ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠವು ಇಂದು ನಾಡಿನ ಮುಂಚೂಣಿಮಠಗಳಲ್ಲಿ ಗುರುತಿಸಿಕೊಳ್ಳುತ್ತಿದ್ದು ಈ ಮಠವನ್ನು ಶ್ರೀ.ಷ.ಬ್ರ. ಶಿವಯೋಗಿಮರುಳಸಿದ್ದೇಶ್ವರರು 18ನೇ ಶತಮಾನದಲ್ಲಿ ಸ್ಥಾಪಿಸಿದ್ದರೆಂದು ತಿಳಿದು ಬರುತ್ತದೆ. ಶ್ರೀ ಮಠವುಅಂದಿನಿಂದ ಇಂದಿನವರೆಗೂ ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸುತ್ತಾ ವೀರಶೈವಧರ್ಮಾನುಷ್ಠಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಮುನ್ನಡೆಯುತ್ತಿದ್ದು ಅಪಾರಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿದೆ.ಕರ್ತೃ ಗುರುಗಳಾದ ಶ್ರೀ ಮರುಳಸಿದ್ದೇಶ್ವರರು ಬಾಲವಿರಾಗಿಗಳು. ಚಿಕ್ಕವಯಸ್ಸಿನಿಂದಲೇ ಆದ್ಯಾತ್ಮ ಚಿಂತನೆಯಲ್ಲಿ ತೊಡಗಿದ್ದ ಶ್ರೀಗಳನ್ನು ಭಕ್ತರು ನಿಡುವಳ್ಳಿಯಹಿರೇಮಠಕ್ಕೆ ಪಟ್ಟಾಧಿಕಾರ ಮಾಡಿದರು. ಆದರೆ ಶ್ರೀಗಳು ಒಂದೇ ಕಡೆ ನೆಲೆಗೊಳ್ಳಲುಇಚ್ಚಿಸದೇ ಲೋಕ ಸಂಚಾರ ಹೊರಟು. ಶ್ರೀಶೈಲ, ರಂಭಾಪುರಿ, ಕಲ್ಯಾಣ, ಮಹಾನಂದಿಮುಂತಾದ ಪುಣ್ಯಕ್ಷೇತ್ರಗಳನ್ನು ದರ್ಶಿಸುತ್ತಾ ಗುರುಗಳ ಸೇವೆಗೈಯ್ಯುತ್ತಾ ಮುನ್ನಡೆದು ಅಪಾರಜ್ಞಾನವನ್ನು ಸಂಪಾದಿಸಿಕೊಂಡು ಮರಳಿದರು.ಹೀಗೆ ಮರಳುವಾಗ ಬುಕ್ಕಾಂಬುದಿ, ನಾರಾಣಪುರ, ಮಾದಾಪುರ, ಕೆಂಕೆರೆ,ಚಿಕ್ಕಬಿದರೆ ಮುಂತಾದೆಡೆ ಕೆಲಕಾಲ ಅನುಷ್ಠಾನಗೊಂಡು ಜನರಲ್ಲಿ ಧಾರ್ಮಿಕ ಪ್ರಜ್ಞೆಮೂಡಿಸಿ, ಪವಾಡಗಳನ್ನು ನಡೆಸುತ್ತಾ ಕೊನೆಯಲ್ಲಿ ಕುಪ್ಪೂರಿಗೆ ಆಗಮಿಸುತ್ತಾರೆ. ಹೀಗೆಕುಪ್ಪೂರಿಗೆ ಒಂದು ಧೀರ್ಘಕಾಲ ಅನುಷ್ಠಾನಗೊಂಡು ಈ ಕ್ಷೇತ್ರವನ್ನು ಸುಕ್ಷೇತ್ರವನ್ನಾಗಿಪರಿವರ್ತಿಸಿ, ಭಕ್ತರಿಗೆ ಮಾರ್ಗದರ್ಶನ ನೀಡಿ ಲಿಂಗೈಕ್ಯರಾಗಿದ್ದಾರೆ.ಶ್ರೀಗಳು ಲಿಂಗೈಕ್ಯರಾದ ನಂತರ ಗದ್ದುಗೆ ನಿರ್ಮಿಸಿ ಕಲ್ಲಿನ ಮಂಟಪವನ್ನು ಕಟ್ಟಿಸಿದಭಕ್ತರು ದಿನೇ ದಿನೇ ಸುಕ್ಷೇತ್ರ ಕುಪ್ಪೂರನ್ನು ಪ್ರಸಿದ್ದಿಗೊಳಿಸಿದ್ದಾರೆ. ತದ ನಂತರ ಧಾರ್ಮಿಕಚಟುವಟಿಕೆಗಳು ಹೆಚ್ಚಾಗತೊಡಗಿದಾಗ ಓರ್ವ ಗುರುಗಳ ಅವಶ್ಯಕತೆ ಕಂಡು ಶ್ರೀ.ಷ.ಬ್ರ.ನಂಜುಂಡ ದೇವರನ್ನು ಕರೆತಂದು ಪಟ್ಟಾಧಿಕಾರ ಮಾಡುತ್ತಾರೆ. ಹೀಗೆ ರಂಭಾಪುರಿ ಶಾಖಾಮಠವಾಗಿ ಬೆಳೆದು ಬಂದ ಶ್ರೀ ಮಠವು ಇಂದು ನಾಡಿನೆಲ್ಲೆಡೆ ಪ್ರಸಿದ್ಧಿಗೊಂಡಿದೆ.ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳುಮಹಾಮಹಿಮ ಪುರುಷರಾಗಿದ್ದು ಸುಮಾರು 7 ದಶಕಗಳ ಕಾಲ ಸುಕ್ಷೇತ್ರ ಕುಪ್ಪೂರು ಗದ್ದಿಗೆಸಂಸ್ಥಾನ ಮಠವನ್ನು ಮುನ್ನಡೆಸಿ ಶ್ರೀ ಮಠದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಶ್ರೀಗಳುಲಿಂಗಪೂಜಾನಿಷ್ಠರಾಗಿ, ಧಾರ್ಮಿಕ ಚಿಂತಕರಾಗಿ, ಅಭಿವೃದ್ಧಿಯ ಹರಿಕಾರರಾಗಿಹೆಸರುವಾಸಿಯಾಗಿದ್ದು ಜನ ಮಾನಸದಲ್ಲಿ ಬೇರೂರಿದ್ದಾರೆ.ಒಮ್ಮೆ ಕುಪ್ಪೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಿಂದಅತಿವೃಷ್ಠಿವುಂಟಾಗಿ ಈ ಭಾಗದ ಕೆರೆಗಳು ಕೋಡಿ ಬಿದ್ದು ಆ ನೀರೆಲ್ಲಾ ಶ್ರೀ ಮಠದಹಿಂಭಾಗದ ಕೆರೆಯಲ್ಲಿ ಶೇಖರಣೆಯಾಗಿ ಈ ಕೆರೆಯೂ ಕೋಡಿ ಬೀಳುವ ಪ್ರಸಂಗ ಬಂದಿತ್ತುಆಗ ಶ್ರೀಗಳು ತುಂಬಿದ ಕೆರೆಗೆ ಕರ್ಪೂರವನ್ನು ಹಚ್ಚಿ ತೇಲಿ ಬಿಟ್ಟು ಬಂದರಂತೆ. ಕೆರೆಯುನಿರೀಕ್ಷೆಯಂತೆ ಕೋಡಿ ಬಿದ್ದು ಸುತ್ತಮುತ್ತಲ ಪ್ರದೇಶಗಳು ಕೊಚ್ಚಿ ಹೋದರೂ ಶ್ರೀ ಮಠವುಗಟ್ಟಿಯಾಗಿ ಉಳಿದಿತ್ತಂತೆ.ಈ ರೀತಿಯಾಗಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಪವಾಡಗಳುಜನರ ಬಾಯಲ್ಲಿ ಈಗಲೂ ನಲಿದಾಡುತ್ತವೆ. ಹಾಗೆಯೇ ಶ್ರೀಗಳು 1989ರಲ್ಲಿ ಸಿಂಗಾಪೂರ್,ಹಾಂಗ್ಕಾಂಗ್, ಬ್ಯಾಂಕಾಕ್ ಮಾರ್ಗವಾಗಿ ಅಮೇರಿಕಾ, ಕೆನಡಾ ದೇಶಗಳಲ್ಲಿ ನಾಲ್ಕುತಿಂಗಳು ಪ್ರವಾಸ ಮಾಡಿ, ಎಂಟು ಸ್ಥಳಗಳಲ್ಲಿ ನೂರಾರು ಭಕ್ತರಿಗೆ ವೀರಶೈವ ಧರ್ಮದ ಬಗ್ಗೆಉಪದೇಶ ನೀಡಿ ಬಂದಿರುತ್ತಾರೆ. ಹೀಗೆ ಧೀರ್ಘಕಾಲ ಶ್ರೀ ಮಠದ ಆಡಳಿತವನ್ನು ನಡೆಸಿದಶ್ರೀಗಳು 1990ರಲ್ಲಿ ಈಗಿನ ಶ್ರೀಗಳಾದ ಶ್ರೀ ಯತೀಶ್ವರ ಶಿವಾಚಾರ್ಯರಿಗೆ ಅಧಿಕಾರಹಸ್ತಾಂತರಿಸಿ 2001ರಲ್ಲಿ ಲಿಂಗೈಕ್ಯರಾಗಿದ್ದಾರೆ.ಶ್ರೀ ಷ.ಬ್ರ. ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 1990ರ ಡಿಸೆಂಬರ್02ರಲ್ಲಿ ಶ್ರೀ ಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡು ಹಿರಿಯ ಶ್ರೀಗಳ ಹಾದಿಯಲ್ಲಿಯೇಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಬಹಳ ಕ್ರಿಯಾಶೀಲರಾಗಿದ್ದು ಪ್ರತಿಧಾರ್ಮಿಕ ಆಚರಣೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಅದನ್ನು ಭಕ್ತರಿಗೆ ಸರಳವಾಗಿವಿವರಿಸಿ ಭಕ್ತರಿಗೆ ವೀರಶೈವ ಧರ್ಮಾಚರಣೆಗಳ ಬಗ್ಗೆ ಒಲವನ್ನು ಮೂಡಿಸುತ್ತಿದ್ದಾರೆ.