ಕರ್ತೃ – ಶ್ರೀ ಷ.ಬ್ರ. ಕರಿಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೆ. ಅಯ್ಯನಹಳ್ಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 23 ಕಿ.ಮೀ. ದೂರದಲ್ಲಿದ್ದು, ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿಒಂದಾದ ಐತಿಹಾಸಿಕ ಕೊಟ್ಟೂರು ಪಟ್ಟಣದಿಂದ ಕೇವಲ 6 ಕಿ.ಮೀ. ದೂರದಲ್ಲಿದೆ. ಈಗ್ರಾಮದಲ್ಲಿ ಶ್ರೀ ಷ.ಬ್ರ. ಕರಿಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವಶ್ರೀಮದ್ ರಂಭಾಪುರಿ ಶಾಖಾ ಪುರವರ್ಗ ಹಿರೇಮಠವು ತನ್ನ ಧಾರ್ಮಿಕ ಚಟುವಟಿಕೆಗಳಿಂದ ಈ ಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.ಕರ್ತೃಗುರುಗಳಾದ ಶ್ರೀ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮದ್ರಂಭಾಪುರಿ ಗುರುಗಳ ಕೃಪಾಶೀರ್ವಾದ ಬಲದಿಂದ ಭಕ್ತರ ಸಹಕಾರದೊಂದಿಗೆಕೆ.ಅಯ್ಯನಹಳ್ಳಿಯಲ್ಲಿ ಶ್ರೀಮಠದ ಸ್ಥಾಪನೆ ಮಾಡಿದ್ದಾರೆ. ಎಂದು ತಿಳಿದುಬರುತ್ತದೆ. ಶ್ರೀಗಳುಧರ್ಮನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠವನ್ನುಪ್ರಸಿದ್ಧಿಗೊಳಿಸಿದ್ದಾರೆ ಹಾಗೆಯೇ ಭಕ್ತರಿಗೆ ವೀರಶೈವ ಧರ್ಮಾಚರಣೆಗಳ ಮಹತ್ವವನ್ನುಸಾರಿ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠಕ್ಕೆಪಟ್ಟಾಧಿಕಾರವಾದಾಗಿನಿಂದಲೂ ಕ್ರಿಯಾಶೀಲರಾಗಿ ಶ್ರೀಮಠದ ಅ¨s À್ಯುದಯಕೆ ್ಕಶ್ರಮಿಸುತ್ತಿದ್ದಾರೆ. ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠಕ್ಕೆ ಭಕ್ತರನ್ನು ಸೆಳೆದುಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರದ ಜೊತೆಗೆ ಚನ್ನರಾಯಪಟ್ಟಣ ತಾಲ್ಲೂಕು ನುಗ್ಗೇಹಳ್ಳಿ ಗ್ರಾಮದ ಶ್ರೀ ರಂಭಾಪುರಿ ಶಾಖಾ ಹಿರೇಮಠದ ಅಧಿಕಾರವನ್ನು ಹೊಂದಿದ್ದು ಉಭಯ ಮಠಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಶ್ರಾವಣ ಮಾಸದ ಶ್ರೀ ಮಹೇಶ್ವರ ದೀಕ್ಷಾ ಕಾರ್ಯಕ್ರಮ ಹಾಗೂ ಶ್ರೀಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವ ನಡೆಯುತ್ತದೆ. ಶ್ರೀಮಠವು ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸುತ್ತಿದ್ದು ಶ್ರಾವಣ ಮಾಸದಲ್ಲಿ ಸಾಮೂಹಿಕ ವಿವಾಹಗಳನ್ನುನಡೆಸಲಾಗುತ್ತಿದೆ ಹಾಗೂ ಶ್ರೀ ಕೊಟ್ಟೂರು ಜಾತ್ರೆಯ ಸಂದರ್ಭದಲ್ಲಿ 3 ದಿನಗಳ ಕಾಲಭಕ್ತಾದಿಗಳಿಗೆ ಹಾಗೂ ಯಾತ್ರಾರ್ಥಿಗಳಿಗೆ ಪ್ರಸಾದದ ವ್ಯವಸ್ಥೆ ಇರುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
28-6-1974
Place :
ನುಗ್ಗೆಹಳ್ಳಿ, ಚನ್ನರಾಯಪಟ್ಟಣ ತಾ||
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ.
ಏಪ್ರಿಲ್ನಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ.
ಶ್ರಾವಣ ಮಾಸದಲ್ಲಿ ಶ್ರೀ ಮಹೇಶ್ವರ ದೀಕ್ಷಾ ಕಾರ್ಯಕ್ರಮ ಮತ್ತು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಸಾಮೂಹಿಕ ವಿವಾಹಗಳು.
ಮಾಘ ಶುದ್ಧ ಬಹುಳದಲ್ಲಿ ಶ್ರೀ ಕೊಟ್ಟೂರು ಗುರುಬಸವೇಶ್ವರ ಜಾತ್ರೆ ಪ್ರಯುಕ್ತ 3 ದಿನಗಳ ಕಾಲ ಪ್ರಸಾದ ವಿನಿಯೋಗ.