Srimad Rambhapuri Sthira Pattdhyakshara Samsthana Matha

Srimad Rambhapuri Sthira Pattdhyakshara Samsthana Matha Claimed

ಶ್ರೀಮದ್ ರಂಭಾಪುರಿ ಸ್ಥಿರಪಟ್ಟಾಧ್ಯಕ್ಷರ ಸಂಸ್ಥಾನ ಮಠ

Average Reviews

Description

ಶ್ರೀಮದ್ ರಂಭಾಪುರಿ ಸ್ಥಿರಪಟ್ಟಾಧ್ಯಕ್ಷರ ಸಂಸ್ಥಾನ ಮಠ

ಕರ್ತೃ – ಶ್ರೀ ಶ್ರೀ ಶಿವನಂಜುಂಡ ದೇಶಿಕೇಂದ್ರ ಮಹಾಸ್ವಾಮಿಗಳು

ಗೋಡೆಕೆರೆ ಗ್ರಾಮದ ಹೊರವಲಯದಲ್ಲಿ ಸ್ಥಾಪಿತಗೊಂಡಿರುವ ಶ್ರೀಮದ್ರಂಭಾಪುರಿ ಸ್ಥಿರ ಪಟ್ಟಾಧ್ಯಕ್ಷರ ಸಂಸ್ಥಾನ ಮಠವು 16-17ನೇ ಶತಮಾನದಲ್ಲಿ ಶ್ರೀ ರಂಭಾಪುರಿಪೀಠದ ಜಗದ್ಗುರುಗಳಾಗಿದ್ದ ಶ್ರೀ ಶಾಂತದೇಶಿಕೇಂದ್ರ ಸ್ವಾಮಿಗಳಿಂದ ಪ್ರಾರಂಭಗೊಂಡಿದೆ.ಶ್ರೀ ಶಾಂತದೇಶಿಕೇಂದ್ರ ಸ್ವಾಮಿಗಳು ಸಂಚಾರದಲ್ಲಿದ್ದಾಗ ಗೋಡೆಕೆರೆಗೆ ಆಗಮಿಸಿ ಇಲ್ಲಿ ಶ್ರೀಮಠವನ್ನು ಸ್ಥಾಪಿಸಿ ಕೆಲವು ವರ್ಷಗಳ ಕಾಲ ಅನುಷ್ಠಾನಗೊಂಡು ಶ್ರೀ ಶಿವನಂಜುಂಡದೇಶಿಕೇಂದ್ರ ಸ್ವಾಮಿಗಳಿಗೆ ಶ್ರೀಮಠವನ್ನು ವಹಿಸಿ ಮುನ್ನಡೆದಿದ್ದಾರೆ.ಶ್ರೀ ಶಿವನಂಜುಂಡ ಸ್ವಾಮಿಗಳು ಶ್ರೀ ಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದ ಅಭಿವೃದ್ಧಿಗೆ ಶ್ರಮಿಸಿದ್ದು ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ಭಕ್ತರಿಗೆಸೇರುತ್ತಾ ಧರ್ಮದ ಉನ್ನತಿಗೆ ಕಾರಣರಾಗಿದ್ದಾರೆ ಹಾಗೂ ಶ್ರೀ ಮಠದ ಧಾರ್ಮಿಕಆಚರಣೆಗಳು ಸದಾಕಾಲಕ್ಕೂ ಸುವ್ಯವಸ್ಥಿತವಾಗಿ ನಡೆದುಕೊಂಡು ಹೋಗುವಂತೆ ಭದ್ರಬುನಾದಿಯನ್ನು ಹಾಕಿ ಲಿಂಗೈಕ್ಯರಾಗಿದ್ದಾರೆ.ನಂತರ ಬಂದ ಶ್ರೀ ಗುರುಸಿದ್ಧ ದೇಶಿಕೇಂದ್ರರು ಶ್ರೀ ಸಿದ್ದರಾಮೇಶ್ವರದೇವಾಲಯವನ್ನು ಅಭಿವೃದ್ಧಿಗೊಳಿಸಿ ತಪೆÇೀನುಷ್ಠಾನಗೊಂಡು ಸುತ್ತಮುತ್ತಲಿನ ಗ್ರಾಮಗಳಲ್ಲಿಪ್ರಸಿದ್ಧರಾಗಿದ್ದರು. ಶ್ರೀ ಮಠದ 5ನೇ ಗುರುಗಳಾದ ಶ್ರೀ ಬಸವಪ್ರಭುಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಉನ್ನತಿಯತ್ತ ಮುನ್ನಡೆದಿದೆ. ಮಹಾ ಮೇದಾವಿಗಳಾದ ಶ್ರೀ ಬಸವ ಪ್ರಭುಸ್ವಾಮಿಗಳುಪಂಡಿತರಾಗಿದ್ದು ವೀರಶೈವ ಧರ್ಮದ ಬೆಳವಣಿಗೆಗೆ ಬಹಳವಾಗಿ ಶ್ರಮಿಸಿದ್ದಾರೆ ಹಾಗೂಮೈಸೂರು ಅರಸರಿಂದ ಬಂದ ದತ್ತಿ ನಿದಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡುಶ್ರೀ ಮಠವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಮಾಡಿದ್ದಾರೆ.ಶ್ರೀ ಬಸವ ಪ್ರಭುಸ್ವಾಮಿಗಳ ಕಾಲದಲ್ಲೇ ಚರ ಪಟ್ಟಾಧ್ಯಕ್ಷರ ನೇಮಕಗೊಂಡಿದ್ದುತದ ನಂತರದಲ್ಲಿ ಆ ಪರಂಪರೆಯೇ ಪ್ರತ್ಯೇಕವಾಗಿ ಬೆಳೆದಿದೆ. ನಂತರದಲ್ಲಿ ಬಂದ ಶ್ರೀಗುರುಸಿದ್ಧ ದೇಶಿಕೇಂದ್ರರು ಹಾಗೂ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳು ಶ್ರೀಮಠದಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮಿಗಳು 1979ರ ಫೆಬ್ರವರಿ22ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಶ್ರೀ ಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳು ಶ್ರೀ ಮಠಕ್ಕೆ ನೂತನ ಕಟ್ಟಡವನ್ನು ನಿರ್ಮಿಸಿದ್ದು ಜೊತೆಗೆಶ್ರೀ ರಂಭಾಪುರಿ ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯತ್ತನ್ನುರೂಪಿಸುತ್ತಿದ್ದಾರೆ ಹಾಗೂ ಶ್ರೀ ಮಠದ ವತಿಯಿಂದ ಅನಾಥಾಶ್ರಮವನ್ನು ನಡೆಸುತ್ತಿದ್ದುಅನಾಥ ಮಕ್ಕಳ ಆಶಾಕಿರಣರಾಗಿದ್ದಾರೆ.

