Virakta Matha, Rastapur

Virakta Matha, Rastapur Claimed

ವಿರಕ್ತಮಠ, ರಸ್ತಾಪುರ

Average Reviews

Description

ವಿರಕ್ತಮಠ, ರಸ್ತಾಪುರ

ಕರ್ತೃ – ಪರಮಪೂಜ್ಯ ಶ್ರೀ ಷಣ್ಮುಖಯ್ಯ ಸ್ವಾಮಿಗಳು

ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮವು ತಾಲ್ಲೂಕುಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಪರಮಪೂಜ್ಯ ಶ್ರೀಷಣ್ಮುಖಯ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ನೆಲೆಗೊಳಿಸಿದೆ.ಕರ್ತೃಗುರುಗಳು ಆಧ್ಯಾತ್ಮಿಕತೆಯತ್ತ ಒಲವು ಹೊಂದಿ ಲೋಕಸಂಚಾರಕೈಗೊಂಡು ಶಿವಯೋಗ ಸಿದ್ಧಿಯನ್ನು ಪಡೆದು ರಸ್ತಾಪುರ ಗ್ರಾಮಕ್ಕೆ ಆಗಮಿಸುತ್ತಾರೆ. ಹೀಗೆಗ್ರಾಮಕ್ಕೆ ಆಗಮಿಸುವ ಪೂಜ್ಯರು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನುಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಮಠವನ್ನು ಸ್ಥಾಪನೆ ಮಾಡಿದ್ದಾರೆಂದುತಿಳಿದುಬರುತ್ತದೆ. ಆದರೆ ಇವರ ಕಾಲಮಾನದ ಬಗ್ಗೆ ನಿಖರತೆ ಇಲ್ಲ.ತದನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡ ಪೂಜ್ಯ ಶ್ರೀ ಶಂಕರಯ್ಯಸ್ವಾಮಿಗಳು ಹಿರಿಯ ಗುರುಗಳ ಹಾದಿಯಲ್ಲಿಯೇ ಶ್ರೀಮಠವನ್ನು ಮುನ್ನಡೆಸಿ ಭಕ್ತರ ಪ್ರೀತಿಗೆಪಾತ್ರರಾಗಿದ್ದರು. ಹಾಗೂ ಗ್ರಾಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದರು. ಇಂತಹ ಪೂಜ್ಯ ಶ್ರೀಗಳು 1904ರಲ್ಲಿಲಿಂಗ್ಯಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಅಯ್ಯಪ್ಪ ಸ್ವಾಮಿಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ನಡೆಸುತ್ತಾ, ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಕಾರ್ತೀಕ ಮಾಸದಲ್ಲಿದೀಪಾವಳಿ ಆದ 5ನೇ ದಿನಕ್ಕೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ನಡೆಸುತ್ತಾಬಂದಿದ್ದಾರೆ. ಇತ್ತೀಚೆಗೆ ಶ್ರೀಗಳು ಊರ ಹೊರಭಾಗದಲ್ಲಿ ನೂತನ ಕಟ್ಟಡವನ್ನು ಸ್ಥಾಪಿಸಿದ್ದುಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಅಯ್ಯಪ್ಪ ಸ್ವಾಮಿಗಳು
Place :
ರಸ್ತಾಪುರ, ಶಹಾಪುರ ತಾ||
Photo :

Programs

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ವಿರಕ್ತಮಠ
ರಸ್ತಾಪುರ - 585 323
ಶಹಾಪುರ ತಾ||, ಯಾದಗಿರಿ ಜಿ||

Map

Near by Places

ರಸ್ತಾಪುರ ಕ್ರಾಸ್ - 1 ಕಿ.ಮೀ.
ಶಹಾಪುರ - 10 ಕಿ.ಮೀ.
ಸುರಪುರ - 28 ಕಿ.ಮೀ.
ಯಾದಗಿರಿ - 50 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!