Chittaragi Shree Vijaya Tirtha

Chittaragi Shree Vijaya Tirtha Claimed

ಚಿತ್ತರಗಿ ಶ್ರೀ ವಿಜಯಮಹಾಂತ ತೀರ್ಥ

Average Reviews

Description

ಚಿತ್ತರಗಿ ಶ್ರೀ ವಿಜಯಮಹಾಂತ ತೀರ್ಥ

ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಸುಕ್ಷೇತ್ರ

ವಿಶೇಷತೆ: ಸರ್ವರೋಗಕ್ಕೂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನ ಲಭ್ಯವಿದೆ.

ಬಾಗಲಕೋಟೆ ಜಿಲ್ಲೆಯ ಶಿರೂರು ಮತ್ತು ಕಮತಗಿ ಗ್ರಾಮಗಳ ನಡುವಿನಲ್ಲಿ ಜಿಲ್ಲಾಕೇಂದ್ರದಿಂದ 17 ಕಿ,ಮೀ. ದೂರದಲ್ಲಿರುವ ಚಿತ್ತರಗಿ ಶ್ರೀ ವಿಜಯ ಮಹಾಂತ ತೀರ್ಥವು(ಶಿವಯೋಗ ಮತ್ತು ನಿಸರ್ಗ ಚಿಕಿತ್ಸಾಲಯ) ಈ ಭಾಗದ ಪ್ರಮುಖ ಯೋಗ ಹಾಗೂ ಪ್ರಕೃತಿಚಿಕಿತ್ಸಾಕೇಂದ್ರವಾಗಿ ಕಂಗೊಳಿಸುತ್ತಿದೆ.ಶ್ರೀಮಠವು ಶಿರೂರು ಗ್ರಾಮದಿಂದ 4 ಕಿ.ಮೀ. ದೂರದ ಪ್ರಕೃತಿ ರಮ್ಯತಾಣದಲ್ಲಿಸ್ಥಾಪಿತಗೊಂಡಿದ್ದು ಚಿತ್ತರಗಿ ಶ್ರೀ ವಿಜಯಮಹಾಂತತೀರ್ಥ ಸುಕ್ಷೇತ್ರವೆಂದು ಹೆಸರುವಾಸಿಯಾಗಿದೆ. ಈ ಸ್ಥಳದಲ್ಲಿ ಇಳಕಲ್ಲು ಶ್ರೀ ವಿಜಯ ಮಹಾಂತ ಸ್ವಾಮಿಗಳು ತಪೋನುಷ್ಠಾನಕೈಗೊಂಡು ಪುಣ್ಯಕ್ಷೇತ್ರವನ್ನಾಗಿ ಮಾರ್ಪಡಿಸಿ ಶ್ರೀಮಠವನ್ನು ಸ್ಥಾಪಿಸಿದ್ದಾರೆ.ಶ್ರೀಮಠಕ್ಕೆ ಪ್ರಥಮ ಗುರುಗಳಾಗಿ ನೇಮಕಗೊಂಡ ಶ್ರೀ ಮ.ನಿ.ಪ್ರ. ಡಾ||ಬಸವಲಿಂಗ ಸ್ವಾಮಿಗಳು ಈ ಸುಕ್ಷೇತ್ರದಲ್ಲಿ ಶಿವಯೋಗ ಮತ್ತು ನಿಸರ್ಗ ಚಿಕಿತ್ಸಾಲಯವನ್ನುಆರಂಭಿಸಿ ಸರ್ವಜನರ ಆರೋಗ್ಯವನ್ನು ಕಾಪಾಡಲು ಬೇಕಾಗುವ ಯೋಗ ಮತ್ತು ಪ್ರಕೃತಿಚಿಕಿತ್ಸೆಗಳನ್ನು ನೀಡುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆಸಾಮಾಜಿಕವಾಗಿಯೂ ಕ್ರಿಯಾಶೀಲರಾಗಿದ್ದು ಶ್ರೀ ಮಠದ ಉನ್ನತಿಗೆ ಕಾರಣರಾಗಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕ ಆಚರಣೆಗಳತ್ತ ಗಮನ ಕೊಡದೆ, ಗೋಶಾಲೆ, ಪ್ರಕೃತಿಚಿಕಿತ್ಸೆ, ಶಿವಯೋಗ, ವಿಭೂತಿ ತಯಾರಿಕೆ, ನಿಸರ್ಗದ ಬಗ್ಗೆ ತರಬೇತಿ ಮುಂತಾದಯೋಜನೆಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಜೊತೆಯಲ್ಲಿ ಪ್ರತಿ ತಿಂಗಳುನಾಡಿನ ನಾನಾ ಭಾಗಗಳ ಹಳ್ಳಿಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರಗಳನ್ನುನಡೆಸುತ್ತಲಿದ್ದಾರೆ. ಹಾಗೂ ಏಪ್ರಿಲ್, ಮೇ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಯೋಗಪ್ರಕೃತಿ ಚಿಕಿತ್ಸಾ ಶಿಬಿರಗಳನ್ನು ನಡೆಸಿ ಸಾವಿರಾರು ಜನರಿಗೆ ಯೋಗವನ್ನು ತಲುಪಿಸುತ್ತಿದ್ದಾರೆ.ಶ್ರೀಗಳು ಉತ್ತಮ ವಾಗ್ಮಿಗಳಾಗಿದ್ದು ಶರಣರ ತತ್ವಗಳನ್ನು ತಮ್ಮದೇ ಆದಶೈಲಿಯಲ್ಲಿ ಸರಳೀಕರಿಸಿ ಜನರಿಗೆ ಮುಟ್ಟಿಸುತ್ತಿದ್ದಾರೆ. ಪ್ರತಿ ತಿಂಗಳು ಶರಣತತ್ವ ಚಿಂತನಾಗೋಷ್ಠಿಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆನೀಡುತ್ತಿದ್ದಾರೆ. ಹಾಗೂ ಸೀಗೇಹುಣ್ಣಿಮೆ ಆದ 5ನೇ ದಿನಕ್ಕೆ “ಶರಣ ಸಂಸ್ಕøತಿ ಮಹೋತ್ಸವ”ಏರ್ಪಡಿಸಿ ಜ್ಞಾನದಾಸೋಹವನ್ನು ಉಣಬಡಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಡಾ. ಬಸವಲಿಂಗ ಸ್ವಾಮಿಗಳು
Date of Birth :
12-6-1952
Place :
ಸತ್ತಿ, ಅಥಣಿ ತಾ||
Pattadikara :
1999
Photo :

Programs

ಪ್ರತಿ ತಿಂಗಳು ನಾಡಿನ ನಾನಾ ಭಾಗಗಳ ಹಳ್ಳಿಗಳಲ್ಲಿ
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರಗಳು.
ಏಪ್ರಿಲ್, ಮೇ ಹಾಗೂ ಅಕ್ಟೋಬರ್‍ನಲ್ಲಿ
ಯೋಗ ಪ್ರಕೃತಿ ಚಿಕಿತ್ಸಾ ಶಿಬಿರಗಳು.
ಸೀಗೇ ಹುಣ್ಣಿಮೆ ಆದ ಐದನೇ ದಿನಕ್ಕೆ ಶರಣ ಸಂಸ್ಕøತಿ ಉತ್ಸವ.
ಚಿತ್ತರಗಿ ಶ್ರೀ ವಿಜಯಮಹಾಂತ ತೀರ್ಥ
(ಶಿವಯೋಗ ಮತ್ತು ನಿಸರ್ಗ ಚಿಕಿತ್ಸಾಲಯ)

Photos

Full Address Kannada

ಚಿತ್ತರಗಿ ಶ್ರೀ ವಿಜಯಮಹಾಂತ ತೀರ್ಥ
ಶಿರೂರು - 587 120
ಬಾಗಲಕೋಟೆ ತಾ|| ಜಿ||

Map

Near by Places

ಶಿರೂರು - 4 ಕಿ.ಮೀ.
ಕಮತಗಿ - 8 ಕಿ.ಮೀ.
ಬಾಗಲಕೋಟೆ - 17 ಕಿ.ಮೀ.
ಹುನಗುಂದ - 30 ಕಿ.ಮೀ.

Statistic

14 Views
0 Rating
0 Favorite
0 Share
error: Content is protected !!