ಕರ್ತೃ – ಲಿಂ|| ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು
ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣವು ಇತಿಹಾಸ ಪ್ರಸಿದ್ಧ ಪಟ್ಟಣವಾಗಿದ್ದುಹಾವೇರಿ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿದೆ. ಇಂತಹ ಶಿಗ್ಗಾಂವ ಪಟ್ಟಣದಲ್ಲಿಇತಿಹಾಸ ಪ್ರಸಿದ್ಧ ಶ್ರೀ ಮುರುಘೇಂದ್ರ ಸ್ವಾಮಿಗಳಿಂದ ಸುಮಾರು 400 ವರ್ಷಗಳ ಹಿಂದೆಸ್ಥಾಪಿತಗೊಂಡಿರಬಹುದೆಂದು ಹೇಳಲಾದ ಶ್ರೀ ವಿರಕ್ತ ಮಠವು ಅಸ್ತಿತ್ವದಲ್ಲಿದೆ.ಕರ್ತೃಗುರುಗಳಾದ ಶ್ರೀ ಮುರುಘೇಂದ್ರ ಸ್ವಾಮಿಗಳು ಆಧ್ಯಾತ್ಮಿಕತೆಯ ಪ್ರಭಾವದಿಂದ ವೈರಾಗ್ಯವನ್ನು ತಾಳಿ ಸಂಸಾರವನ್ನು ತೊರೆದು ಹೊರಬಂದು ಶ್ರೀಮಠವನ್ನು ಸ್ಥಾಪಿಸಿದರೆಂದು ಹೇಳಲಾಗುತ್ತದೆ. ಶ್ರೀಗಳು ಸದಾ ಶಿವಪೂಜಾನಿಷ್ಠರಾಗಿ, ತಮ್ಮ ಧಾರ್ಮಿಕತೆಯಪ್ರಭಾವದಿಂದಾಗಿ ಬಹು ಬೇಗನೆ ಮಠವನ್ನು ಪ್ರಸಿದ್ಧಿಗೊಳಿಸಿದರು.ಕರ್ತೃಗುರುಗಳ ನಂತರ ಬಹಳಷ್ಟು ಗುರುಗಳು ಬಂದು ಹೋಗಿದ್ದರೂ ನಂತರದಗುರುಗಳೆಲ್ಲರೂ ಕರ್ತೃಗುರುಗಳ ಹೆಸರಿನಿಂದಲೇ ಅಭಿದಾನ ಪಡೆದುಕೊಂಡಿರುವುದರಿಂದಶ್ರೀಮಠದ ನಿಖರವಾದ ಪರಂಪರೆಯು ಲಭ್ಯವಿಲ್ಲ. ಶ್ರೀಮಠದಲ್ಲಿ ಒಟ್ಟು 11 ಗದ್ದುಗೆಗಳಿದ್ದು,ಇತಿಹಾಸದ ಪ್ರಕಾರ ಈಗಿನ ಶ್ರೀಗಳು 11 ನೆಯವರು ಎಂದು ಹೇಳಲಾಗಿದೆ. ಈ ಕಾರಣಗಳಿಂದ ಶ್ರೀಮಠದ ಪರಂಪರೆಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.ಹಿಂದಿನ ಗುರುಗಳಾದ ಶ್ರೀ ಬಸವಲಿಂಗ ಸ್ವಾಮಿಗಳು ಮಹಾನ್ ಸಾಧಕರಾಗಿದ್ದುಆಯುರ್ವೇದ ಪಂಡಿತರಾಗಿದ್ದರು. ಹಾಗೆಯೇ ತಮ್ಮ ವಾಕ್ಚಾತುರ್ಯದಿಂದ ಹಾಗೂಧಾರ್ಮಿಕ ಆಚರಣೆಗಳಿಂದಾಗಿ ಭಕ್ತರನ್ನು ಮಠಕ್ಕೆ ಸೆಳೆದು ಪ್ರಸಿದ್ಧಿಗೊಂಡಿದ್ದರು. ಶ್ರೀಗಳಮಾರ್ಗದರ್ಶನದಲ್ಲಿ ಅನೇಕ ಸ್ವಾಮಿಗಳು ತಮ್ಮ ಧಾರ್ಮಿಕ ಪ್ರಭೆಯನ್ನು ಹೆಚ್ಚಿಸಿಕೊಂಡಿದ್ದರುಎಂದರೆ ತಪ್ಪಾಗದು. ಇವರ ನಂತರ ಕೆಲಕಾಲ ಮಠ ಖಾಲಿ ಉಳಿಯಿತು.ಈಗಿನ ಶ್ರೀಗಳಾದ ಶ್ರೀ ಸಂಗನಬಸವ ಸ್ವಾಮಿಗಳು 1994ರಲ್ಲಿಯೇ ಮಠಕ್ಕೆನಿಯುಕ್ತಿಗೊಂಡಿದ್ದರೂ ಜೀರ್ಣಗೊಂಡಿದ್ದ ಮಠವನ್ನು ಅಭಿವೃದ್ಧಿಗೊಳಿಸಿದ ನಂತರವಷ್ಟೇಪಟ್ಟಾದಿಕಾರವನ್ನು ವಹಿಸಿಕೊಂಡಿದ್ದಾರೆ. ಹಾಗೆಯೇ ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಮುನ್ನಡೆದಿದ್ದಾರೆ ಮತ್ತು ಮಠದಲ್ಲಿರುವ ಎಲ್ಲಾ ಗದ್ದುಗೆಗಳನ್ನೂ ನವೀಕರಿಸಿ ನಿತ್ಯಪೂಜೆ ಮಾಡಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಸಂಗನ ಬಸವ ಸ್ವಾಮಿಗಳು
Date of Birth :
1-3-1960
Place :
ಶಿಗ್ಗಾಂವ, ಶಿಗ್ಗಾಂವ ತಾ||
Photo :
Programs
ಪ್ರತಿ ತಿಂಗಳ 3ನೇ ತಾರೀಖಿನಂದು ಶಿವಾನುಭವ ಗೋಷ್ಠಿ, ಇಷ್ಟಲಿಂಗ ಪೂಜೆ ತರಬೇತಿ. ಮಾರ್ಚ್ 1ನೇ ತಾರೀಖಿನಿಂದ 11ನೇ ತಾರೀಖಿನವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು.
ಪ್ರತಿ ಗುರುವಾರ, ಭಾನುವಾರ ಉಚಿತ ಆಯುರ್ವೇದ ಔಷಧಗಳನ್ನು ವಿತರಿಸಲಾಗುವುದು.
Photos
Full Address Kannada
ಶ್ರೀ ವಿರಕ್ತ ಮಠ
ಶಿಗ್ಗಾಂವ - 581 202
ಶಿಗ್ಗಾಂವ ತಾ., ಹಾವೇರಿ ಜಿ.