ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕೇಂದ್ರದಿಂದ ಕೇವಲ 6 ಕಿ.ಮೀ.ಅಂತರದಲ್ಲಿರುವ ಕೆರೆಗೋಡಿ – ರಂಗಾಪುರ ಸುಕ್ಷೇತ್ರವು 400 ವರ್ಷಗಳಿಗೂ ಅಧಿಕ ಭವ್ಯಇತಿಹಾಸವನ್ನು ಹೊಂದಿ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾಗಿಗುರುತಿಸಿಕೊಂಡಿದೆ. ಶ್ರೀ ಮಠದ ಕರ್ತೃಗುರುಗಳನ್ನಾಗಿ ಶ್ರೀ ಗುರು ಪರದೇಶಿಕೇಂದ್ರಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದು ಅಂದಿನಿಂದ ಇಂದಿನವರೆಗೂ ಶ್ರೀ ಮಠದ ಪಟ್ಟಕ್ಕೆಬರುವ ಎಲ್ಲಾ ಶ್ರೀಗಳನ್ನು ಕರ್ತೃ ಗುರುಗಳ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಪ್ರಸ್ತುತಏಳನೇ ಶ್ರೀಗಳಾದ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು ಅಧಿಕಾರದಲ್ಲಿದ್ದಾರೆ.ಸುಮಾರು 400 ವರ್ಷಗಳ ಹಿಂದೆ ಶಿವಯೋಗಿಗಳೊಬ್ಬರು ಲೋಕ ಸಂಚಾರಮಾಡುತ್ತಾ ಈ ಭಾಗಕ್ಕೆ ಬಂದು, ಇಲ್ಲಿನ ನಿರ್ಜನ ಪ್ರದೇಶದಲ್ಲಿ ಅನುಷ್ಠಾನದಲ್ಲಿದ್ದಾಗ ಭಕ್ತರುಗುರುಗಳ ಅನುಷ್ಠಾನ ಶಕ್ತಿಗೆ ಶರಣಾಗಿ ಗುರುಗಳ ನಿತ್ಯಪೂಜೆಗೆ ವ್ಯವಸ್ಥೆ ಮಾಡತೊಡಗುತ್ತಾರೆ,ಮುಂದೆ ಮಠವನ್ನು ಕಟ್ಟಿಕೊಡುತ್ತಾರೆ. ಇಷ್ಠಾದರೂ ಗುರುಗಳು ಯಾರು, ಎಲ್ಲಿಯವರುಎಂಬುದು ತಿಳಿಯುದಿಲ್ಲ. ಗುರುಗಳು ತಮ್ಮ ಹೆಸರನ್ನು ಪರದೇಶಿ ಎಂದೇಕರೆದುಕೊಳ್ಳುತ್ತಿದ್ದರಿಂದ ರೂಢಿಗತವಾಗಿ ಶ್ರೀ ಪರದೇಶಿಕೇಂದ್ರ ಮಹಾಸ್ವಾಮಿಗಳು ಎಂಬಹೆಸರು ಬಳಕೆಯಾಗತೊಡಗಿತು. ಮುಂದೆ ಶ್ರೀ ಮಠದ ಧಾರ್ಮಿಕ ಆಚರಣೆಗಳು ಹೆಚ್ಚಾಗತೊಡಗಿ ಭಕ್ತರ ಹರಿಯುವಿಕೆ ಹೆಚ್ಚತೊಡಗಿತು. ಗುರುಗಳು ಭಿಕ್ಷಾಟನೆ ಮಾಡಿ ಮಠದದಾಸೋಹ ಕ್ರಿಯೆಯನ್ನು ಚುರುಕುಗೊಳಿಸಿದರು. ಅಂದು ಪ್ರಾರಂ¨s Àಗೊಂಡದಾಸೋಹಕ್ರಮವು ಇಂದಿನವರೆಗೂ ಮುಂದುವರೆದಿದೆ.ತದನಂತರ ಎರಡನೇ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು ಇಪ್ಪತ್ತುವರ್ಷಗಳಿಗೂ ಅಧಿಕಕಾಲ ಶ್ರೀ ಮಠವನ್ನು ಮುನ್ನಡೆಸಿದ್ದು ಸಮಾಜದಲ್ಲಿ ಸಮಾನತೆಯಕನಸು ಕಂಡವರು. ನಂತರದ ಮೂರನೇ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳುಸಂಚಾರ ಮೂರ್ತಿಗಳಾಗಿದ್ದು ಕಾಯಕ ನಿಷ್ಠೆಯುಳ್ಳವರಾಗಿದ್ದರು. ಇವರು ಈ ಭಾಗದಅನೇಕ ದೇವಳಗಳನ್ನು ಜೀರ್ಣೋದ್ಧಾರ ಮಾಡಿದ್ದು, ಶ್ರೀ ಮಠದ ದಾಸೋಹಕ್ರಿಯೆಗೆಆದಾಯ ಮೂಲಗಳನ್ನು ಗುರುತಿಸಿ ಸ್ವಾವಲಂಬಿಯಾಗುವಂತೆ ಮಾಡಿದ್ದರು.