ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಹಾಗೂ ಸಂಯಮ ಪ್ರಶಸ್ತಿ ವಿಜೇತರು,
ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕøತರು
ಪ್ರಶಸ್ತಿಗಳು :
ಬಸವ ಗುರು ಕಾರುಣ್ಯ ಪ್ರಶಸ್ತಿ
ಬಸವ ಭೂಷಣ ಪ್ರಶಸ್ತಿ
ಭಕ್ತಿ ಭೂಷಣ ಪ್ರಶಸ್ತಿ
ಶಂಕರಣ್ಣ ನಾಗರಾಳು ಒಣಬೇಸಾಯ ಪುರಸ್ಕಾರ
ಲಿಂಗಾಯತ ಧರ್ಮ ಗ್ರಂಥ ಬಹುಮಾನ.
ವಿಶೇಷತೆ :
ಮಹಾಂತ ಜೋಳಿಗೆ ಕಾರ್ಯಕ್ರಮ. (ಕಳೆದ 40 ವರ್ಷಗಳಿಂದ ಹಳ್ಳಿಗಳಲ್ಲಿ ಹಾಗೂ
ಶಾಲಾಕಾಲೇಜುಗಳಲ್ಲಿ ಶ್ರೀಗಳಿಂದ ಕಾರ್ಯಕ್ರಮ)
ಭಾರತೀಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ನಿರಂಜನ ದೀಕ್ಷೆ ನೀಡಿರುವುದು.
ಪ್ರಕಾಶನ :
ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಧರ್ಮ ಪ್ರಸಾರಕ ಮಂಡಳಿ.
ಇಲ್ಲಿಯವರೆಗೆ ಪ್ರಕಟಿತಗೊಂಡ ಪುಸ್ತಕಗಳು – 121 ಪುಸ್ತಕಗಳು.
ತ್ರೈಮಾಸಿಕ ಪತ್ರಿಕೆ – ‘ಬಸವ ಬೆಳಗು’
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಲಕಲ್ಲ ಪಟ್ಟಣವು ತಾಲ್ಲೂಕುಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು ಪಟ್ಟಣದ ಮಧ್ಯಭಾಗದಲ್ಲಿ 12ನೇ ಶತಮಾನದಲ್ಲಿಅಲ್ಲಮ ಪ್ರಭುಗಳ ಶಿಷ್ಯ ಶ್ರೀ ಗುರುಮಹಾಂತ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠವು ಇಂದು ಕರ್ನಾಟಕದ ಪ್ರಮುಖಮಠಗಳಲ್ಲೊಂದಾಗಿ ಸಾಮಾಜಿಕ ಕ್ರಾಂತಿಯ ರೂವಾರಿಯಾಗಿದೆ.ಚಿತ್ತರಗಿಯಿಂದ ಪ್ರಾರಂಭವಾದ ಶ್ರೀಮಠದ ಪರಂಪರೆಯು ನಂತರ ಇಲಕಲ್ಲಿನಲ್ಲಿಮುಂದುವರೆದಿದೆ. 15ನೇ ಶತಮಾನವೆಂದರೆ ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿಮರೆಯಲಾಗದ ಕಾಲಘಟ್ಟ. ಕಾರಣ ಉತ್ತರದ ಕಡೆಯಿಂದ ಬಂದ ಶಿವಶರಣರು ಹಾಗೂಪ್ರಮುಖವಾಗಿ ದಕ್ಷಿಣದ ಕಡೆಯಿಂದ ತಮ್ಮ ನೂರೊಂದು ಶರಣರೊಂದಿಗೆ ಸಂಚಾರಹೊರಟ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಕಾಲಘಟ್ಟ.
