Shree Viraktamatha, Atharga

Shree Viraktamatha, Atharga Claimed

ಶ್ರೀ ವಿರಕ್ತಮಠ, ಅಥರ್ಗ

Average Reviews

Description

ಶ್ರೀ ವಿರಕ್ತಮಠ, ಅಥರ್ಗ

ಕರ್ತೃ – ಪರಮಪೂಜ್ಯ ಶ್ರೀ ಮರಿದೇವ ಸ್ವಾಮಿಗಳು

ಇಂಡಿ ತಾಲ್ಲೂಕಿನ ಅಥರ್ಗ ಗ್ರಾಮದಲ್ಲಿ 20ನೇ ಶತಮಾನದ ಆರಂಭದಲ್ಲಿಪೂಜ್ಯ ಶ್ರೀ ಮರಿದೇವರು ಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದು ಹೇಳˉÁಗುವ ಶ್ರೀವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ.ಕರ್ತೃಗುರುಗಳಾದ ಪೂಜ್ಯ ಶ್ರೀ ಮರಿದೇವರು ಸ್ವಾಮಿಗಳು ತಮ್ಮ ಗುರುಗಳಾದಶ್ರೀ ರೇವಣಸಿದ್ದಪ್ಪ ಶರಣರ ಸೇವೆಯನ್ನು ಮಾಡಿಕೊಂಡಿದ್ದವರು. ಗುರುಗಳ ಸೇವೆಯಿಂದಸಂಸ್ಕಾರವಂತರಾಗಿ ಬೆಳೆದ ಶ್ರೀ ಮರಿದೇವರು ಸ್ವಾಮಿಗಳು ಗುರುಗಳು ಲಿಂಗೈಕ್ಯರಾದ ನಂತರಅಥರ್ಗದಲ್ಲಿ ಶ್ರೀಮಠವನ್ನು ಸ್ಥಾಪಿಸಿ ಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳನ್ನು ನಡೆಸಿಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ತರುವಾಯ ಶ್ರೀಮಠದ ಅಧಿಕಾರ ವಹಿಸಿಕೊಂಡ ಹಿಂದಿನ ಶ್ರೀಗಳಾದ ಶ್ರೀಮ.ನಿ.ಪ್ರ. ಮಲ್ಲಯ್ಯ ಸ್ವಾಮಿಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸಿದ್ದಾರೆ.ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಗ್ರಾಮದ ಕಾರ್ಯಕ್ರಮಗಳಲ್ಲೂ ಭಾಗವಹಿಸಿಭಕ್ತರ ಪ್ರೀತಿಗೆ ಪಾತ್ರರಾಗಿದ್ದ ಶ್ರೀಗಳು 1977ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮುರುಘೇಂದ್ರ ಸ್ವಾಮಿಗಳು ಅಥರ್ಗ ಗ್ರಾಮದವರೇ ಆಗಿದ್ದು, ಸೋˉÁಪುರ, ಮುಧೋಳಿನಲ್ಲಿ ವಿದ್ಯಾಭ್ಯಾಸ ಮಾಡಿ ಮಠಕ್ಕೆ ಮರಳಿ 1998ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದಾರೆ. ಶ್ರೀಗಳು ಕ್ರಿಯಾಶೀಲರಾಗಿಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಸಾಮಾಜಿಕವಾಗಿಯೂಕಾರ್ಯೋನ್ಮುಖರಾಗಿದ್ದಾರೆ. ಶ್ರೀಗಳು ಉತ್ತಮ ಪ್ರವಚನಕಾರರಾಗಿದ್ದು ತಮ್ಮ ಪುರಾಣಪ್ರವಚನಗಳ ಮೂಲಕ ಧರ್ಮವನ್ನು ಪ್ರಚುರಪಡಿಸುತ್ತಿದ್ದಾರೆ.ಶ್ರೀಮಠದ ಗದ್ದುಗೆಗಳಿಗೆ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಹಾಗೂ ಭಜನೆ ನಡೆಸˉÁಗುತ್ತದೆ. ಶಿವರಾತ್ರಿಯಲ್ಲಿ ಶ್ರೀಮಠದ ಜಾತ್ರೆಯು ನಡೆಯುತ್ತಿದ್ದು ವಿಜಯದಶಮಿಗೆ ವಿಶೇಷ ಧಾರ್ಮಿಕಆಚರಣೆಗಳನ್ನು ನಡೆಸˉÁಗುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮುರುಘೇಂದ್ರ ಸ್ವಾಮಿಗಳು
Date of Birth :
1-6-1967
Place :
ಅಥರ್ಗ, ಇಂಡಿ ತಾ||
Photo :

Programs

ಶಿವರಾತ್ರಿ ಮತ್ತು ಮಹಾನವಮಿಗೆ ವಿಶೇಷ ಪೂಜೆ.
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ಭಜನೆ.

Photos

Full Address Kannada

ಶ್ರೀ ವಿರಕ್ತಮಠ ಅಥರ್ಗ - 586 112
ಇಂಡಿ ತಾ||, ವಿಜಯಪುರ ಜಿ||

Map

Near by Places

ಮಿಂಚಿನಹಾಳ - ರೈಲುನಿಲ್ದಾಣ - 8 ಕಿ.ಮೀ.
ಇಂಡಿ - 25 ಕಿ.ಮೀ.
ವಿಜಯಪುರ - 25 ಕಿ.ಮೀ.

Statistic

0 Views
0 Rating
0 Favorite
0 Share
error: Content is protected !!