ಶ್ರೀ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ, ಸುಕ್ಷೇತ್ರ ಅಬ್ಬೆ ತುಮಕೂರು
ಕರ್ತೃ – ಪರಮಪೂಜ್ಯ ಶ್ರೀ ವಿಶ್ವಾರಾಧ್ಯ ಮಹಾಸ್ವಾಮಿಗಳು
ಯಾದಗಿರಿ ಜಿಲ್ಲಾಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಅಬ್ಬೆ ತುಮಕೂರುಸುಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ವಿಶ್ವಾರಾಧ್ಯರಿಮದ ಸ್ಥಾಪಿಸಲ್ಪಟ್ಟ ಶ್ರೀ ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠವು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ರತ್ನ ಡಾ. ಗಂಗಾಧರ ಮಹಾಸ್ವಾಮಿಗಳನೇತೃತ್ವದಲ್ಲಿ ನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿ ಬೆಳೆದಿದೆ.ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಗಂವ್ಹಾರ ಗ್ರಾಮದಲ್ಲಿ 1883ರಲ್ಲಿ ಜನಿಸಿದಶ್ರೀ ವಿಶ್ವಾರಾಧ್ಯರು ಬಾಲ್ಯದಿಂದಲೇ ಆಧ್ಯಾತ್ಮ ಜೀವಿಗಳು. ಚಿಕ್ಕ ವಯಸ್ಸಿನಲ್ಲಿಯೇ ಕಠಿಣವ್ರತಾಚರಣೆಗಳಿಗೆ ಒಳಪಟ್ಟ ಶ್ರೀಗಳು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಹೆಚ್ಚಿನಅಭ್ಯಾಸಕ್ಕಾಗಿ ಕಾಶಿಗೆ ತೆರಳಿದರು. ಕಾಶಿಯ ಜ್ಞಾನ ಪೀಠದ ಆಶ್ರಯದಲ್ಲಿ ಸಂಸ್ಕøತವೇದಾಧ್ಯಯನಗಳನ್ನು ಅಭ್ಯಸಿಸಿದ ಶ್ರೀಗಳು ಹುಟ್ಟೂರಿಗೆ ಮರಳಿದರು.ಶ್ರೀಗಳು ಕಾಶಿಯಿಂದ ಗಂವ್ಹಾರಕ್ಕೆ ಮರಳಿದ ನಂತರ ಗೃಹಸ್ಥಾಶ್ರಮ ಸ್ವೀಕರಿಸಿದರು.ತದನಂತರ ಊರಿನಲ್ಲೇ ಪಾಠಶಾಲೆಯನ್ನು ಪ್ರಾರಂಭಿಸಿ ಮಕ್ಕಳಿಗೆ ವಿದ್ಯಾದಾನ ಮಾಡಿದರು.