Swamiji

Swamiji Name :
ಶ್ರೀ ಸಿದ್ಧರಾಮ ದೇಶಿಕೇಂದ್ರ ಮಹಾಸ್ವಾಮಿಗಳು
Date of Birth :
6-10-1957
Place :
ಗೋಡೆಕೆರೆ ತಾ||, ಚಿಕ್ಕನಾಯಕನಹಳ್ಳಿ
Pattadikara :
22-02-1979

Programs

ಪ್ರತಿ ತಿಂಗಳು ಏಕಾದಶಿ ದಿನ ಕಟ್ಲೆ ಕಾರ್ಯಕ್ರಮ ಬಸವ ಜಯಂತಿಯಂದು ಸಾಂಸ್ಕøತಿಕ ಕಾರ್ಯಕ್ರಮಗಳು ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಉಚಿತ ಆರೋಗ್ಯ ತಪಾಸಣೆ

Institutions

ಹಿರಿಯ / ಕಿರಿಯ ಪ್ರಾಥಮಿಕ / ಪ್ರೌಢಶಾಲೆ ಸಂಸ್ಕøತ ವೇದ ಪಾಠಶಾಲೆ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ನಿಲಯ ಅನಾಥಾಶ್ರಮ ಪದವಿ ಕಾಲೇಜ್

Full Address Kannada

ಶ್ರೀಮದ್ ರಂಭಾಪುರಿ ಸ್ಥಿರಪಟ್ಟಾಧ್ಯಕ್ಷರ ಸಂಸ್ಥಾನಮಠ ಗೋಡೆಕೆರೆ - 572 214 ಚಿಕ್ಕನಾಯಕನಹಳ್ಳಿ ತಾ||, ತುಮಕೂರು ಜಿಲ್ಲೆ

Map

Near by Places

ಚಿಕ್ಕನಾಯಕನಹಳ್ಳಿ - 12 ಕಿ.ಮೀ. ಗುಬ್ಬಿ - 20 ಕಿ.ಮೀ. ತುಮಕೂರು - 35 ಕಿ.ಮೀ.

Statistic

10 Views
0 Rating
0 Favorite
Share
error: Content is protected !!