ಶ್ರೀ ತೋಂಟದ ಸಿದ್ದಲಿಂಗೇಶ್ವರರು ತಮ್ಮ ಅಪಾರ ಶಿಷ್ಯರೊಂದಿಗೆ ಧಾರ್ಮಿಕಪ್ರಚಾರ ಮಾಡುತ್ತಾ ಅಲ್ಲಲ್ಲಿ ಅನುಷ್ಠಾನಗೊಂಡು, ಅನುಷ್ಠಾನಗೊಂಡಲ್ಲೆಲ್ಲಾ ಮಠಗಳನ್ನುಸ್ಥಾಪಿಸುತ್ತಾ ತಮ್ಮ ಶಿಷ್ಯರನ್ನು ಅಲ್ಲಲ್ಲಿ ಉಳಿಸುತ್ತಾ ಸಾಗಿದರು. ಹೀಗೆ ಚಿತ್ತರಗಿಗೆಬಂದಿರಬಹುದಾದ ಶ್ರೀ ತೋಂಟದ ಸಿದ್ದಲಿಂಗರು ಇಲ್ಲಿ ಅನುಷ್ಠಾನಗೊಂಡು ಇಲ್ಲಿದ್ದ 12ನೇಶತಮಾನದಲ್ಲಿ ಸ್ಥಾಪಿತಗೊಂಡಿದ್ದ ಮಠಕ್ಕೆ ತಮ್ಮ ಶಿಷ್ಯರಾದ ಶ್ರೀ ವಿಜಯ ಮಹಾಂತದೇಶಿಕರಿಗೆ ಅಧಿಕಾರವನ್ನು ನೀಡಿ ಮುನ್ನಡೆದಿದ್ದಾರೆ ಎಂದು ತಿಳಿದು ಬರುತ್ತದೆ.ಶ್ರೀ ವಿಜಯ ಮಹಾಂತ ದೇಶಿಕರಿಂದ ಮುಂದುವರೆದ ಮಠದ ಗುರುಪರಂಪರೆಇಲ್ಲಿಯವರೆಗೂ 20 ಜನ ಶ್ರೀಗಳವರೆಗೆ ಮುಂದುವರೆದಿದೆ. ಆದರೆ ಮೊದಲ 14 ಜನ ಶ್ರೀಗಳಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. 15ನೇ ಶ್ರೀಗಳಾದ ಶ್ರೀ ಗುರು ಮಹಾಂತ ಸ್ವಾಮಿಗಳಿಂದೀಚಿನ ಇತಿಹಾಸವು ನಿಖರವಾಗಿ ಲಭ್ಯವಿದೆ. ಶ್ರೀ ಗುರು ಮಹಾಂತ ಸ್ವಾಮಿಗಳ ಕಾಲ1839 ರಿಂದ 1875 ಎಂದು ತಿಳಿದು ಬರುತ್ತದೆ.
ಚಿತ್ತರಗಿ ಪೀಠ ಪರಂಪರೆ (15ನೇ ಗುರುಗಳವರೆಗೆ)
ಶ್ರೀ ವಿಜಯ ಮಹಾಂತ ದೇಶಿಕರು (15ನೇ ಶತಮಾನ).
ಶ್ರೀ ರೇವಣ ಸಿದ್ದ ಸ್ವಾಮಿಗಳು (15ನೇ ಶತಮಾನ).
ಶ್ರೀ ಶಿವಲಿಂಗ ಸ್ವಾಮಿಗಳು (16ನೇ ಶತಮಾನ).
ಶ್ರೀ ಪುಟ್ಟಬಸವಲಿಂಗ ಸ್ವಾಮಿಗಳು (16ನೇ ಶತಮಾನ).
ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳು (17ನೇ ಶತಮಾನ).
ಶ್ರೀ ಚಿಕ್ಕಬಸವಲಿಂಗ ಸ್ವಾಮಿಗಳು (17ನೇ ಶತಮಾನ).
ಶ್ರೀ ಕಪ್ಪಿನ ಬಸವಲಿಂಗ ಸ್ವಾಮಿಗಳು (17ನೇ ಶತಮಾನ).
ಶ್ರೀ ದಿಗಂಬರ ಚನ್ನಬಸವ ಸ್ವಾಮಿಗಳು (17ನೇ ಶತಮಾನ).
ಶ್ರೀ ಬಸವಲಿಂಗ ಸ್ವಾಮಿಗಳು (17ನೇ ಶತಮಾನ).
ಶ್ರೀ ಚನ್ನಮಲ್ಲಸ್ವಾಮಿಗಳು (18ನೇ ಶತಮಾನ).
