೆಳೆಯಿತು.ಆಗ ತಮ್ಮದೇ ಆದ ಒಂದು ಪೀಠವನ್ನು ಸ್ಥಾಪಿಸಿ ಇದಕ್ಕೆ ಸಮರ್ಥ ಪೀಠಾಧಿಪತಿಯನ್ನುಪಡೆಯುವ ಕಾರ್ಯ ಪ್ರಾರಂಭವಾಯಿತಾದರೂ ಒಡಕುಂಟಾಗಿ ಇಬ್ಬಾಗವಾಯಿತು. ಇಂತಹವಿಶಿಷ್ಟ ಸಂದರ್ಭದಲ್ಲಿ 2008ರ ಫೆಬ್ರವರಿ 12 ರಂದು ಕೂಡಲಸಂಗಮದಲ್ಲಿ ಲಿಂಗಾಯತಪಂಚಮಸಾಲಿಗಳ ಜಗದ್ಗುರು ಮಹಾಪೀಠ ಸ್ಥಾಪಿತಗೊಂಡಿತು. ಪ್ರಥಮ ಜಗದ್ಗುರು ಗಳಾಗಿಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಅಧಿಕಾರವನ್ನು ಸ್ವೀಕರಿಸಿದರು.ಹೀಗೆ ಸ್ಥಾಪಿತಗೊಂಡ ಶ್ರೀಮಠವು ಇಂದು ಕೇವಲ 6 ವರ್ಷಗಳಲ್ಲೇ ನಾಡಿನಪ್ರಮುಖ ಮಠವಾಗಿ ರೂಪುಗೊಂಡಿದ್ದು ಐತಿಹಾಸಿಕ ಸಂಗತಿ. ಇದಕ್ಕೆಲ್ಲ ಕಾರಣ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಪಂಚಮಸಾಲಿ ಸಮಾಜ ಎಂದರೆ ತಪ್ಪಾಗಲಾರದು. ಶ್ರೀಗಳು ಈ ಮೊದಲು ದಾವಣಗೆರೆಯ ಶ್ರೀ ವಿರಕ್ತಮಠಕ್ಕೆ ಪೀಠಾಧಿಪತಿಗಳಾಗಿಅಧಿಕಾರ ಸ್ವೀಕರಿಸಿ ಮುನ್ನಡೆಸಿದ್ದವರು. ಮಾಸಿಕ ಶಿವಾನುಭವ ಗೋಷ್ಠಿಗಳು, ಲಿಂಗಪೂಜಾಪ್ರಾತ್ಯಕ್ಷತೆಗಳು, ಸಾಮೂಹಿಕ ವಿವಾಹಗಳು, ರೈತಪರ ಹೋರಾಟಗಳು ಇನ್ನೂ ಮುಂತಾದಸಮಾಜಮುಖಿ ಕಾರ್ಯಕ್ರಮಗಳ ಮೂಲಕ ದಾವಣಗೆರೆಯಲ್ಲಿ ಹೆಸರಾಗಿದ್ದವರು.ಇಂತಹ ಕ್ರಿಯಾಶೀಲ, ಧಾರ್ಮಿಕ, ಪ್ರಗತಿಪರ ಚಿಂತಕರೂ ಆದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಪ್ರಥಮ ಜಗದ್ಗುರುಗಳಾಗಿ ನಾಡಿನಾದ್ಯಂತ 4 ಲಕ್ಷ ಕಿ.ಮೀ. ಗಳಿಗೂ ಅಧಿಕ ಪ್ರವಾಸ ಮಾಡಿಜನಸಾಮಾನ್ಯರ ಕಷ್ಟಸುಖಗಳನ್ನು ಆಲಿಸಿದವರು. ಶ್ರೀಗಳು ಗಾಮೀಣ ಮಟ್ಟದಿಂದ ರಾಜ್ಯಮಟ್ಟದವರೆಗೆ ಸಮಾವೇಶಗಳನ್ನು ನಡೆಸುತ್ತಾ ಆ ಮೂಲಕ ಪಂಚಮಸಾಲಿ ಸಮಾಜದಏಳಿಗೆಗಾಗಿ ಶ್ರಮಿಸುತ್ತಲಿದ್ದಾರೆ. ಕೂಡಲಸಂಗಮ ಮತ್ತು ದಾವಣಗೆರೆಗಳಲ್ಲಿ ಮಾಸಿಕಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಾ ಬಂದಿದ್ದು ಸಮಾಜದ ಯುವಕರಿಗೆ ವ್ಯಕ್ತಿ ವಿಕಸನದಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಶ್ರೀಗಳು