Shree Virakta – Nimbarga

Shree Virakta – Nimbarga Claimed

ಶ್ರೀ ವಿರಕ್ತಮಠ - ನಿಂಬರ್ಗಾ

Average Reviews

Description

ಶ್ರೀ ವಿರಕ್ತಮಠ – ನಿಂಬರ್ಗಾ

ಕರ್ತೃ ಪೂಜ್ಯ ಶ್ರೀ ಶಾಂತವೀರ ಮಹಾಸ್ವಾಮಿಗಳು

ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮವು ತಾಲ್ಲೂಕುಕೇಂದ್ರದಿಂದ 22 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀವಿರಕ್ತಮಠವು ಪುರಾತನ ಪರಂಪರೆಯನ್ನು ಹೊಂದಿದ್ದು ವಿರಕ್ತ ಸಂಪ್ರದಾಯವನ್ನುಪಾಲಿಸಿಕೊಂಡು ಬರುತ್ತಿದೆ. ಶ್ರೀ ವಿರಕ್ತಮಠದ ಸ್ಥಾಪಿತ ಕಾಲಮಾನ ಹಾಗೂ ಪರಂಪರೆಯಕುರಿತಾಗಿ ನಿಖರವಾದ ಮಾಹಿತಿಗಳು ದೊರೆಯುವುದಿಲ್ಲವಾದರೂ ಶ್ರೀಮಠದ ಸ್ಥಾಪಕಗುರುಗಳೆಂದು ಪೂಜ್ಯ ಶ್ರೀ ಶಾಂತವೀರ ಮಹಾಸ್ವಾಮಿಗಳನ್ನು ಗುರುತಿಸಲಾಗಿದೆ.ಕರ್ತೃಗುರುಗಳಾದ ಶ್ರೀ ಶಾಂತವೀರ ಮಹಾಸ್ವಾಮಿಗಳ ಕುರಿತಾಗಲೀ ನಂತರದಪರಂಪರೆಯ ಕುರಿತಾಗಲೀ ಸ್ಪಷ್ಟವಾದ ಮಾಹಿತಿಗಳಿಲ್ಲ. ಶ್ರೀಮಠದ ಕಟ್ಟಡವು ತುಂಬಾಹಳೆಯದಾಗಿದ್ದು ಸುಮಾರು ನೂರಿನ್ನೂರು ವರ್ಷಗಳ ಹಿಂದೆಯೇ ನಿರ್ಮಿಸಿರಬಹುದೆಂದುಅಂದಾಜಿಸಬಹುದು. ಬಹುಶಃ ಶ್ರೀಮಠವು ಆಗಾಗ್ಗೆ ದೀರ್ಘಕಾಲದವರೆಗೆಮಠಾಧಿಪತಿಗಳಿಲ್ಲದೇ ಖಾಲಿ ಉಳಿದಿದ್ದು ಆ ಕಾರಣದಿಂದಾಗಿ ಮಠದ ಪೂರ್ವೇತಿಹಾಸದಬಗ್ಗೆ ಯಾವುದನ್ನೂ ದಾಖಲಿಸಲು ಸಾಧ್ಯವಾಗುವುದಿಲ್ಲ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಂಗನ ಬಸವ ಮಹಾಸ್ವಾಮಿಗಳು ಸುಮಾರು1945ರ ಸುಮಾರಿಗೆ ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿದ್ದು ಕಳೆದ ಏಳು ಶತಮಾನಗಳಿಂದಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನುನಡೆಸುತ್ತಾ ಬಂದಿದ್ದಾರೆ. ವಯೋವೃದ್ಧರಾಗಿರುವ ಶ್ರೀಗಳು ಈಗಲೂ ಮಠದಲ್ಲಿಆಚರಣೆಗಳನ್ನು ನಡೆಸುತ್ತಾ ¨s Àಕ ್ತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾಕ್ರಿಯಾಶೀಲರಾಗಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಂಗನ ಬಸವ ಸ್ವಾಮಿಗಳು
Place :
ನಿಂಬರ್ಗಾ, ಆಳಂದ ತಾ||
Photo :

Programs

ಶ್ರೀ ಬಸವ ಜಯಂತಿ ಆಚರಣೆ
ಪ್ರತಿ ಅಮವಾಸೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ

Photos

Full Address Kannada

ಶ್ರೀ ವಿರಕ್ತಮಠ
ನಿಂಬರ್ಗಾ - 585 213
ಆಳಂದ ತಾ||, ಕಲಬುರಗಿ ಜಿಲ್ಲೆ

Map

Near by Places

ಗಾಣಗಾಪುರ - 11 ಕಿ.ಮೀ.
ಆಳಂದ - 22 ಕಿ.ಮೀ.
ಕಲಬುರಗಿ - 35 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!