Shreemad Rambhapuri Khasa Matha

Shreemad Rambhapuri Khasa Matha

ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಠ

Average Reviews

Description

ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಠ

ಕರ್ತೃ – ಪರಮ ಪೂಜ್ಯ ಶ್ರೀ ಜಡೆ ಮಹಾಸ್ವಾಮಿಗಳು

ಶ್ರೀ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಠಬೀರೂರು ಪಟ್ಟಣದ ತರೀಕೆರೆ ರಸ್ತೆಯಲ್ಲಿ ಸ್ಥಾಪಿತಗೊಂಡಿರುವ ಶ್ರೀಮದ್ರಂಭಾಪುರಿ ಖಾಸಾ ಶಾಖಾ ಮಠವು ಇತ್ತೀಚೆಗೆ 2001ರಲ್ಲಿ ಪುನರ್ ಅಸ್ತಿತ್ತ್ವಕಂಡುಕೊಂಡಿದೆ. ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿಬೆಳೆಯುತ್ತಿರುವ ಶ್ರೀಮಠದ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳುಆಯೋಜಿಸಲ್ಪಡುತ್ತಿವೆ. ಶ್ರೀಮಠದ ಕರ್ತೃ ಗುರುಗಳೆಂದು ಪರಮ ಪೂಜ್ಯ ಶ್ರೀ ಜಡೆಸ್ವಾಮಿಗಳನ್ನು ಹೆಸರಿಸಲಾಗಿದೆ.ಈಗ ಮಠವಿರುವ ಸ್ಥಳದಲ್ಲಿ ಈ ಹಿಂದೆ 200 ವರ್ಷಗಳಿಂದಲೂ ಶಿವಾನಂದಆಶ್ರಮವು ಅಸ್ತಿತ್ತ್ವದಲ್ಲಿದ್ದು ಈಗ ಶ್ರೀಮದ್ ರಂಭಾಪುರಿ ಶಾಖಾ ಮಠವೆಂದುಪರಿವರ್ತಿತಯಾಗಿದೆಯೆಂದು ಇಲ್ಲಿನ ಶ್ರೀಗಳು ಹೇಳುತ್ತಾರೆ. ಪೂಜ್ಯ ಜಡೆ ಸ್ವಾಮಿಗಳ ನಂತರರಂಭಾಪುರಿ ಪೀಠದ ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು ಇಲ್ಲಿಅನುಷ್ಟಾನಗೊಂಡು ಶ್ರೀಮಠವನ್ನು ಮುನ್ನಡೆಸಿದ್ದು ಅವರ ಹೆಸರಿನಿಂದಲೇ ಶ್ರೀ ಶಿವಾನಂದಆಶ್ರಮವನ್ನು ಗುರುತಿಸುತ್ತಾ ಬಂದಿದ್ದಾರೆಂದು ತಿಳಿದುಬರುತ್ತದೆ.ಈ ರೀತಿಯಾಗಿ ಬೆಳೆದು ಬಂದಿರುವ ಶ್ರೀಮಠದ ಸ್ಥಳದಲ್ಲಿ ರಂಭಾಪುರಿ ಪೀಠದ116ನೇ ಜಗದ್ಗುರುಗಳ ಗದ್ದುಗೆಯಿದ್ದು ಪೂಜ್ಯನೀಯವಾಗಿದೆ. ಕಾಲಾನಂತರ ಖಾಲಿಉಳಿದಿರುವ ಈ ಸ್ಥಳದಲ್ಲಿ ಶ್ರೀಮಠವು ಪುನರ್ ಸ್ಥಾಪಿತವಾಗುವ ಮೊದಲು 2000ರಲ್ಲಿದಸರಾ ದರ್ಭಾರ್ ಕಾರ್ಯಕ್ರಮ ನಡೆದಿದ್ದು ನಂತರ 2001ರಲ್ಲಿ ಈಗಿನ ರಂಭಾಪುರಿಜಗದ್ಗುರು ಶ್ರೀ ವೀರ ಸೋಮೇಶ್ವರ ಭಗತ್ಪಾದರು ಮಠವನ್ನು ಪುನರ್ ಸ್ಥಾಪಿಸಿದ್ದಾರೆ.ಹೀಗೆ 2001ರಲ್ಲಿ ಪುನರ್ ಸ್ಥಾಪಿತಗೊಂಡು ರಂಭಾಪುರಿ ಪೀಠದ ನೇರ ಆಡಳಿತಕ್ಕೆಒಳಪಟ್ಟಿದ್ದ ಶ್ರೀಮಠಕ್ಕೆ 2007ರಲ್ಲಿ ಪಟ್ಟಾಧಿಕಾರ ಸ್ವೀಕರಿಸಿ ಬಂದವರು ಈಗಿನ ಶ್ರೀಗಳಾದ ಶ್ರೀಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು. ಶ್ರೀಗಳು ಕ್ರಿಯಾಶೀಲರಾಗಿ ಶ್ರೀಮಠದಲ್ಲಿಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದುಹಲವಾರು ಶಿಬಿರಗಳನ್ನು ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ತಿಂಗಳುಸಂಕಷ್ಟಹರ ಚತುರ್ಥಿಯನ್ನು ಆಚರಿಸುತ್ತಾ ಬರುತ್ತಿದ್ದು ಆಗಾಗ್ಗೆ ಶ್ರೀಮಠದಲ್ಲಿ ಹೋಮಹವನಾದಿಗಳನ್ನು ಮಾಡುತ್ತಾರೆ. ಕಾರ್ತೀಕ ಮಾಸದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರಕಾರ್ತೀಕ ದೀಪೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಧನುರ್ಮಾಸ ಹಾಗೂಶ್ರಾವಣ ಮಾಸಗಳಲ್ಲಿ ನಿತ್ಯ ವಿಶೇಷ ಪೂಜೆಗಳು ನಡೆಯುತ್ತಿವೆ.