ಸಂಸಾರದಲ್ಲಿದ್ದರೂ ಶ್ರೀಗಳು ತಮ್ಮ ಆಧ್ಯಾತ್ಮಸಿದ್ಧಿಗೆ ಯಾವುದೇ ಭಂಗ ತರುವುದಿಲ್ಲ. ಆಗಾಗಅನುಷ್ಠಾನ ಕೈಗೊಳ್ಳುತ್ತಾ ತಮ್ಮ ಆತ್ಮೋನ್ನತಿಯನ್ನು ಪಡೆಯುವ ಶ್ರೀಗಳು ಸಂಸಾರವನ್ನುತ್ಯಜಿಸಿ ಪಾರಮಾರ್ಥದ ದಾರಿಯನ್ನು ಹಿಡಿದು ಸಂಚಾರಕ್ಕೆ ಹೊರಟರು.ಹೀಗೆ ಸಂಚಾರ ಹೊರಟ ಶ್ರೀ ವಿಶ್ವಾರಾಧ್ಯರು ನಾಡಿನಾದ್ಯಂತ ಸಂಚರಿಸಿ ಅಲ್ಲಲ್ಲಿಅನುಷ್ಠಾನ ಕೈಗೊಂಡು ವೀರಶೈವ ಧರ್ಮದ ಆಚರಣೆಗಳ ಬಗ್ಗೆ ಜನರಲ್ಲಿ ಅರಿವುಮೂಡಿಸಿದರು. ತಮ್ಮ ಅನುಷ್ಠಾನಗಳಿಂದ ಸಿದ್ಧಿ ಪಡೆದು ಶಿವಯೋಗಿಗಳೆನಿಸಿದ ಶ್ರೀಗಳು ಶ್ರೀಶಿವಯೋಗಿ ವಿಶ್ವಾರಾಧ್ಯರೆಂಬ ಅಭಿದಾನ ಪಡೆದರು. ಹೀಗೆ ಸಂಚಾರ ಮಾಡುತ್ತಾ ಅಬ್ಬೆತುಮಕೂರಿಗೆ ಆಗಮಿಸಿದ ಶ್ರೀಗಳು ಇಲ್ಲಿ ಅನುಷ್ಠಾನಗೊಂಡರು.ಶ್ರೀಗಳು ಪಾದಕ್ಕೆ ಚಕ್ಕರ ಕಟ್ಟಿಕೊಂಡವರಂತೆ ಸದಾ ಸಂಚಾರದಲ್ಲಿರುತ್ತಿದ್ದರು.ಆದರೆ ಅಬ್ಬೆ ತುಮಕೂರಿನ ಭಕ್ತರ ಕರೆಗೆ ಓಗೊಟ್ಟ ಶ್ರೀಗಳು ಇಲ್ಲೇ ಸ್ಥಿರವಾದರು. ಹೀಗೆಭಕ್ತರಿಗಾಗಿ ನೆಲೆನಿಂತ ಶ್ರೀಗಳಿಗೋಸ್ಕರ ಭಕ್ತರು ಮಠವನ್ನು ಕಟ್ಟಿಸಿಕೊಟ್ಟರು. ಶ್ರೀಗಳು ತಮ್ಮಧಾರ್ಮಿಕ ಆಚರಣೆಗಳಿಂದ, ಪವಾಡಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲೆಲ್ಲಾ ಪ್ರಸಿದ್ಧಿಗೊಂಡು ಭಕ್ತರ ಪಾಲಿನ ಆರಾಧ್ಯ ದೈವವಾದರು. ಹೀಗೆ ಪವಾಡ ಪುರುಷರಾಗಿ, ಆಧ್ಯಾತ್ಮದಹುಚ್ಚರಾಗಿ, ದೇವಿಯನ್ನು ಒಲಿಸಿಕೊಂಡ ಅವಧೂತರಾಗಿ, ಭಕ್ತರನ್ನು ಸನ್ಮಾರ್ಗದತ್ತಕೊಂಡೊಯ್ದ ಶ್ರೀಗಳು ಜೀವಂತ ಸಮಾಧಿ ಹೋದರೆಂದು ತಿಳಿದುಬರುತ್ತದೆ. ಹೀಗೆಶ್ರೀಗಳಿಂದಾಗಿ ಅಬ್ಬೆ ತುಮಕೂರು ಗ್ರಾಮವು ಪ್ರಸಿದ್ಧ ಯಾತ್ರಾಸ್ಥಳವಾಗಿ ಗುರುತಿಸಿಕೊಂಡಿತು.