ಪರಂಪರೆಯ ನಾಲ್ಕನೇ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು ಕುದುರೆಸವಾರಿ ಮಾಡುತ್ತಾ ಊರೂರು ಸಂಚರಿಸಿ ತಮ್ಮ ಪವಾಡಗಳಿಂದ ಹೆಸರಾದವರು. ಶ್ರೀಗಳುತಮ್ಮ ಕಾಯಕನಿಷ್ಠೆಯಿಂದ ಶ್ರೀ ಮಠದ ಸ್ಥಿರ ಆಸ್ತಿಯನ್ನು ಅಭಿವೃದ್ಧಿಗೊಳಿಸಿ ಶ್ರೀ ಮಠಕ್ಕೆಆದಾಯ ಮೂಲವನ್ನಾಗಿ ಪರಿವರ್ತಿಸಿದರು. ಇವರ ಕಾಲದಲ್ಲಿ ತೇರುಮನೆ, ಕಲ್ಲುಬಾವಿ,ಮಜ್ಜನಬಾವಿ, ರಥೋತ್ಸವಕ್ಕೆ ಸುಂದರವಾದ ರಥವನ್ನು ಮಾಡಿಸಿದ್ದರು. ಇವರು ಮಠದಭವಿಷ್ಯನಿದಿಯಾಗಿರಲಿ ಎಂಬ ಕಾರಣಕ್ಕೆ ಅಪಾರ ಬೆಳ್ಳಿ ನಾಣ್ಯಗಳನ್ನು ಸಂಗ್ರಹಿಸಿದ್ದಾರೆಂದುತಿಳಿದು ಬರುತ್ತದೆ.ಮಹಾಸ್ವಾಮಿಗಳು ಶ್ರೀ ಮಠವನ್ನು ಆರ್ಥಿಕವಾಗಿ ಸದೃಢಗೊಳಿಸಿದ್ದಲ್ಲದೆ ಸಂಚಾರಕೈಗೊಂಡು ಜನರಲ್ಲಿ ಧರ್ಮಜಾಗೃತಿಯನ್ನುಂಟು ಮಾಡಿದರು. ರೈತರ, ಬಡವರ ಕಷ್ಟಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಶ್ರೀಗಳು 1940ರಲ್ಲಿ 6ನೇ ಶ್ರೀ ಗುರು ಪರದೇಶಿಕೇಂದ್ರಮಹಾಸ್ವಾಮಿಗಳಿಗೆ ಪಟ್ಟವನ್ನು ವಹಿಸಿ 1947ರಲ್ಲಿ ಜೀವಂತ ಸಮಾದಿಯಾದರು. ಆರನೇಶ್ರೀಗಳು ಚಿಕ್ಕ ವಯಸ್ಸಿನಲ್ಲಿಯೇ ಗುರುಗಳ ಸೇವೆಯಲ್ಲಿ ಪರಿಪಕ್ವಗೊಂಡವರು. ಶ್ರೀಗಳುಮಹಾ ಕಾಯಕಯೋಗಿಗಳಾಗಿ ಭಕ್ತರನ್ನು ಸಂಪಾದಿಸುತ್ತಾ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಗೊಳಿಸಿದರು. ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಈ ಭಾಗದ ಗ್ರಾಮೀಣಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರು.ಈಗಿನ ಶ್ರೀಗಳಾದ ಏಳನೇ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು ವೇದಸಂಸ್ಕøತಗಳನ್ನು ಅರಿತವರಾಗಿದ್ದು ಹಿರಿಯ ಗುರುಗಳ ಮಾರ್ಗದರ್ಶನದಂತೆ 1976ರಫೆಬ್ರವರಿ 4ರಂದು ಶ್ರೀ ಮಠದ ಪಟ್ಟಾಧಿಕಾರವನ್ನು ಸ್ವೀಕರಿಸುತ್ತಾರೆ. ಪರಂಪರೆಯ ಗುರುಗಳಹಾದಿಯಲ್ಲಿ ಸಾಗುತ್ತಿರುವ ಶ್ರೀಗಳು ಶ್ರೀ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆರೂಪಿಸಿಕೊಂಡು ಕಾರ್ಯತತ ್ಪರರಾಗಿದ್ದಾರೆ. ಹಿಂದಿನ ಗುರುಗಳು ಸಾ್ಥಪಿಸಿದ್ದವಿದ್ಯಾಸಂಸ್ಥೆಯನ್ನು ಉನ್ನತೀಕರಿಸಿ ಅನೇಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಅನಾಥಬಡ ಮಕ್ಕಳ ಸೇವೆಯಲ್ಲಿ ನಿರತರಾಗಿರುವ ಶ್ರೀಗಳು ಶ್ರೀ ಮಠದಲ್ಲಿ ನಿತ್ಯ ದಾಸೋಹದಕ್ರಮಗಳಿಂದಾಗಿ ಹೆಸರಾಗಿದ್ದಾರೆ. ಈ ನಿರಂತರ ಮಹಾದಾಸೋಹಕ್ಕೆ ಸ್ವಾಮಿಗಳು ಭಿಕ್ಷಾಟನೆಗೆಹೋದಾಗ ಭಕ್ತರು ಮಠಕ್ಕೆಂದು ಮೀಸಲಿರಿಸಿದ ಧಾನ್ಯ, ಕಾಳುಗಳು ಮತ್ತುತೆಂಗಿನಕಾಯಿಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಶ್ರೀಗಳು ಈ ರೀತಿಯಾಗಿ ಶ್ರೀ ಮಠವನ್ನುತಮ್ಮ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ದಾಸೋಹದ ಕಾರ್ಯಚಟುವಟಿಕೆಗಳಮೂಲಕ ಶ್ರೀ ಮಠನನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.ಶ್ರೀ ಮಠದ ವಿಶೇಷತೆಯೆಂದರೆ ಶೈವ-ವೈಷ್ಣವರ ಸಮ್ಮಿಲನ, ಕೆರೆಯ ಏರಿಗೆಅಂಟಿಕೊಂಡಂತೆ ಶಂಕರೇಶ್ವರ ದೇವಾಲಯವಿದ್ದು, ಪರದೇಶಿ ಮಠದ ಸಮುಚ್ಚಯದಲ್ಲಿರಂಗನಾಥಸ್ವಾಮಿ ದೇವಾಲಯವಿದೆ. ಈ ಎರಡೂ ದೇವಸ್ಥಾನಗಳಲ್ಲಿ ವೀರಶೈವ ಅರ್ಚಕರೇಪೂಜೆಯನ್ನು ಸಲ್ಲಿಸುತ್ತಿದ್ದಾರೆ. ದೇವಾಲಯದ ಆವರಣದಲ್ಲಿ ಬೃಂದಾವನ, ನಾಗರಕಲ್ಲುಗಳುಮತ್ತು ಮೂವತ್ತು ಅಡಿ ಎತ್ತರದ ದೀಪಸ್ಥಂಭಗಳು ಸ್ಥಾಪನೆಗೊಂಡಿವೆ. ಇಂತಹ ವೈಶಿಷ್ಟ್ಯಪೂರ್ಣ ದೇವಾಲಯಗಳನ್ನು ಗುರುಗಳು ಜೀರ್ಣೋದ್ಧಾರ ಮಾಡಿಸಿದ್ದಾರೆ.
Swamiji
Swamiji Name :
ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು
Date of Birth :
05-04-1953
Place :
ರಂಗಾಪುರ, ತಿಪಟೂರು ತಾ||
Pattadikara :
04-02-1976
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಮಾಘ ಮಾಸದಲ್ಲಿ "ಶ್ರೀ ಗುರು ಸಪ್ತಾಹ" ಕಾರ್ಯಕ್ರಮ ಪಾಲ್ಗುಣ ಮಾಸದಲ್ಲಿ ಶ್ರೀ ಮಠದ ಜಾತ್ರೆ ದಸರಾದಲ್ಲಿ ದಸರ ಮಹೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಭೀಮನ ಅಮಾವಾಸ್ಯೆಗೆ ವಿಶೇಷ ಪೂಜೆ, ಉತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಸಂಸ್ಕøತ ವೇದ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿ ಪೂರ್ವ / ಡಿ.ಎಡ್., ಕಾಲೇಜು ಐ.ಟಿ.ಐ. / ಡಿಪ್ಲೊಮಾ ಕಾಲೇಜು ವಿದ್ಯಾರ್ಥಿ ನಿಲಯ ಅನಾಥಾಲಯ ಗೋಶಾಲೆ
Photos
Full Address Kannada
ಕರಗೋಡಿ ರಂಗಾಪುರ ಸುಕ್ಷೇತ್ರ ರಂಗಾಪುರ - 572 201 ತಿಪಟೂರು ತಾ||, ತುಮಕೂರು ಜಿಲ್ಲೆ