ಶ್ರೀ ಕೆಂಪಿನ ಬಸವಲಿಂಗ ಸ್ವಾಮಿಗಳು (19ನೇ ಶತಮಾನ).
ಶ್ರೀ ಹಿರಿಯ ಮಹಾಂತ ಸ್ವಾಮಿಗಳು (19ನೇ ಶತಮಾನ).
ಶ್ರೀ ಮರಿ ಮಹಾಂತ ಸ್ವಾಮಿಗಳು (19ನೇ ಶತಮಾನ)
ಶ್ರೀ ಮಹಾಂತ ಸ್ವಾಮಿಗಳು (19ನೇ ಶತಮಾನ).
ಶ್ರೀ ಗುರುಮಹಾಂತ ಸ್ವಾಮಿಗಳು (1839 ರಿಂದ 1875).
15ನೇ ಗುರುಗಳ ತರುವಾಯ ಶ್ರೀಮಠಕ್ಕೆ ಪೀಠಾಧಿಪತಿಗಳಾಗಿ ಬಂದವರೇ ಶ್ರೀವಿಜಯ ಮಹಾಂತ ಸ್ವಾಮಿಗಳು (1879-1911). ಶ್ರೀಗಳು ತಮ್ಮ ಬಾಲ್ಯಾವಸ್ಥೆಯಲ್ಲಿಯೇಆಧ್ಯಾತ್ಮಿಕತೆಯತ್ತ ಒಲವು ಹೊಂದಿ ಶ್ರೀ ಸಕ್ಕರೆ ಕರೆಡಪ್ಪನವರ ಪಾಠಶಾಲೆಯಲ್ಲಿ ಸಂಸ್ಕøತಹಾಗೂ ವಚನ ಸಾಹಿತ್ಯ ಅಧ್ಯಯನ ಮಾಡಿ ಚಿತ್ತರಗಿ-ಇಲಕಲ್ಲ ಪೀಠಾಧಿಪತಿಗಳಾಗಿನೇಮಕಗೊಂಡರು. ಇವರ ಕಾಲದಲ್ಲಿ ಇಲಕಲ್ಲ ಧಾರ್ಮಿಕ ಚಟುವಟಿಕೆಗಳ ಕೇಂದ್ರಸ್ಥಳವಾಗಿಬೆಳೆಯಿತು. ಶ್ರೀಗಳು ಆ ಕಾಲದಲ್ಲಿಯೇ ತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕಸಮಾಜದಲ್ಲಿ ಕ್ರಾಂತಿ ಮಾಡಿದವರು.ಶ್ರೀ ವಿಜಯ ಮಹಾಂತ ಸ್ವಾಮಿಗಳ ನಂತರ ದೋಟಿಹಾಳದ ಶ್ರೀ ಗುರುಮಹಾಂತ ಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಮಠವನ್ನು ಮುನ್ನಡೆಸಿದರು.ತದನಂತರ ಜಮಖಂಡಿಯ ಶ್ರೀ ಗುರುಮಹಾಂತ ಸ್ವಾಮಿಗಳು ಶ್ರೀಮಠದ ಅಧಿಕಾರವಹಿಸಿಕೊಂಡಿದ್ದು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದರು. ಇವರು 1963ರಲ್ಲಿಅಧಿಕಾರಕ್ಕೆ ಬಂದು ಶ್ರೀಮಠವನ್ನು ಶೈಕ್ಷಣಿಕವಾಗಿಯೂ ಗುರುತಿಸುವಂತೆ ಮಾಡಿದ್ದುಶ್ರೀಮಠದ ಅಭಿವೃದ್ಧಿಕಾರ್ಯಗಳಿಗೆ ನಾಂದಿ ಹಾಡಿದರು.ಈಗಿನ ಹಿರಿಯ ಶ್ರೀಗಳಾದ ಶ್ರೀ ಮ.ನಿ.ಪ್ರ. ಡಾ|| ಮಹಾಂತ ಶಿವಯೋಗಿಗಳು1970ರ ಮೇ 17ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡು ತಮ್ಮ ಪ್ರಗತಿಪರವಿಚಾರಧಾರೆಗಳಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಗುರುಗಳು ಜನರಲ್ಲಿನಮೌಢ್ಯ, ಕಂದಾಚಾರ, ಮೂಢನಂಬಿಕೆಗಳನ್ನು ಹೊಡೆದೋಡಿಸುವ ಕಾರ್ಯ ಮಾಡಿದ್ದಾರೆ.