ಶ್ರೀ ಶಿವಯೋಗಿ ವಿಶ್ವಾರಾಧ್ಯ ಸ್ವಾಮಿಗಳಿಂದ ಸುಕ್ಷೇತ್ರವಾಗಿ ಪರಿವರ್ತಿತಗೊಂಡಅಬ್ಬೆ ತುಮಕೂರಿನ ಮಠಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರತೊಡಗಿದರು.ಆದರೆ ಗುರುಗಳ ಐಕ್ಯಾನಂತರ ಬಂದ ಅನೇಕ ಸಾಧಕರು ಸುಕ್ಷೇತ್ರದಲ್ಲಿ ನೆಲೆಗೊಳ್ಳಲುಪ್ರಯತ್ನಿಸಿ ವಿಫಲರಾದರು. ಕಾಲಾನಂತರ ಶ್ರೀ ವಿಶ್ವಾರಾಧ್ಯರ ವಂಶಸ್ಥರೇ ಆದ ಶ್ರೀಗಂಗಾಧರ ಸ್ವಾಮಿಗಳು ಇಲ್ಲಿಗೆ ಆಗಮಿಸಿ ನೆಲೆನಿಲ್ಲುತ್ತಾರೆ.ಶ್ರೀ ಗಂಗಾಧರ ಸ್ವಾಮಿಗಳು ಬಾಲ್ಯದಿಂದಲೇ ಆಧ್ಯಾತ್ಮಿಕತೆಯತ್ತ ಒಲವುಹೊಂದಿದವರು. ಹುಬ್ಬಳ್ಳಿಯಲ್ಲಿ ಸಂಸ್ಕøತ ಶಿಕ್ಷಣವನ್ನು ಪೂರ್ಣಗೊಳಿಸಿದ ಶ್ರೀಗಳು ತಮ್ಮವಂಶಸ್ಥ ಗುರುಗಳಿಂದ ಸ್ಥಾಪಿತಗೊಂಡ ಶ್ರೀಮಠವನ್ನು ಮುನ್ನಡೆಸಿಕೊಂಡು ಹೋಗುವಉದ್ದೇಶದಿಂದ ಶ್ರೀಮಠಕ್ಕೆ ಬಂದರು. ಆದರೆ ಬಹುಕಾಲ ಶ್ರೀಮಠವು ಖಾಲಿ ಉಳಿದಿದ್ದರಿಂದಶ್ರೀಮಠದ ವ್ಯವಸ್ಥೆ ಸರಿಯಿರಲಿಲ್ಲ. ಮೊದಲು ಸುಕ್ಷೇತ್ರದ ಅಭಿವೃದ್ಧಿ ಕಡೆಗೆ ಮನ ಮಾಡಿದಶ್ರೀಗಳು ಆನಂತರವಷ್ಟೇ 1996ರಲ್ಲಿ ಶ್ರೀಮಠದ ಪೂರ್ಣ ಅಧಿಕಾರ ವಹಿಸಿಕೊಂಡರು.ಶ್ರೀ ಷ.ಬ್ರ. ಶಿವಾಚಾರ್ಯ ರತ್ನ ಡಾ. ಗಂಗಾಧರ ಮಹಾಸ್ವಾಮಿಗಳು ಎಂಬಅಭಿದಾನದೊಂದಿಗೆ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ಶ್ರೀಗಳು ಅಲ್ಪಾವಧಿಯಲ್ಲಿಯೇ ತಮ್ಮ ಕ್ರಿಯಾಶೀಲತೆಯಿಂದ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿ ನೆಲೆನಿಲ್ಲುವಂತೆ ಮಾಡಿದ್ದಾರೆ. ಶ್ರೀಮಠದಲ್ಲಿಕರ್ತೃಗುರುಗಳಾದ ಶ್ರೀ ವಿಶ್ವಾರಾಧ್ಯ ಶಿವಯೋಗಿಗಳ ಗದ್ದುಗೆಯನ್ನು ನಿರ್ಮಿಸಿರುವ ಶ್ರೀಗಳು,ಸುಂದರ ಕಲಾತ್ಮಕ ಕೆತ್ತನೆಗಳನ್ನೊಳಗೊಂಡ ಮಠದ ಕಟ್ಟಡ, ಶಿವಾನುಭವ ಮಂಟಪ,ಕಲ್ಯಾಣ ಮಂಟಪ, ಪ್ರಸಾದ ನಿಲಯ ಇನ್ನೂ ಮುಂತಾದ ಅಭಿವೃದ್ಧಿಕಾರ್ಯಗಳನ್ನುಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕವಾಗಿ ಅಲ್ಲದೇ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕಹಾಗೂ ಸಾಹಿತ್ಯಿಕವಾಗಿಯೂ ಕಾರ್ಯತತ್ಪರರಾಗಿದ್ದು ಶ್ರೀಮಠದ ವತಿಯಿಂದ ಅನೇಕಶಾಲಾಕಾಲೇಜುಗಳನ್ನು ತೆರೆದು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟಿದ್ದಾರೆ.ಶ್ರೀಮಠದಲ್ಲಿ ಶಿವರಾತ್ರಿ ಪಂಚಮಿಗೆ ಶ್ರೀ ವಿಶ್ವಾರಾಧ್ಯರ ಜಾತ್ರೆ ನಡೆಯುತ್ತಿದ್ದು ನಾಡಿನಮೂಲೆಮೂಲೆಗಳಿಂದ ಅಸಂಖ್ಯಾತ ಭಕ್ತರು ಪಾಲ್ಗೊಂಡು ಪುನೀತರಾಗುತ್ತಾರೆ.
