ನಂದಿಗುಡಿಯ ಶ್ರೀ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠವು ನೊಳಂಬರಾಜರ ಕಾಲದಲ್ಲಿ ಸ್ಥಾಪನೆಯಾಗಿರಬಹುದು ಎಂದು ಹೇಳಲಾಗಿದೆ. ಶ್ರೀಶೈಲ ಶಾಖಾಅನುವರ್ತಿಯಾದ ಈ ಸಂಸ್ಥಾನ ಮಠದಲ್ಲಿ 25 ಕ್ಕೂ ಹೆಚ್ಚು ಮಠಾಧೀಶರು ಅಧಿಕಾರಕ್ಕೆಬಂದು ಹೋಗಿರಬಹುದೆಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳುಮತ್ತು ಕುರುಹುಗಳು ತುಂಗಾಭದ್ರಾ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿರಬಹುದುಅಥವಾ ಹಿಂದೆ ಇದ್ದ ಹಳೆಮಠವು ಶಿಥಿಲಗೊಂಡು ಬಿದ್ದು ಹೋದ ಸಂದರ್ಭದಲ್ಲಿದಾಖಲೆಗಳು ನಾಶವಾಗಿರಬಹುದು.ಶ್ರೀ ಕೆಂಚವೀರ ಸ್ವಾಮಿಗಳಿಂದ ಆರಂಭವಾಗಿರಬಹುದಾದ ಶ್ರೀ ಮಠದಪರಂಪರೆಯು ಈಗಿನ ಶ್ರೀಗಳಾದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ತನಕನಡೆದುಕೊಂಡು ಬಂದಿದೆ. ಶ್ರೀ ಮಠದ ಎಂಟನೇ ಜಗದ್ಗುರುಗಳೆಂದು ಹೇಳಲಾದ ಶ್ರೀಗುರು ಕರಿಬಸವೇಶ್ವರ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಲಿಂಗೈಕ್ಯರಾದರೆಂದುಹೇಳಲಾಗಿದೆ. ಶ್ರೀಗಳು ಪವಾಡ ಪುರುಷರಾಗಿದ್ದು ಇಂದಿಗೂ ಸಹ ನಂದಿಗುಡಿಯಗುರುಪರಂಪರೆಯು ಉಕ್ಕಡಗಾತ್ರಿಯ ಜತೆಗೆ ಧಾರ್ಮಿಕ ಸಂಬಂಧ ಹೊಂದಿದೆ.ಹಿಂದಿನ ಶ್ರೀಗಳಾದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಬಸವರಾಜದೇಶೀಕೇಂದ್ರ ಸ್ವಾಮಿಗಳ ನಂತರ ಅವರ ಆಶಯದಂತೆ ಶ್ರೀ ಮಠದ ಪಟ್ಟಾಧಿಕಾರವನ್ನುಹೊಂದಿ ಸಂಘಟನೆ ದೃಷ್ಠಿಯಿಂದ ಒಡೆದು ಹೋಗಿದ್ದ ನೊಳಂಬ ಸಮಾಜವು ಪುನರ್ಸಂಘಟನೆಯಾಗಲು ಕಾರಣಕರ್ತರಾದರು. ಶ್ರೀಗಳು ತಮ್ಮ ಕಾರ್ಯವ್ಯಾಪ್ತಿಯನ್ನುನಂದಿಗುಡಿ ಹಾಗೂ ಹರಿಹರಕ್ಕೆ ಸೀಮಿತಗೊಳಿಸದೆ, ನಾಡಿನಾದ್ಯಂತ ವಿಸ್ತರಿಸಿ ಭಕ್ತರಿಗೆಮಾರ್ಗದರ್ಶನ ನೀಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳುಹಾಸನ ತಾಲ್ಲೂಕು ಹುಲೇಕಲ್ಲಳ್ಳಿಯವರಾಗಿದ್ದು, ಶ್ರೀಮಠಕ್ಕೆ ಪಟ್ಟಾಧಿಕಾರಕ್ಕೆ ಬಂದಂದಿನಿಂದಶ್ರೀಮಠವನ್ನು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿಯಶಸ್ವಿಯಾಗಿದ್ದಾರೆ.
Swamiji
Swamiji Name :
ಶ್ರೀಮದ್ ವೃಷಭಪುರಿ ಸೂರ್ಯಸಿಂಹಾಸನಾಧೀಶ್ವರ 1108 ಜಗದ್ಗುರು ಶ್ರೀ ಸಿದ್ರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Place :
ಹುಲೇಕಲ್ಲಳ್ಳಿ, ಹಾಸನ ತಾ||
Photo :
Programs
ಪ್ರತಿನಿತ್ಯ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ.
ಪ್ರತಿ ತಿಂಗಳು ಹುಣ್ಣಿಮೆಗೆ ಶಿವಾನುಭವ ಗೋಷ್ಠಿ.
ಮಾರ್ಗಶಿರ ದಶಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಪಾಲ್ಗುಣ ಮಾಸದಲ್ಲಿ ಶ್ರೀ ನಂದೀಶ್ವರ ಸ್ವಾಮಿಯ ರಥೋತ್ಸವ, ಜಾತ್ರೆ
(ಏಳು ದಿನಗಳ ಕಾಲ ನಡೆಯುವುದು).
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಡಿ.ಎಡ್., / ಬಿ.ಎಡ್., ಕಾಲೇಜು.
ವಿದ್ಯಾರ್ಥಿ ನಿಲಯ / ವಿದ್ಯಾರ್ಥಿನಿ ನಿಲಯ.
Photos
Full Address Kannada
ಶ್ರೀ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠ
ನಂದಿಗುಡಿ, ವಾಸನ ಪೋಸ್ಟ್ - 577 216
ಹರಿಹರ ತಾ||, ದಾವಣಗೆರೆ ಜಿ||