ಹಾಗೆಯೇ ದುಶ್ಚಟಗಳ ದಾಸರಾಗಿರುವ ಈಗಿನ ಪೀಳಿಗೆಯನ್ನು ಕಂಡು ಮಮ್ಮಲ ಮರುಗಿದಶ್ರೀಗಳು “ಮಹಾಂತ ಜೋಳಿಗೆ” ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದು ಆಮೂಲಕ ಸಾಮಾಜಿಕ ಪಿಡುಗುಗಳನ್ನು ದೂರ ಮಾಡುವ ಕ್ರಾಂತಿಕಾರಕ ಬೆಳವಣಿಗೆಗೆಕಾರಣರಾಗಿದ್ದಾರೆ. “ಮಹಾಂತ ಜೋಳಿಗೆ” ಎಂಬ ಕಾರ್ಯಕ್ರಮದ ರೂಪರೇಷೆಗಳನ್ನುಸಿದ್ಧಪಡಿಸಿಕೊಂಡ ಶ್ರೀಗಳು ಮೊದಲು ಹಳ್ಳಿಗಳಲ್ಲಿನ ಮನೆ ಮನೆಗಳಿಗೆ ತೆರಳಿ ಅವರಲ್ಲಿನಮೌಢ್ಯ, ಮೂಢನಂಬಿಕೆ ಹಾಗೂ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿರೆಂದು ಜನರಮನಃಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದರು.ಶ್ರೀಗಳು ತಮ್ಮ ಮಠದಲ್ಲಿನ ರುದ್ರಾಭಿಷೇಕ ನಿಲ್ಲಿಸಿ ರುದ್ರಾಭಿಷೇಕದ ಬದಲಿಗೆವಚನಾಭಿಷೇಕವನ್ನು ನಡೆಸುತ್ತಿದ್ದಾರೆ. ಅಂದರೆ ಗದ್ದುಗೆಗಳ ಮೇಲೆ ಬಸವಾದಿ ಶಿವಶರಣರವಚನಗಳ ಕಟ್ಟುಗಳನ್ನು ಇಟ್ಟು ಅದರ ಮುಂದೆ ವಚನಗಳ ಪಠಣ ಮಾಡುವುದು. ಶ್ರೀಗಳುಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ವಿಸ್ತರಿಸಬೇಕೆಂದು ನಿರ್ಧರಿಸಿ ಬಸವಾದಿ ಶರಣರ ಲಿಂಗಾಯತ ಧರ್ಮದ ತತ್ವದ ನಿಯಮಗಳಂತೆ ತಮ್ಮ ಕೆಲವು ಶಾಖಾ ಮಠಗಳಿಗೆ ಹಿಂದುಳಿದ ವರ್ಗದಿಂದ ಬಂದ ವಟುಗಳಿಗೆ ಲಿಂಗದೀಕ್ಷೆ, ಜಂಗಮ ಸಂಸ್ಕಾರ ನೀಡಿಮಠಾಧಿಪತಿಗಳನ್ನಾಗಿ ನೇಮಿಸಿದ್ದಾರೆ. ಇದು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಫಲವಾಗಿದೆ. ಇದರಿಂದ ಲಿಂಗಾಯತ ಧರ್ಮದಿಂದ ದೂರ ಉಳಿದಿದ್ದ ಲಕ್ಷಾಂತರ ಜನರುಮತ್ತೆ ಲಿಂಗಾಯತ ಧರ್ಮವನ್ನು ಅನುಕರಣೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಉದಾ: ಮೊಳಕಾಲ್ಮೂರ ತಾಲ್ಲೂಕು, ಸಿದ್ದಯ್ಯನಕೋಟೆ ಮಠಕ್ಕೆ ಮಾದಾರಚೆನ್ನಯ್ಯ ಸಮುದಾಯದಿಂದ ಬಂದ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳನ್ನು,ಲಿಂಗಸೂರಿನ ಶಾಖಾಮಠಕ್ಕೆ ಲಂಬಾಣಿ ಜನಾಂಗದಿಂದ ಬಂದ ಶ್ರೀ ಮ.ನಿ.