ವಿಶೇಷತೆ:
ಪ್ರತಿ ವರ್ಷ ಶಿವರಾತ್ರಿ ಜಾತ್ರೆಗೆ
‘ವಿಶ್ವ ಶ್ರೀ’ ಪ್ರಶಸ್ತಿ ಪ್ರದಾನ.
Swamiji
Swamiji Name :
ಶ್ರೀ ಷ.ಬ್ರ. ಶಿವಾಚಾರ್ಯ ರತ್ನ ಡಾ. ಗಂಗಾಧರ ಮಹಾಸ್ವಾಮಿಗಳು
Date of Birth :
15-8-1963
Place :
ಗಂವ್ಹಾರ, ಜೇವರ್ಗಿ ತಾ||
Photo :
Programs
ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ಯುಗಾದಿ ಆದ 3ನೇ ದಿನಕ್ಕೆ ಶ್ರೀ ವಿಶ್ವಾರಾಧ್ಯರ ಹುಟ್ಟುಹಬ್ಬ, ತೊಟ್ಟಿಲ ಉತ್ಸವ.
ಶಿವರಾತ್ರಿ ಆದ 5Àನೇ ದಿನಕ್ಕೆ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ.
ಎಳ್ಳು ಅಮವಾಸ್ಯೆ ಆದ 5ನೇ ದಿನಕ್ಕೆ ಶ್ರೀ ಬಸವಾಂಬೆ ತಾಯಿಯವರ ಜಾತ್ರೆ.
ನಾಗರ ಅಮವಾಸ್ಯೆಗೆ 3 ದಿನ ಮುಂಚಿತವಾಗಿ ಗಂವ್ಹಾರದಿಂದ ಶ್ರೀಮಠಕ್ಕೆ ಪಾದಯಾತ್ರೆ.
ಶ್ರಾವಣ ಮಾಸದಲ್ಲಿ ನಿತ್ಯ ಮಹಾಪೂಜೆ.
ನವರಾತ್ರಿಗೆ ಶ್ರೀದೇವಿ ಪುರಾಣ ಪಾರಾಯಣ.
ಸಂಕ್ರಾಂತಿಗೆ ಶ್ರೀಮಠದಿಂದ ಶ್ರೀಗಳ ನೇತೃತ್ವದಲ್ಲಿ ಭೀಮಾ ನದಿಗೆ ಭಕ್ತರೊಂದಿಗೆ ಹೋಗಿ ಪುಣ್ಯಸ್ನಾನ.
ಪ್ರತಿ ವರ್ಷ ಆಗಸ್ಟ್ 15 ರಂದು ಪ್ರಸ್ತುತ ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ
ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
Institutions
ಸಂಸ್ಕøತ / ಸಂಗೀತ ಪಾಠಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀ ಶಾಲೆ.
ಪದವಿಪೂರ್ವ ಕಾಲೇಜು / ವಿದ್ಯಾರ್ಥಿ ನಿಲಯ.
ಶಿಕ್ಷಣ ಸಂಸ್ಥೆಗಳು
Photos
Full Address Kannada
ಶ್ರೀ ವಿಶ್ವಾರಾಧ್ಯ ಸಿದ್ಧ ಸಂಸ್ಥಾನ
ಸುಕ್ಷೇತ್ರ ಅಬ್ಬೆ ತುಮಕೂರು - 585 201
ಯಾದಗಿರಿ ತಾ|| ಜಿ||