Shree Gowrishankar Matha-Kabbur

Shree Gowrishankar Matha-Kabbur Claimed

ಶ್ರೀ ಗೌರಿಶಂಕರ ಮಠ - ಕಬ್ಬೂರ

Average Reviews

Description

ಶ್ರೀ ಗೌರಿಶಂಕರ ಮಠ – ಕಬ್ಬೂರ

ಕರ್ತೃ – ಪೂಜ್ಯ ಶ್ರೀ ಗೌರಿಶಂಕರ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕಬ್ದೂರ ಗ್ರಾಮದಲ್ಲಿ ಪೂಜ್ಯ ಶ್ರೀಗೌರಿಶಂಕರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಗೌರಿಶಂಕರಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮಠವು ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಗೌರಿಶಂಕರ ಮಠವು ಪುರಾತನ ಕಾಲದ್ದಾದರೂ ಶ್ರೀಮಠದ ಬಗ್ಗೆ ಹೆಚ್ಚಿನಮಾಹಿತಿಗಳ ಉಪಲಬ್ದತೆಯಿಲ್ಲ. ಬಹುಶಃ ಶ್ರೀಮಠವು ಅಧಿಕ ಕಾಲ ಖಾಲಿ ಉಳಿದಿದ್ದುಕರ್ತೃಗುರುಗಳ ಹೊರತಾಗಿ ನಂತರ ಬಂದಿರಬಹುದಾದ ಗುರುಗಳ ಬಗ್ಗೆ ಹೆಚ್ಚಿಗೆತಿಳಿದುಬರುವುದಿಲ್ಲ. ಪ್ರಸ್ತುತ ಶ್ರೀಗಳು 1992ರಲ್ಲಿ ಈ ಕ್ಷೇತ್ರಕ್ಕೆ ಆಗಮಿಸಿದಾಗ ಶ್ರೀಮಠವುಖಾಲಿ ಉಳಿದು ಜೀರ್ಣಗೊಂಡಿತ್ತು ಎಂದು ತಿಳಿದುಬರುತ್ತದೆ.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳುಹುಕ್ಕೇರಿಯವರಾಗಿದ್ದು ಪ್ರೌಢಶಿಕ್ಷಣ ಪೂರ್ಣಗೊಳಿಸಿ ನಂತರ ಮೈಸೂರಿನ ಶ್ರೀ ಜಪದಕಟ್ಟೆಮಠದಲ್ಲಿ ವೇದ, ಸಂಸ್ಕøತ, ಸಾಹಿತ್ಯಗಳನ್ನು ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ.ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಶ್ರೀಗಳು 1992ರಲ್ಲಿ ಶ್ರೀಮಠಕ್ಕೆ ಆಗಮಿಸಿಜೀರ್ಣಗೊಳ್ಳುತ್ತಿದ್ದ ಮಠವನ್ನು ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಿಆನಂತರ 2000ದ ಏಪ್ರಿಲ್ 7 ರಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿರಾಮದುರ್ಗ ತಾಲ್ಲೂಕಿನ ಎಂ. ಚಂದರಗಿಯ ಶ್ರೀ.ಷ.ಬ್ರ. ವೀರಭದ್ರ ಶಿವಾಚಾರ್ಯಮಹಾಸ್ವಾಮಿಗಳಿಂದ ಪಟ್ಟಾಧಿಕಾರ ಅನುಗ್ರಹ ಪಡೆದಿದ್ದಾರೆ.ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿದ್ದುತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠವನ್ನು ಪ್ರಚಲಿತಗೊಳಿಸುತ್ತಿದ್ದಾರೆ.ನವರಾತ್ರಿಯಲ್ಲಿ ನಿತ್ಯ ಚಂಡಿಹೋಮ ಹಾಗೂ ಶ್ರಾವಣಮಾಸದಲ್ಲಿ ನಿತ್ಯಪುರಾಣಪ್ರವಚನಗಳನ್ನು ನಡೆಸುತ್ತಿದ್ದು, ಭರತ ಹುಣ್ಣಿಮೆಯಲ್ಲಿ ಏಳು ದಿನಗಳ ಕಾಲ ಅದ್ದೂರಿಯಾಗಿಶ್ರೀಮಠದ ಜಾತ್ರೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ,ಸಾಮಾಜಿಕ, ಸಾಂಸ್ಕøತಿಕ ಹಾಗೂ ಸಾಹಿತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದುಅಪಾರ ಭಕ್ತ ಜನ ಪಾಲ್ಗೊಳ್ಳುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು
Date of Birth :
03-09-1976
Place :
ಹುಕ್ಕೇರಿ, ಬೆಳಗಾವಿ ತಾ||
Pattadikara :
07-04-2000
Photo :

Programs

ಪ್ರತಿ ಹುಣ್ಣಿಮೆಗೆ ಶ್ರೀದೇವಿ ಹೋಮ ಹಾಗೂ
108 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ
ನವರಾತ್ರಿಯಲ್ಲಿ ನಿತ್ಯ ಚಂಡಿಹೋಮ &
ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪುರಾಣ ಪ್ರವಚನ
ಭರತ ಹುಣ್ಣಿಮೆಯಂದು ಶ್ರೀಮಠದ ಜಾತ್ರೆ ಹಾಗೂ 7 ದಿನಗಳ ಕಾಲ
ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಗೌರಿಶಂಕರ ಮಠ
ಕಬ್ಬೂರ - 591 222
ಚಿಕ್ಕೋಡಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಘಟಪ್ರಭ - 17 ಕಿ.ಮೀ.
ಚಿಕ್ಕೋಡಿ - 20 ಕಿ.ಮೀ.
ಸಂಕೇಶ್ವರ - 35 ಕಿ.ಮೀ.
ನಿಪ್ಪಾಣಿ - 43 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!