Shree Viraktamatha – Jeratagi

Shree Viraktamatha – Jeratagi Claimed

ಶ್ರೀ ವಿರಕ್ತಮಠ - ಜೇರಟಗಿ

Average Reviews

Description

ಶ್ರೀ ವಿರಕ್ತಮಠ – ಜೇರಟಗಿ

ಕರ್ತೃ – ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮವು ಐತಿಹಾಸಿಕಗ್ರಾಮವಾಗಿದ್ದು ಗ್ರಾಮದಲ್ಲಿ ಶರಣರ ಹೆಸರಿನ ದೇವಸ್ಥಾನಗಳು ಬಿಟ್ಟರೆ ಬೇರೆ ದೇವರುಗಳದೇವಸ್ಥಾನಗಳಿಲ್ಲದಿರುವುದು ವಿಶೇಷ. ಇಂತಹ ಐತಿಹಾಸಿಕ ಗ್ರಾಮದಲ್ಲಿ ಈಗ್ಗೆ 4ಶತಮಾನಗಳ ಪೂರ್ವದಲ್ಲಿ ಸುರಪುರ ಸಂಸ್ಥಾನದ ದೊರೆ ವೆಂಕಟಪ್ಪನಾಯಕನ ಕಾಲದಲ್ಲಿಅಸ್ತಿತ್ವಕ್ಕೆ ಬಂದಿರುವ ಮಠವೇ ಜೇರಟಗಿ ಶ್ರೀ ವಿರಕ್ತಮಠ.12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಶರಣರು ದೇಶ ಸಂಚಾರಕ್ಕೆಹೊರಟ ಸಂದರ್ಭದಲ್ಲಿ ಶ್ರೀ ಚನ್ನಬಸವಣ್ಣ, ಶ್ರೀ ಸಿದ್ದರಾಮ, ಶ್ರೀ ಮಡಿವಾಳ ಮಾಚಿದೇವಹಾಗೂ ಶ್ರೀ ರೇವಣಸಿದ್ದೇಶ್ವರ ಮುಂತಾದ ಶರಣರು ಈ ಸ್ಥಳದಲ್ಲಿ ನೆಲೆಸಿ ಹೋಗಿದ್ದು ಈಕಾರಣದಿಂದಾಗಿ ಈ ಗ್ರಾಮವನ್ನು ಮರಿಕಲ್ಯಾಣವೆಂದು ಕರೆಯಲಾಗುತ್ತದೆ. ಇಂತಹಗ್ರಾಮದಲ್ಲಿ ಸುರಪುರದ ವೆಂಕಟಪ್ಪ ನಾಯಕನ ಸಹಕಾರದೊಂದಿಗೆ ಶ್ರೀ. ಮ.ನಿ.ಪ್ರ.ಬಸವಲಿಂಗ ಮಹಾಸ್ವಾಮಿಗಳು ಶ್ರೀಮಠವನ್ನು ಸ್ಥಾಪಿಸಿದ್ದು ಈ ಮಠಕ್ಕೆ ವೆಂಕಟಪ್ಪನಾಯಕನು ಭೂಮಿಯನ್ನು ಉಂಬಳಿಯಾಗಿ ನೀಡಿ ಮಠವನ್ನು ಸಮೃದ್ಧವಾಗಿ ಬೆಳೆಸಿದರು.ಈ ರೀತಿ ಸದೃಢವಾಗಿ ಬೆಳೆದ ಶ್ರೀ ಮಠದ ಪರಂಪರೆಯಲ್ಲಿ ಆನಂತರ ಕೆಲಶ್ರೀಗಳು ಅಧಿಕಾರ ನಡೆಸಿದ್ದು ಸೂಕ್ತ ದಾಖಲೆಗಳಿಲ್ಲದ ಕಾರಣ ದಾಖಲಿಸಲುಸಾಧ್ಯವಾಗುವುದಿಲ್ಲ. ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಗುರುಶಾಂತ ಮಹಾಸ್ವಾಮಿಗಳುಪರಂಪರೆಯಿಂದ ಶ್ರೀಮಂತಗೊಂಡ ಮಠದ ಪೀಠಾಧಿಪತಿಗಳಾಗಿ ಭಕ್ತರ ಸಹಕಾರದೊಂದಿಗೆಮಠವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿ 1991ರ ಮಾರ್ಚ್ 01 ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು ಹಿಂದಿನಗುರುಗಳಿರುವಾಗಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡಿದ್ದು ನಂತರಶಿವಯೋಗ ಮಂದಿರ ಹಾಗೂ ಹುಬ್ಬಳ್ಳಿ ಮೂರು ಸಾವಿರ ಮಠಗಳಲ್ಲಿ ವಿದ್ಯಾಭ್ಯಾಸಪೂರ್ಣಗೊಳಿಸಿ ಇಳಕಲ್ಲ ಶ್ರೀ ಮಹಾಂತಪ್ಪಗಳಿಂದ ಸಮಾಜಸೇವಾ ದೀಕ್ಷೆ ಪಡೆದುಶ್ರೀಮಠಕ್ಕೆ ಮರಳಿದರು. 1996ರ ಮಾರ್ಚ್ 23ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿದಶ್ರೀಗಳು ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದಾರೆಹಾಗೂ ಮಠದ ಕಟ್ಟಡವನ್ನು ನವೀಕರಿಸಿ ಜೊತೆಗೆ ಪರಂಪರೆ ಗುರುಗಳ ಗದ್ದುಗೆಗಳನ್ನುನವೀಕರಿಸಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು
Date of Birth :
1964
Place :
ಅಂಕಲಗಿ, ಜೇವರ್ಗಿ ತಾ||
Pattadikara :
23-03-1996
Photo :

Programs

ಫಾಲ್ಗುಣ ಮಾಸ (ಮಾರ್ಚ್ ತಿಂಗಳಲ್ಲಿ) ಲಿಂ|| ಶ್ರೀ.ಮ.ನಿ.ಪ್ರ.ಗುರುಶಾಂತ
ಸ್ವಾಮಿಗಳ ಪುಣ್ಯರಾಧನೆ, ಪುರಾಣ ಪ್ರವಚನ, ಉಚಿತ ನೇತ್ರ ಚಿಕಿತ್ಸಾ
ಶಿಬಿರ ಸಾಮೂಹಿಕ ವಿವಾಹ ಹಾಗೂ
ವಿವಿದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
ಗೌರಿ ಹುಣ್ಣಿಮೆಯ ನಂತರದಲ್ಲಿ
ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ
(ಸುಮಾರು 1 ಲಕ್ಷ ಭಕ್ತ ಸಮೂಹ)

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ವಿದ್ಯಾರ್ಥಿ ನಿಲಯ ಅನಾಥಾಶ್ರಮ

Photos

Full Address Kannada

ಶ್ರೀ ವಿರಕ್ತ ಮಠ
ಜೇರಟಗಿ - 585 310
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ

Map

Near by Places

ಸೊನ್ನಕ್ರಾಸ್ - 24 ಕಿ.ಮೀ.
ಜೇವರ್ಗಿ - 36 ಕಿ.ಮೀ
ಸಿಂಧಗಿ - 25 ಕಿ.ಮೀ.
ಕಲಬುರಗಿ - 75 ಕಿ.ಮೀ..

Statistic

4 Views
0 Rating
0 Favorite
0 Share
error: Content is protected !!