ಪ್ರ. ಸಿದ್ದಲಿಂಗಸ್ವಾಮಿಗಳನ್ನು ನೇಮಕ ಮಾಡಿದ್ದಾರೆ. ಅವರುಗಳು ಈಗ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.ಹಾಗೆಯೇ “ಕಾಯಕ ಸಂಜೀವಿನಿ” ಎಂಬ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿ ಅದರಮೂಲಕ ಬಡಜನರ ಕಲ್ಯಾಣಕ್ಕೆ ಪೂರಕ ವಾತಾವರಣವನ್ನು ಸೃಷ್ಠಿಸಿದ್ದಾರೆ. ಶ್ರೀಗಳು ಕೇವಲಧಾರ್ಮಿಕ, ಸಾಮಾಜಿಕವಾಗಿ ಅಲ್ಲದೇ ಶೈಕ್ಷಣಿಕವಾಗಿಯೂ ಬಡ, ನಿರ್ಗತಿಕ ಜನರ ಮಕ್ಕಳಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಹಾಗೂ ಶ್ರೀಮಠದ ವತಿಯಿಂದ ವಚನ ಪಾಠಶಾಲೆ, ಸಂಗೀತಶಾಲೆಗಳು ಸೇರಿದಂತೆ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಲಿದ್ದಾರೆ.ಶ್ರೀಗಳು ವರ್ಷಪೂರ್ತಿ ಸಾಮಾಜಿಕವಾಗಿ ಕಾರ್ಯೋನ್ಮುಖರಾಗಿದ್ದು ವರ್ಷದಲ್ಲಿಎರಡು ಬಾರಿ ಹತ್ತು ದಿನಗಳ ಕಾರ್ಯಕ್ರಮ ಆಯೋಜಿಸಿ, ಅದರಲ್ಲಿ ವಚನ ಸಾಹಿತ್ಯ,ಲಿಂಗದೀಕ್ಷೆ, ಇಷ್ಟಲಿಂಗ ಪೂಜೆ, ನೀತಿ, ಶೀಲ, ಚಾರಿತ್ರ್ಯ, ರಾಷ್ಟ್ರೀಯತೆ ಹಾಗೂ ಸಾಮಾಜಿಕಮೌಲ್ಯಗಳ ಬಗ್ಗೆ ಪ್ರವಚನಗಳು, ಉಪನ್ಯಾಸಗಳನ್ನು ಏರ್ಪಡಿಸಿ ಅದರ ಮೂಲಕ ಜನರಿಗೆಸಾಮಾಜಿಕ ಹಾಗೂ ಆಧ್ಯಾತ್ಮಿಕ ಅರಿವನ್ನುಂಟು ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲೇಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ನಿರಂಜನ ದೀಕ್ಷೆ ನೀಡಿರುವ ಹೆಗ್ಗಳಿಗೆ ಶ್ರೀಮಠದ್ದಾಗಿದೆ.ಶ್ರೀ ಮ.ನಿ.ಪ್ರ. ಡಾ. ಮಹಾಂತ ಸ್ವಾಮಿಗಳು ಮುಧೋಳ ತಾಲ್ಲೂಕಿನ ನಾಗನೂರು ಗ್ರಾಮದಬಸವ ಮಹಾಮಠದ ಶ್ರೀ ಮ.ನಿ.ಪ್ರ. ಬಸವಗೀತಾ ತಾಯಿಯವರಿಗೆ ಮತ್ತು ಬೀದರ್ತಾಲ್ಲೂಕಿನ ಮಲ್ಲಾಪುರ ಗ್ರಾಮದ ಮಠದ ಶ್ರೀ ಮ.ನಿ.ಪ್ರ. ಬಸವಾಂಜಲಿ ತಾಯಿಯವರಿಗೆನಿರಂಜನ ಜಂಗಮ ದೀಕ್ಷೆ ನೀಡಿ ಧಾರ್ಮಿಕ ಲಿಂಗಸಮಾನತೆಯನ್ನು ಪೂರ್ಣಗೊಳಿಸಿದುದುಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಹಾಗೂ ಶ್ರೀಗಳು ಸಾಹಿತ್ಯಿಕವಾಗಿಯೂ ಕಾರ್ಯತತ್ಪರರಾಗಿದ್ದು ‘ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಧರ್ಮ ಪ್ರಸಾರಕಮಂಡಳಿ’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ನೂರಾರು ಅಪರೂಪದಕೃತಿಗಳ ಪ್ರಕಟಣೆ ಮಾಡಿದ್ದಾರೆ.