ವಿಜಯಪುರ ಜಿˉÉ್ಲ ಸಿಂಧಗಿ ತಾಲ್ಲೂಕಿನ ಬೋರಗಿ ಗ್ರಾಮವು ತಾಲ್ಲೂಕುಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು, ಬೋರಗಿ-ಪೂರದಾಳ ಗ್ರಾಮಗಳ ಹೊರಭಾಗದಲ್ಲಿ ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರು ಅನುಷ್ಠಾನಗೊಂಡಿದ್ದ ಸ್ಥಳದಲ್ಲಿ ಶ್ರೀತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಸ್ಥಾಪಿಸಿರುವ ಶ್ರೀ ವಿಶ್ವಾರಾಧ್ಯ ಮಠವುಈ ಭಾಗದಲ್ಲಿ ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಸಿದ್ದಿಗೆ ಬಂದಿದೆ. ಶ್ರೀಮಠವುಶ್ರೀಮದ್ ಕಾಶಿ ಪೀಠದ ಶಾಖಾ ಮಠವಾಗಿದೆ.ಅಬ್ಬೆ ತುಮಕೂರಿನ ಶ್ರೀ ವಿಶ್ವಾರಾಧ್ಯರು ˉÉೂೀಕಸಂಚಾರಿಗಳು, ಅವರು ಸಂಚಾರಮಾಡುತ್ತಾ ಅಲ್ಲಲ್ಲಿ ನೆˉÉನಿಂತು ಅನುಷ್ಠಾನ ಕೈಗೊಂಡು ಆ ಸ್ಥಳಗಳನ್ನು ಜಾಗೃತಗೊಳಿಸಿಮುನ್ನಡೆಯುತ್ತಿದ್ದರು. ಹೀಗೆ ಬೋರಗಿ ಗ್ರಾಮದ ಹೊರಭಾಗದಲ್ಲಿ ಅನುಷ್ಠಾನಗೊಂಡುಸುಕ್ಷೇತ್ರವನ್ನಾಗಿ ಮಾಡಿ ಮುನ್ನಡೆದಿದ್ದಾರೆ. ಆ ಸ್ಥಳದಲ್ಲಿ ಶ್ರೀ ತಪೋರತ್ನಂ ಮಹಾಲಿಂಗೇಶ್ವರಮಹಾಸ್ವಾಮಿಗಳು ಶ್ರೀಮಠವನ್ನು ಸ್ಥಾಪಿಸಿದ್ದಾರೆ.ಶ್ರೀ ವಿಶ್ವರಾಧ್ಯರಿಂದ ಜಾಗೃತಗೊಂಡ ಸ್ಥಳದಲ್ಲಿ ಶ್ರೀಮಠವನ್ನು ಸ್ಥಾಪಿಸಿದ ಶ್ರೀಮಹಾಲಿಂಗೇಶ್ವರರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿಶ್ರೀ ವಿಶ್ವಾರಾಧ್ಯರ ತೋರು ಗದ್ದುಗೆಯನ್ನು ಸ್ಥಾಪಿಸಿದ್ದು ಈ ಗದ್ದುಗೆಗೆ ನಿತ್ಯ ಪೂಜೆಯನ್ನುನಡೆಸˉÁಗುತ್ತಿದೆ. ಹಾಗೂ ಭಕ್ತರ ಸಹಕಾರದೊಂದಿಗೆ ಶ್ರೀಮಠದ ಅಭಿವೃದ್ಧಿಗೆ ಕಾರ್ಯಯೋಜನೆಯನ್ನು ರೂಪಿಸಿಕೊಂಡಿರುವ ಶ್ರೀಗಳು ಕಾರ್ಯೋನ್ಮುಖರಾಗಿದ್ದಾರೆ.ಶ್ರೀಗಳು ಕೇವಲ ಧಾರ್ಮಿಕವಾಗಿ ಅಲ್ಲದೆ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಕಾರ್ಯನಿರ್ವಹಿಸುತ್ತಿದ್ದು ಶ್ರೀಮಠಕ್ಕೆ ಆಗಮಿಸುವ ನೂರಾರು ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಹಾಗೂ ಶ್ರೀಮಠದ ವತಿಯಿಂದ ಐ.ಟಿ.ಐ.ಕಾˉÉೀಜನ್ನು ಸ್ಥಾಪಿಸಿದ್ದು ಜೊತೆಗೆ ವಿದ್ಯಾರ್ಥಿ ನಿಲಯವನ್ನೂ ನಿರ್ವಹಿಸುತ್ತಾ ಬಂದಿದ್ದಾರೆ.ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆ ಶಿವಾನುಭವಗೋಷ್ಠಿಗಳು ಆಯೋಜನೆಗೊಂಡುಭಕ್ತರಿಗೆ ವೀರಶೈವ ಧರ್ಮದ ಪರಿಚಯ ಮಾಡಿಕೊಡˉÁಗುತ್ತಿದೆ. ಹಾಗೂ ವಿಜಯದಶಮಿಮರುದಿನ ಶ್ರೀ ಭೀಮಶಂಕರ ಮಹಾರಾಜರ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಶ್ರೀವಿಶ್ವಾರಾಧ್ಯರ ರಥೋತ್ಸವವು ಶಿವರಾತ್ರಿ ನಂತರ ಜರುಗುತ್ತದೆ.
Swamiji
Swamiji Name :
ಶ್ರೀ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು
Date of Birth :
11-6-1967
Place :
ಬ್ಯಾಡಗಿಹಾಳ, ಸಿಂಧಗಿ ತಾ||
Photo :
Programs
ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ಶಿವರಾತ್ರಿ ನಂತರ ಶ್ರೀ ವಿಶ್ವಾರಾಧ್ಯರ ರಥೋತ್ಸವ.
ವಿಜಯದಶಮಿಯ ಮರುದಿನ ಶ್ರೀ ಭೀಮಶಂಕರ ಮಹಾರಾಜರ ಜಾತ್ರಾ ಮಹೋತ್ಸವ