ಕರ್ತೃ – ಪೂಜ್ಯ ಶ್ರೀ ಷ.ಬ್ರ. ಕರಿಲಿಂಗೇಶ್ವರ ಮಹಾಸ್ವಾಮಿಗಳು
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಪುರಾತನ ಕಾಲದ ಶ್ರೀಮದ್ ರಂಭಾಪುರಿ ಶಾಖಾಪುರವರ್ಗ ಹಿರೇಮಠವು ಶ್ರೀ ರಂಭಾಪುರಿ ಪೀಠದ ಸಂಪ್ರದಾಯಗಳನ್ನು ಪಾಲಿಸಿಕೊಂಡುಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಹಿರೇಮಠವಾಗಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ಕರಿಲಿಂಗೇಶ್ವರ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಮಹಾಮಹಿಮ ಶ್ರೀ ಗುರುಬಸವೇಶ್ವರ ಸ್ವಾಮಿಗಳಸಮಕಾಲೀನರೆಂದು ಹೇಳಲಾಗುವ ಶ್ರೀ ಕರಿಲಿಂಗೇಶ್ವರ ಮಹಾಸ್ವಾಮಿಗಳ ಕುರಿತಾಗಿ ಹೆಚ್ಚಿನಮಾಹಿತಿಗಳು ಲಭ್ಯವಿಲ್ಲ. ನಂತರದಲ್ಲಿ ಅನೇಕ ಸ್ವಾಮಿಗಳು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡುಶ್ರೀಮಠವನ್ನು ಮುನ್ನಡೆಸಿರುವ ಕುರಿತಾಗಿ ತಿಳಿದು ಬರುತ್ತದಾದರೂ ನಿಖರ ದಾಖಲೆಗಳಕೊರತೆಯಿಂದ ಉಲ್ಲೇಖಿಸಲು ಸಾಧ್ಯವಾಗುವುದಿಲ್ಲ.1902ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಷ.ಬ್ರ. ಪ್ರಭುದೇವ ಶಿವಾಚಾರ್ಯಮಹಾಸ್ವಾಮಿಗಳಿಂದೀಚೆಗಿನ ಗುರುಪರಂಪರೆ ಬಗ್ಗೆ ನಿಖರವಾಗಿ ದಾಖಲಿಸಲಾಗಿದೆ. ಶ್ರೀಪ್ರಭು ಸ್ವಾಮಿಗಳೆಂದೇ ಪ್ರಸಿದ್ದಿಗೊಂಡಿದ್ದ ಶ್ರೀಗಳು ತಮ್ಮ ಕಾರ್ಯಕ್ರಮಗಳ ಮೂಲಕಸುತ್ತಮುತ್ತಲ ಗ್ರಾಮಗಳಲ್ಲಿ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡಿದ್ದರು. ಇವರನಂತರ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳು1957ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಅಧಿಕಾರವನ್ನು ನಡೆಸಿದ್ದು 1989ರಲ್ಲಿ ಈಗಿನಶ್ರೀಗಳಿಗೆ ಅಧಿಕಾರ ಹಸ್ತಾಂತರಿಸಿ ಗೃಹಸ್ಥಾಶ್ರಮ ಸ್ವೀಕರಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು1989ರ ಮಾರ್ಚ್ 30ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ್ದು ಧಾರ್ಮಿಕಆಚರಣೆಗಳೊಂದಿಗೆ ಶ್ರೀಮಠವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸುತ್ತಿದ್ದಾರೆ. ಶ್ರೀಗಳುಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ವಿಜಯದಶಮಿಯಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಹಾಗೂ ಏಪ್ರಿಲ್ ತಿಂಗಳಲ್ಲಿಶ್ರೀ ಮಹದೇಶ್ವರರ ಅಗ್ನಿಕುಂಡೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
28-06-1974
Place :
ನುಗ್ಗೇಹಳ್ಳಿ, ಚನ್ನರಾಯಪಟ್ಟಣ ತಾ||
Pattadikara :
30-03-1989
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ ಶ್ರೀ ರೇಣುಕಾಚಾರ್ಯರ ಜಯಂತಿ ಆಚರಣೆ
ಏಪ್ರಿಲ್ನಲ್ಲಿ ಶ್ರೀ ಮಹದೇಶ್ವರನ ಅಗ್ನಿಕುಂಡೋತ್ಸವ
ನವರಾತ್ರಿಗೆ ಶ್ರೀ ದೇವಿಯ ವಿಶೇಷ ಪೂಜೆ
ವಿಜಯ ದಶಮಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