Swamiji

Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
01-06-1974
Place :
ಉಡೆವು, ತರಿಕೆರೆ ತಾ||
Pattadikara :
2007
Photo :

Programs

ಪ್ರತಿ ಸಂಕಷ್ಟಹರ ಚತುರ್ಥಿಯ ಆಚರಣೆ ಧನುರ್ಮಾಸದಲ್ಲಿ ನಿತ್ಯ ವಿಶೇಷ ಪೂಜೆ
ಕಾರ್ತೀಕ ಮಾಸದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಕಾರ್ತೀಕೋತ್ಸವ
ಗಣೇಶ ಹಬ್ಬ ಆಚರಣೆ ಹಾಗೂ ಅನೇಕ ಶಿಬಿರಗಳ ಆಯೋಜನೆ
ಶ್ರಾವಣ ಮಾಸದಲ್ಲಿ ನಿತ್ಯ ಸಂಜೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತರ ಮನೆಗಳಿಗೆ ತೆರಳಿ ಇಷ್ಟಲಿಂಗ ಪೂಜೆ
ಪ್ರಸ್ತುತ ಶ್ರೀಗಳ ವರ್ಧಂತಿ ಮಹೋತ್ಸವ ಪ್ರಸ್ತುತ ರಂಭಾಪುರಿ ಶ್ರೀಗಳ ವರ್ಧಂತಿ ಮಹೋತ್ಸವ

Photos

Full Address Kannada

ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಠ
ತರೀಕೆರೆ ರಸ್ತೆ, ಬೀರೂರು - 577 116
ಕಡೂರು ತಾ||, ಚಿಕ್ಕಮಗಳೂರು ಜಿಲ್ಲೆ

Map

Near by Places

ಕಡೂರು - 7 ಕಿ.ಮೀ.
ತರೀಕೆರೆ- 22 ಕಿ.ಮೀ.
ಅರಸೀಕೆರೆ - 40 ಕಿ.ಮೀ.
ಚಿಕ್ಕಮಗಳೂರು - 40 ಕಿ.ಮೀ.

Statistic

214 Views
0 Rating
0 Favorite
0 Share
error: Content is protected !!