ಶ್ರೀ ಮಹಾಂತ ಶಿವಯೋಗಿಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂಸಾಧನೆಯನ್ನು ಗುರುತಿಸಿ ಅವರನ್ನು ಹುಡುಕಿಕೊಂಡು ನೂರಾರು ಪ್ರಶಸ್ತಿ, ಪುರಸ್ಕಾರಗಳುಬಂದಿವೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ಶ್ರೀಗಳಿಗೆ ರಾಷ್ಟ್ರೀಯ ಬಸವ ಪುರಸ್ಕಾರಹಾಗೂ ಸಂಯಮ ಪ್ರಶಸ್ತಿಗಳನ್ನು ನೀಡಿ ಆದರಿಸಿದೆ. ಹಾಗೂ ಇಂತಹ ನೂರಾರುಪುರಸ್ಕಾರ ಸನ್ಮಾನಗಳಿಂದ ಶ್ರೀಗಳು ಸಾಮಾಜಿಕ ಸಮನ್ವಯದ ರೂವಾರಿಗಳಾಗಿದ್ದಾರೆ.ಶ್ರೀಗಳು 2004ರ ಸೆಪ್ಟಂಬರ್ 12ರಲ್ಲಿ ಶ್ರೀ ಮ.ನಿ.ಪ್ರ. ಗುರು ಮಹಾಂತಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು ಪಟ್ಟಾಧಿಕಾರದಅನುಗ್ರಹ ನೀಡಿದ್ದಾರೆ. ಶ್ರೀ ಗುರು ಮಹಾಂತ ಸ್ವಾಮಿಗಳು ತಮ್ಮ ಹಿರಿಯ ಗುರುಗಳಂತೆಯೇಹೆಚ್ಚು ಕ್ರಿಯಾಶೀಲತೆಯಿಂದ ಅವರ ಮಾರ್ಗದರ್ಶನದಲ್ಲಿ ಸಮಾಜದ ಅಭಿವೃದ್ಧಿಗೆಶ್ರಮಿಸುತ್ತಿದ್ದಾರೆ. ಶ್ರೀಗಳು ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಮಹಾಂತ ಜೋಳಿಗೆ,ಕಾಯಕ ಸಂಜೀವಿನಿ ಮುಂತಾದ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡುಬರುತ್ತಿದ್ದಾರೆ.ಉಭಯ ಶ್ರೀಗಳು ಶ್ರೀಮಠದಲ್ಲಿ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನುಹಮ್ಮಿಕೊಂಡು ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ. ಪ್ರತಿ ತಿಂಗಳು“ಮನೆಯಲ್ಲಿ ಮಹಾಮನೆ” ಕಾರ್ಯಕ್ರಮ, ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೋಸ್ಕರವೇ“ಶಿವಾನುಭವ ಗೋಷ್ಠಿ” ಈ ರೀತಿಯ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಬಾಲ್ಯದಲ್ಲಿಯೇಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಮಠದಲ್ಲಿ ಶ್ರಾವಣಮಾಸದಲ್ಲಿ “ಶರಣ ಸಂಸ್ಕøತಿ ಉತ್ಸವ”ವನ್ನು ಆಯೋಜಿಸಿ ಮಾಸಪೂರ್ತಿ ಹಬ್ಬವನ್ನಾಗಿಆಚರಿಸಲಾಗುತ್ತಿದೆ.