ಹಾವೇರಿ ಜಿಲ್ಲೆ ಹಾನಗಲ್ಲು ತಾಲ್ಲೂಕು ಬೊಮ್ಮನಹಳ್ಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 17 ಕಿ.ಮೀ. ದೂರದಲ್ಲಿದ್ದು ಇಲ್ಲಿ ಸುಮಾರು 320 ವರ್ಷಗಳ ಇತಿಹಾಸವಿರುವಶ್ರೀ ಗುರುಪಾದೇಶ್ವರ ಸ್ವಾಮಿಗಳಿಂದ ಸ್ಥಾಪಿತಗೊಂಡಿರಬಹುದೆಂದು ಹೇಳಲಾದ ಶ್ರೀವಿರಕ್ತಮಠವು ಅಸ್ತಿತ್ವದಲ್ಲಿದೆ. ಶ್ರೀಮಠವು ಮೊದಲು ಧಾರವಾಡ ಜಿಲ್ಲೆ ಕುಂದಗೋಳತಾಲ್ಲೂಕಿನ ಮುಳ್ಳಳ್ಳಿ ಗ್ರಾಮದಲ್ಲಿದ್ದು ನಂತರ ಬೊಮ್ಮನಹಳ್ಳಿಗೆ ಸ್ಥಳಾಂತರಗೊಂಡಿದೆ.ಕರ್ತೃಗುರುಗಳಾದ ಶ್ರೀ ಗುರುಪಾದೇಶ್ವರ ಮಹಾಸ್ವಾಮಿಗಳು ತಪೋನಿಷ್ಠರಾಗಿದ್ದು, ವೀರಶೈವ ಧರ್ಮದ ಅಭಿವೃದ್ಧಿಗಾಗಿ ಹಾಗೂ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇಮುಡುಪಾಗಿಟ್ಟಿದ್ದವರು. ಹಾಗೆಯೇ ಶ್ರೀಗಳು ಉತ್ತಮ ಪ್ರವಚನಕಾರರಾಗಿದ್ದು, ಅದರಮೂಲಕ ಜನರನ್ನು ಬಹುಬೇಗ ತಲುಪಿ ಧರ್ಮ ಜಾಗೃತಿಯನ್ನುಂಟು ಮಾಡುತ್ತಿದ್ದರು.ಕರ್ತೃಗುರುಗಳ ನಂತರ ಐದು ಜನ ಸ್ವಾಮಿಗಳು ಬಂದಿದ್ದು ಎಲ್ಲಾ ಶ್ರೀಗಳೂತಪೋನಿಷ್ಠರಾಗಿದ್ದು ಕರ್ತೃಗುರುಗಳ ರೀತಿಯಲ್ಲಿಯೇ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸುತ್ತಾ ವೀರಶೈವ ಧರ್ಮದ ಉನ್ನತಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ.ಹಿಂದಿನ ಗುರುಗಳಾದ ಶ್ರೀ ಎರಡನೇ ಚನ್ನವೀರ ಸ್ವಾಮಿಗಳು ಶ್ರೀಮಠಕ್ಕೆ ಪಟ್ಟಾಧಿಕಾರಹೊಂದಿ ಮಠವು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುವಂತೆ ಮಾಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಶಿವಯೋಗೀಶ್ವರ ಸ್ವಾಮಿಗಳು ಆರನೆಯವರಾಗಿದ್ದು,1998 ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಶ್ರೀ ಶಿವಯೋಗೀಶ್ವರ ಸ್ವಾಮಿಗಳು ಅಧಿಕಾರವಹಿಸಿಕೊಂಡ ನಂತರ ಮಠವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಹಾಗೆಯೇಶ್ರೀಗಳು ಸ್ನಾತಕೋತ್ತರ ಪದವೀಧರರಾಗಿದ್ದು ಶ್ರೀಮಠದಲ್ಲಿ ಹಾಗೆಯೇ ಸುತ್ತಮುತ್ತಲಿನಲ್ಲಿವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುತ್ತಿದ್ದಾರೆ.ಶ್ರೀಗಳು ಪ್ರಗತಿಪರರಾಗಿದ್ದು, ಎಲ್ಲಾ ಮತೀಯರನ್ನು ಏಕರೂಪದಲ್ಲಿ ಕಾಣುವದಿಸೆಯಲ್ಲಿ ಮುಸ್ಲಿಮರ ಉರುಸ್ ಸಂದರ್ಭದಲ್ಲಿ ಪಾಲ್ಗೊಂಡು ಹಿಂದು-ಮುಸ್ಲಿಂ ಭಾವೈಕ್ಯತೆಯನ್ನು ಸಾರುತ್ತಿದ್ದಾರೆ. ಹಾಗೆಯೇ ಹಲವಾರು ಸಮಾಜಮುಖಿ ಕೆಲಸಗಳ ಮೂಲಕಜನರಲ್ಲಿ ಅಜ್ಞಾನ ಹೊರದೂಡುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಯೋಗೀಶ್ವರ ಸ್ವಾಮಿಗಳು
Date of Birth :
6-12-1958
Place :
ಹರಳಿಕೊಪ್ಪ, ಸೊರಬ ತಾ||
Pattadikara :
6-12-1998
Photo :
Programs
ಪ್ರತಿದಿನ ಸಂಜೆ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ.
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ, ಶಿವಾನುಭವ ಗೋಷ್ಠಿ.
ನವರಾತ್ರಿಯಂದು ಗ್ರಾಮದೇವತೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶ್ರೀಗಳ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ.
ಬಸವಜಯಂತಿ ಆಚರಣೆ.
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳು.
ಮಾಘ ಮಾಸದಲ್ಲಿ ಶ್ರೀ ಹಾನಗಲ್ಲು ಕುಮಾರಸ್ವಾಮಿಗಳ ಜಯಂತಿ ಆಚರಣೆ
Institutions
ಕಿರಿಯ/ ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ
Photos
Full Address Kannada
ಶ್ರೀ ವಿರಕ್ತಮಠ
ಬೊಮ್ಮನಹಳ್ಳಿ - 581 203
ಹಾನಗಲ್ಲು ತಾ., ಹಾವೇರಿ ಜಿ.