ವಿಜಯಪುರ ಜಿˉÉ್ಲಯ ಗೋಲಗೇರಿ ಗ್ರಾಮದಲ್ಲಿ ಶ್ರೀ ಮ.ನಿ.ಪ್ರ. ಸಿದ್ದರಾಮಸ್ವಾಮಿಗಳಿಂದ 1919ರ ಜುˉÉೈ 5ರಂದು ಸ್ಥಾಪಿತಗೊಂಡಿರುವ ಶ್ರೀ ವಿರಕ್ತ ಮಠವು ತನ್ನಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮೂಲಕ ಈ ಭಾಗದಲ್ಲಿಹೆಸರು ಮಾಡಿದೆ.ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ಸಿದ್ದರಾಮ ಸ್ವಾಮಿಗಳು ಮಹಾತಪಸ್ವಿಗಳಾಗಿದಾಸೋಹ ಮೂರ್ತಿಗಳೆಂದು ಹೆಸರು ಪಡೆದಿದ್ದರು. ಶ್ರೀಗಳು ˉÉೂೀಕಸಂಚಾರಿಗಳಾಗಿದ್ದುಸಂಚಾರ ಮಾಡುತ್ತಾ ಗೋಲಗೇರಿಗೆ ಬಂದು ಶ್ರೀ ಗೊˉÁ್ಲಳೇಶ್ವರ ದೇವಸ್ಥಾನದಲ್ಲಿನೆˉÉಗೊಂಡು ಧಾರ್ಮಿಕ ಆಚರಣೆಗಳನ್ನು ಮಾಡತೊಡಗಿದರು. ಶ್ರೀಗಳ ತಪೋಶಕ್ತಿಯಪ್ರಭಾವದಿಂದ ಪ್ರಭಾವಿತರಾದ ಭಕ್ತರು ಶ್ರೀಗಳಿಗೋಸ್ಕರ ಶ್ರೀಮಠವನ್ನು ಕಟ್ಟಿಸಿಕೊಟ್ಟಿದ್ದಾರೆ.ಸರಳ ಜೀವನ ನಡೆಸಿದ ಶ್ರೀಗಳು ವೀರಶೈವ ಧರ್ಮವನ್ನು ವ್ಯಾಪಕವಾಗಿ ಬೆಳೆಸಿದರು.ಶ್ರೀ ಸಿದ್ದರಾಮ ಸ್ವಾಮಿಗಳು ಶ್ರೀಮಠದಲ್ಲಿ ನಿತ್ಯ ಧರ್ಮೋಪದೇಶವನ್ನು ನೀಡಿಭಕ್ತರನ್ನುದ್ಧರಿಸಿದರು. ಈ ಕಾರಣದಿಂದಾಗಿ ಭಕ್ತರು ಇಂದಿಗೂ ಶ್ರೀಗಳ ನಾಮಸ್ಮರಣೆಯನ್ನುಮಾಡುತ್ತಿದ್ದಾರೆ. ಇಂತಹ ಮಹಾಮಹಿಮ ಪುರುಷರು 1958ರಲ್ಲಿ ಲಿಂಗೈಕ್ಯರಾಗಿದ್ದು,ತದನಂತರ ಶ್ರೀಮಠದ ಉತ್ತರಾಧಿಕಾರಿಗಳಾಗಿ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗಸ್ವಾಮಿಗಳನ್ನು ನೇಮಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ ಸಿದ್ದಲಿಂಗ ಸ್ವಾಮಿಗಳು 1981ರಲ್ಲಿ ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.ಶ್ರೀಗಳು ಬೆಂಗಳೂರಿನಲ್ಲಿ ಸಂಸ್ಕøತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಅಪಾರ ಜ್ಞಾನ ಸಂಪಾದಿಸಿದವರಾಗಿದ್ದಾರೆ. ಶ್ರೀಗಳು ಪಟ್ಟಕ್ಕೆ ಬರುವ ನಾಲ್ಕು ವರ್ಷಗಳಹಿಂದೆಯೇ ಶ್ರೀಮಠಕ್ಕೆ ಆಗಮಿಸಿ ಮಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡುನಂತರವಷ್ಟೇ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದರು.
Swamiji
Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು
Date of Birth :
1-6-1948
Place :
ಗೋಲಗೇರಿ, ಸಿಂಧಗಿ ತಾ||
Pattadikara :
1981
Photo :
Programs
ಮಹಾನವಮಿಗೆ ಶ್ರೀದೇವಿ ಪುರಾಣ ಪ್ರವಚನ.
ಶ್ರಾವಣದಲ್ಲಿ ವಿಶೇಷ ಪೂಜೆ.