ಶ್ರೀಮಠದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆಪ್ರತಿವರ್ಷ ಬಸವಗುರು ಕಾರುಣ್ಯ, ಬಸವ ಭೂಷಣ, ಭಕ್ತಿ ಭೂಷಣ ಪ್ರಶಸ್ತಿಗಳನ್ನು ನೀಡಿಗೌರವಿಸಲಾಗುತ್ತಿದೆ. ಹಾಗೂ ಬೇಸಾಯ ಪದ್ಧತಿಯ ನೂತನ ಅವಿಷ್ಕಾರಗಳಿಗೆಸಂಬಂಧಿಸಿದಂತೆ ಮತ್ತು ಅದರಲ್ಲಿಯ ಸಾಧನೆಗೆ ಶಂಕರಣ್ಣ ನಾಗರಾಳು ಒಣಬೇಸಾಯಪುರಸ್ಕಾರವನ್ನು ನೀಡಿ ರೈತರಲ್ಲಿ ಹುಮ್ಮಸ್ಸು ತುಂಬಲಾಗುತ್ತಿದೆ. ಲಿಂಗಾಯತ ಧರ್ಮಕ್ಕೆಸಂಬಂಧಿಸಿದಂತೆ ಪ್ರಕಟಣೆಗೊಳ್ಳುವ ಉತ್ತಮ ಗ್ರಂಥಗಳಿಗೆ ಲಿಂಗಾಯತ ಧರ್ಮಗ್ರಂಥಬಹುಮಾನವನ್ನು ನೀಡುತ್ತಿದ್ದು ಇದರಿಂದ ಧಾರ್ಮಿಕ ಗ್ರಂಥ ರಚನಕಾರರಿಗೆಉಪಯುಕ್ತವಾಗಿದೆ.
ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶಾಖಾಮಠಗಳು:
ಪ್ರತಿ ರವಿವಾರ ವಿದ್ಯಾರ್ಥಿಗಳಿಗೋಸ್ಕರ 'ಶಿವಾನುಭವ ಗೋಷ್ಠಿ'.
ಪ್ರತಿ ತಿಂಗಳು ಮಾಸಿಕ 'ಶಿವಾನುಭವ ಗೋಷ್ಠಿ'.
ಪ್ರತಿ ತಿಂಗಳಲ್ಲಿ ಒಂದು ದಿನ 'ಮನೆಯಲ್ಲಿ ಮಹಾಮನೆ'
ಕಾರ್ಯಕ್ರಮ. ಪ್ರತಿ ವರ್ಷದಲ್ಲಿ ಮೂರು ದಿನ 'ಇಷ್ಟಲಿಂಗ ಪೂಜೆ' ಕಾರ್ಯಕ್ರಮ.
ಶ್ರಾವಣ ಮಾಸದಲ್ಲಿ 'ಶರಣ ಸಂಸ್ಕøತಿ ಉತ್ಸವ'
(ಒಂದು ತಿಂಗಳ ಪರ್ಯಂತ). ಶ್ರೀಗಳ ಸಮ್ಮುಖದಲ್ಲಿ 'ಶರಣ ಸಿದ್ಧಾಂತ ಶಿಬಿರ'ಗಳ ಆಯೋಜನೆ
Institutions
ವಚನ ಪಾಠಶಾಲೆ.
ಸಂಗೀತ ಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆಗಳು.
ಪದವಿಪೂರ್ವ / ಪದವಿ ಕಾಲೇಜುಗಳು.
ಸ್ನಾತಕೋತ್ತರ ಪದವಿ ಕಾಲೇಜುಗಳು.
ಮಹಿಳಾ ಕಾಲೇಜು ಮತ್ತು ವಸತಿ ನಿಲಯಗಳು.
ಐ.ಟಿ.ಐ. ಕಾಲೇಜು / ಡಿಪ್ಲೊಮಾ ಕಾಲೇಜುಗಳು.
ಆಯುರ್ವೇದ ಕಾಲೇಜುಗಳು.
ವಿದ್ಯಾರ್ಥಿ ನಿಲಯಗಳು.
Photos
Full Address Kannada
ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ
ಇಲಕಲ್ಲ - 587 125
ಹುನಗುಂದ ತಾ||, ಬಾಗಲಕೋಟೆ ಜಿ||