ಶ್ರೀ ಯತೀಶ್ವರ ಶಿವಾಚಾರ್ಯರು ಶ್ರೀ ಮಠದ ಅಧಿಕಾರ ವಹಿಸಿಕೊಂಡ ನಂತರಸುಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ತಮ್ಮ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ನಾಡಿನಾದ್ಯಂತ ಹೆಸರು ವಾಸಿಯಾಗಿದ್ದಾರೆ.ಸುಕ್ಷೇತ್ರದ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿಕೊಂಡು ಕಾರ್ಯಗತಗೊಳಿಸುತ್ತಿದ್ದಾರೆ.ಕಳೆದ 21 ವರ್ಷಗಳಿಂದ ಶ್ರೀ ಮಠದಲ್ಲಿ ಶ್ರಾವಣ ಮಾಸದ ಶಿವಪೂಜಾನುಷ್ಠಾನಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀ ಮಠದಲ್ಲಿ ಕರ್ತೃ ಗದ್ದುಗೆಗೆ ಪ್ರತಿ ನಿತ್ಯ ರುದ್ರಾಭಿಷೇಕ ಹಾಗೂಸಹಸ್ರಬಿಲ್ವಾರ್ಚನೆ ನಡೆಯುತ್ತಿದ್ದು, ಶಿವರಾತ್ರಿಯಲ್ಲಿ ವಿಶೇಷ ಧಾರ್ಮಿಕ ಆಚರಣೆಗಳುನಡೆಯುತ್ತವೆ. ಶ್ರೀ ಮಠದ ಜಾತ್ರೆಯನ್ನು ಮಾರ್ಗಶಿರ ಮಾಸದಲ್ಲಿ ಆಯೋಜಿಸುತ್ತಿದ್ದು ಆಸಮಯದಲ್ಲಿ ಭಕ್ತ ಸಮೂಹ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆಯುತ್ತಾರೆ ಹಾಗೂಶ್ರಾವಣ ಮಾಸದ ಶಿವಪೂಜಾನುಷ್ಠಾನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರುಪಾಲ್ಗೊಳ್ಳುತ್ತಿದ್ದು ಶ್ರೀಗಳು ಪೂಜೆಯ ನಂತರ ಎಲ್ಲಾ ವರ್ಗದ ಜನರ ಜೊತೆ ಸಹಪಂಕ್ತಿಭೋಜನ ಸ್ವೀಕರಿಸುವುದು ವಿಶೇಷ.
Swamiji
Swamiji Name :
ಶ್ರೀ ಷ.ಬ್ರ. ಡಾ. ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
29-07-1974
Place :
ಕುಪ್ಪÇರು, ಚಿಕ್ಕನಾಯಕನಹಳ್ಳಿ ತಾ||
Pattadikara :
02-12-1990
Photo :
Programs
ದಿನನಿತ್ಯ - ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪ್ರತಿ ಹುಣ್ಣಿಮೆ ಮತ್ತು ಅಮವಾಸೆಗೆ ವಿಶೇಷ ಪೂಜೆ ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಮಾರ್ಗಶಿರ ಮಾಸದಲ್ಲಿ ಶ್ರೀ ಮಠದ ಜಾತ್ರೆ ಶಿವರಾತ್ರಿಗೆ ವಿಶೇಷ ಪೂಜೆ
Photos
Full Address Kannada
ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠ ಕುಪ್ಪೂರು - 572 226 ಚಿಕ್ಕನಾಯಕನಹಳ್ಳಿ ತಾ||, ತುಮಕೂರು ಜಿಲ್ಲೆ