ಪ್ರತಿವರ್ಷ ಬಸವಣ್ಣನವರ ಐಕ್ಯದಿನದಲ್ಲಿ ‘ಬಸವ ಪಂಚಮಿ’ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದುಜೊತೆಗೆ ಶ್ರಾವಣ ಮಾಸದಲ್ಲಿ ‘ಮನೆಮನಗಳಲ್ಲಿ ಕೂಡಲಸಂಗಮ’ ಎಂಬ ಚಿಂತನಗೋಷ್ಠಿಗಳನ್ನು ಆಯೋಜಿಸುತ್ತಿದ್ದಾರೆ. ಹಾಗೂ ಮೂಢ ನಂಬಿಕೆಗಳ ವಿರುದ್ಧ ನಿರಂತರ ಹೋರಾಟನಡೆಸುತ್ತಿರುವ ಶ್ರೀಗಳು ತಮ್ಮ ಪ್ರಗತಿಪರ ಚಿಂತನೆಗಳೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ತೊಡಗಿದ್ದಾರೆ.ಶ್ರೀಗಳು ಪ್ರಾರಂಭಿಸಿರುವ ಇನ್ನೊಂದು ಪ್ರಮುಖ ಕಾರ್ಯವೆಂದರೆ ಶ್ರೀಮಠದತತ್ವಾದರ್ಶಗಳಿಗೆ ಮಾರುಹೋಗಿ ಲಿಂಗಾಯತರಾಗಿ ಪರಿವರ್ತನೆಗೊಳ್ಳಲು ಸಿದ್ಧವಿರುವವರಿಗೆಲಿಂಗದೀಕ್ಷೆ ನೀಡುವ ಮೂಲಕ ಅವರನ್ನು ಲಿಂಗಾಯಿತರನ್ನಾಗಿ ಮಾಡಿಕೊಳ್ಳುವ’ಹೃದಯಾಂತರ ದೀಕ್ಷೆ’ ಎಂಬ ವಿನೂತನ ಕಾರ್ಯಕ್ರಮ. ಅಲ್ಲದೇ ಕೆಲವರು ಸನ್ಯಾಸದೀಕ್ಷೆಯನ್ನು ಬಯಸಿದರೆ ಅವರಿಗೆ ದೀಕ್ಷೆಯನ್ನು ಸಹ ನೀಡುತ್ತಾ ಬಂದಿದ್ದಾರೆ. ವೀರರಾಣಿಚೆನ್ನಮ್ಮನವರು ಲಿಂಗ್ಯೆಕ್ಯರಾದ ದಿನವನ್ನು ‘ಚೆನ್ನಮ್ಮ ಸ್ಮರಣೋತ್ಸವ’ ಕಾರ್ಯಕ್ರಮವನ್ನಾಗಿಆರಂಭಿಸಿದ ಕೀರ್ತಿ ಶ್ರೀಗಳದ್ದು. ಹೀಗೆ ಪ್ರಗತಿಪರ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಶ್ರೀಗಳು ಸಮಾಜದ ಕಣ್ತೆರೆಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.ಶ್ರೀಗಳು ಕೃಷಿ ಸಂಬಂಧಿತ, ರೈತ ಪರವಾದ ಒಲವು ಹೊಂದಿದ್ದು ದಾವಣಗೆರೆಯವಿರಕ್ತ ಮಠದಲ್ಲಿದ್ದಾಗಿನಿಂದಲೂ ಹಲವಾರು ರೈತ ಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ.ಆ ಮೂಲಕ ರೈತ ಬಾಂಧವರ ಸಮಸ್ಯೆಗಳಿಗೆ ದನಿಯಾಗಿದ್ದಾರೆ. ಅವುಗಳಲ್ಲಿ ಕೆಲವುದಾವಣಗೆರೆ ಜಿಲ್ಲೆಯ 19 ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಮಾಡಿದ್ದು, 2007ರಲ್ಲಿದಾವಣಗೆರೆ ನಗರದಲ್ಲಿ 7 ದಿನಗಳ ಕಾಲ ನೈಸರ್ಗಿಕ ಕೃಷಿ ಶಿಬಿರಗಳನ್ನು ಆಯೋಜಿಸಿಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಮುಂತಾದವು. ಹಾಗೂ ಶ್ರೀಗಳು ಸಂಕ್ರಾಂತಿಯದಿನದಂದು ‘ಬಸವ ಕೃಷಿ ಸಂಕ್ರಾಂತಿ’ ಆಚರಣೆಗೆ ಚಾಲನೆ ನೀಡಿದ್ದು ಬಸವ ಕೃಷಿ ರಾಷ್ಟ್ರೀಯಪ್ರಶಸ್ತಿಯನ್ನು ಅರ್ಹ ಸಾಧಕರನ್ನು ಗುರುತಿಸಿ ಪ್ರದಾನ ಮಾಡುತ್ತಾ ಬಂದಿದ್ದಾರೆ.ಈ ರೀತಿಯಾಗಿ ಶ್ರೀಗಳು ಶ್ರೀಮಠವನ್ನು ಕೇವಲ 6 ವರ್ಷಗಳಲ್ಲಿ ಅದ್ಭುತವೆನಿಸುವರೀತಿಯಲ್ಲಿ ಅಭಿವೃದ್ಧಿಪಡಿಸಿದ್ದು ಜೊತೆಯಲ್ಲಿ ಸಮಾಜದ ಒಗ್ಗೂಡುವಿಕೆಗೆ ಶ್ರಮಿಸುತ್ತಿದ್ದಾರೆ.ತಮ್ಮ ಹೋರಾಟಗಳ ಮೂಲಕ ಸಾಮಾಜಿಕ ಕಳಕಳಿಯ ಮೂಲಕ ನಾಡಿನ ಪ್ರಗತಿಪರಸ್ವಾಮಿಗಳ ಸಾಲಿನ ಪ್ರಮುಖರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ.
Swamiji
Swamiji Name :
ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು
Date of Birth :
22-12-1979
Place :
ನಲತವಾಡ, ಮುದ್ದೇಬಿಹಾಳ ತಾ||
Pattadikara :
12-2-2008
Photo :
Programs
ಪ್ರತಿ ತಿಂಗಳು 12ನೇ ತಾರೀಖು ಬಸವ ಸಂಗಮ ಕಾರ್ಯಕ್ರಮ.
ಪ್ರತಿ ಜನವರಿಯಲ್ಲಿ ಕೃಷಿ ಸಂಕ್ರಾಂತಿ ಹಾಗೂ ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಫೆಬ್ರವರಿ 2ರಂದು ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನವರ ಸ್ಮರಣೋತ್ಸವ.
ಫೆಬ್ರವರಿ 12ರಂದು ಶ್ರೀಗಳ ಪೀಠಾರೋಹಣ ಉತ್ಸವ ಹಾಗೂ ಸಮಾವೇಶ. ಬಸವ ಜಯಂತಿ ಆಚರಣೆ, ವಿವಿಧ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ಇಷ್ಟಲಿಂಗ ದೀಕ್ಷೆ ಅಭಿಯಾನ,
ಪ್ರತಿ ಸೋಮವಾರ ಮನೆ-ಮನದಲ್ಲಿ ಕೂಡಲ ಸಂಗಮ, ಕಡೆಯ ಸೋಮವಾರ ಬಸವ ಪಂಚಮಿ. ಅಕ್ಟೋಬರ್ 23ರಿಂದ ನವೆಂಬರ್ 23ರವರೆಗೆ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವ. ಡಿಸೆಂಬರ್ 31ರಂದು ವಚನ ವರ್ಷ.