Shreemad Rambhapuri Charapattadhyakshara Matha

Shreemad Rambhapuri Charapattadhyakshara Matha Claimed

ಶ್ರೀಮದ್ ರಂಭಾಪುರಿ ಚರಪಟ್ಟಾಧ್ಯಕ್ಷರ ಮಠ

Average Reviews

Description

ಶ್ರೀಮದ್ ರಂಭಾಪುರಿ ಚರಪಟ್ಟಾಧ್ಯಕ್ಷರ ಮಠ-ಗೋಡೆಕೆರೆ

ಕರ್ತೃ – ಶ್ರೀ ಶ್ರೀ ಸಿದ್ದಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು

ಗೋಡೆಕೆರೆ ಗ್ರಾಮವು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಪ್ರಮುಖ ಗ್ರಾಮವಾಗಿದ್ದು ಈ ಗ್ರಾಮದಲ್ಲಿ ಸುಮಾರು 450 ವರ್ಷಗಳ ಇತಿಹಾಸವಿರುವಶ್ರೀಮದ್ ರಂಭಾಪುರಿ ಚರಪಟ್ಟಾಧ್ಯಕ್ಷರ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.ಸುಮಾರು 450 ವರ್ಷಗಳ ಹಿಂದೆ ಶ್ರೀಮದ್ ರಂಭಾಪುರಿ ಪೀಠದಜಗದ್ಗುರುಗಳಾದ ಶ್ರೀ ಶಾಂತದೇಶಿಕೇಂದ್ರ ಸ್ವಾಮಿಗಳು ಲೋಕಸಂಚಾರದಲ್ಲಿದ್ದ ಸಮಯದಲ್ಲಿಗೋಡೆಕೆರೆಯಲ್ಲಿ ಪಟ್ಟದ ಮಠವನ್ನು ಸ್ಥಾಪಿಸಿ ಮುನ್ನಡೆದಿದ್ದಾರೆ. ಅಂದಿನಿಂದಪ್ರಾರಂಭಗೊಂಡ ಗೋಡೆಕೆರೆ ಸಂಸ್ಥಾನ ಮಠವು ಶ್ರೀ ಶ್ರೀ ಬಸವಪ್ರಭುಸ್ವಾಮಿಗಳ ಕಾಲದಲ್ಲಿಸ್ಥಿರ ಮತ್ತು ಚರ ಪಟ್ಟಾಧ್ಯಕ್ಷರ ಮಠಗಳೆಂದು ವಿಂಗಡಣೆಗೊಂಡು ಚರ ಪಟ್ಟಾಧ್ಯಕ್ಷರಮಠವನ್ನು ಶ್ರೀ ಶ್ರೀ ಸಿದ್ದಲಿಂಗ ದೇಶಿಕೇಂದ್ರಸ್ವಾಮಿಗಳು ಮುನ್ನಡೆಸಿದರು. ಆದ್ದರಿಂದಇವರನ್ನೇ ಶ್ರೀ ಮಠದ ಕರ್ತೃಗುರುಗಳೆಂದು ಪರಿಗಣಿಸಬಹುದು.ಶ್ರೀ ಸಿದ್ದಲಿಂಗ ದೇಶಿಕೇಂದ್ರಸ್ವಾಮಿಗಳು ಮಹಾಮಹಿಮ ಪುರುಷರು, ಆಧ್ಯಾತ್ಮಜೀವಿಗಳೂ ಆಗಿದ್ದರು. ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಮನಸ್ಸಿನಲ್ಲಿ ಪವಾಡಪುರುಷರಾಗಿ ನೆಲೆನಿಂತವರು ಮತ್ತು ಪ್ರತ್ಯೇಕಗೊಂಡ ಮಠಕ್ಕೆ ಜನರಮನಸ್ಸಿನಲ್ಲಿ ನೆಲೆ ಒದಗಿಸಿ ತಮ್ಮ 108 ವರ್ಷಗಳ ಸಾರ್ಥಕ ಜೀವನವನ್ನು 1922ರಲ್ಲಿ ಮುಗಿಸಿಲಿಂಗದೊಳಗಾದರು.ಶ್ರೀಗಳ ನಂತರ ಬಂದ ಶ್ರೀ ಶ್ರೀ ಬಸವಲಿಂಗ ಪ್ರಭುಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಅಭಿವೃದ್ಧಿ ಪಥದತ್ತ ಮುನ್ನಡೆದಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧರ್ಮಜಾಗೃತಿಯನ್ನು ಮೂಡಿಸುತ್ತಾ ಅನುಷ್ಠಾನ ಕಾರ್ಯಗಳನ್ನು ಕೈಗೊಂಡುಜನಪ್ರಿಯರಾಗಿದ್ದರು. ಶ್ರೀಗಳು ಶ್ರೀಮಠದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿ1974ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು 1983ರನವೆಂಬರ್ 14ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಗೊಳಿಸುತ್ತಿದ್ದಾರೆ. ಮಠದ ಆಸ್ತಿಯನ್ನು ಅಭಿವೃದ್ಧಿಪಡಿಸಿ ಆದಾಯ ಮೂಲವನ್ನಾಗಿಪರಿವರ್ತಿಸಿ ಶ್ರೀಮಠವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಭಕ್ತ ಸಮುದಾಯಕ್ಕೆ ಸೌಕರ್ಯಕಲ್ಪಿಸುವ ಉದ್ದೇಶದಿಂದ ಶ್ರೀ ಗುರುಸಿದ್ದರಾಮೇಶ್ವರ ದಾಸೋಹ ಭವನವನ್ನುನಿರ್ಮಿಸಿದ್ದಾರೆ.

Swamiji

Swamiji Name :
ಶ್ರೀ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮಿಗಳು
Date of Birth :
10-12-1961
Place :
ಗೋಡೆಕೆರೆ, ಚಿಕ್ಕನಾಯಕನಹಳ್ಳಿ ತಾ||
Pattadikara :
14-11-1983
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಕಾರ್ತಿಕ ಮಾಸದ ಕೊನೆ ಸೋಮವಾರ ಲಕ್ಷದೀಪೋತ್ಸವ ಮತ್ತು ವಿವಿಧ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ವೈಶಾಖ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಸಾಮೂಹಿಕ ವಿವಾಹಗಳು ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದಸರಾದಲ್ಲಿ - ಶ್ರೀ ಸಿದ್ದರಾಮೇಶ್ವರ ರಥೋತ್ಸವ

Institutions

ಪ್ರೌಢ ಶಾಲೆ ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀಮದ್ ರಂಭಾಪುರಿ ಚರಪಟ್ಟಾಧ್ಯಕ್ಷರ ಮಠ ಗೋಡೆಕೆರೆ - 572 214 ಚಿಕ್ಕನಾಯಕನಹಳ್ಳಿ ತಾ||, ತುಮಕೂರು ಜಿಲ್ಲೆ

Map

Near by Places

ಗೋಡೆಕೆರೆ ಗೇಟ್ - 2 ಕಿ.ಮೀ. ಕೆ.ಬಿ. ಕ್ರಾಸ್ - 7 ಕಿ.ಮೀ. ಚಿಕ್ಕನಾಯಕನಹಳ್ಳಿ - 8 ಕಿ.ಮೀ. ತುಮಕೂರು - 50 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!