ಕಲಬುರಗಿ ನಗರದಿಂದ 30 ಕಿ.ಮಿ.ದೂರದಲ್ಲಿರುವಮುತ್ತ್ಯಾನ ಬಬಲಾದ ಗ್ರಾಮದ ಮುಂಭಾಗದಲ್ಲಿ ಅಸ್ತಿತ್ವದಲ್ಲಿರುವಶ್ರೀ ವಿರಕ ್ತಮಠವು ತನ್ನ ಧಾರ್ಮಿಕ, ಸಾಮಾಜಿಕಕಾರ್ಯಚಟುವಟಿಕೆಗಳ ಮೂಲಕ ಹಾಗೂ ಹಿಂದಿನ ಶ್ರೀಮ.ನಿ.ಪ್ರ. ಚನ್ನವೀರ ಶಿವಯೋಗಿಗಳ ಅವಿರತ ಪರಿಶ್ರಮದಿಂದಇಂದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀಮಠದ ಸ್ಥಾಪಕ ಗುರುಗಳೆಂದು ಪೂಜ್ಯ ಶ್ರೀ ಗುರುಪಾದಲಿಂಗೇಶ್ವರರನ್ನು ಗುರುತಿಸಲಾಗಿದ್ದು ಸುಮಾರು 100 ವರ್ಷಗಳಹಿಂದೆ ಶ್ರೀಮಠವು ಮುತ್ತ್ಯಾನ ಬಬಲಾದಕ್ಕೆ ಸ್ಥಳಾಂತರಗೊಂಡಿದೆ.ಮೂಲ ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದ ಶ್ರೀವಿರಕ್ತಮಠವು ಅಲ್ಲಿ 8 ತಲೆಮಾರುಗಳ ತನಕ ಧಾರ್ಮಿಕ ಆಚರಣೆಗಳನ್ನು ನಡೆಸಿ ಈಗ್ಗೆನೂರು ವರ್ಷಗಳ ಹಿಂದೆ ಮುತ್ತ್ಯಾನ ಬಬಲಾದಕ್ಕೆ ಸ್ಥಳಾಂತರವಾಗಿದೆ. ಈ ಕಾರಣದಿಂದಾಗಿಶ್ರೀಮಠದ ಪೂರ್ಣ ಪರಂಪರೆಯ ಬಗ್ಗೆ ನಿಖರವಾಗಿ ದಾಖಲಿಸಲು ಸಾಧ್ಯವಾಗುವುದಿಲ್ಲ.ಪರಂಪರೆಯಲ್ಲಿ ಕರ್ತೃಗುರುಗಳ ನಂತರ ಶ್ರೀ ಶಾಂತಲಿಂಗ ಸ್ವಾಮಿಗಳು ಹಾಗೂ ಹಿಂದಿನಗುರುಗಳಾದ ಶ್ರೀ ಚನ್ನವೀರ ಶಿವಯೋಗಗಳ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ ್ರ. ಚನ್ನವೀರ ಶಿವಯೋಗಿಗಳುಮಹಾತಪಸ್ವಿಗಳು, ಧಾರ್ಮಿಕ ಚಿಂತಕರೂ ಆಗಿದ್ದರು. ಶ್ರೀಗಳ ಕಾಲದಲ್ಲಿ ಶ್ರೀಮಠವುಪ್ರಖ್ಯಾತಿಯನ್ನು ಪಡೆದು ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಶ್ರೀಮಠಕ್ಕೆಹರಿದುಬರತೊಡಗಿದರು. ಅಲ್ಲದೇ ಶ್ರೀಮಠವು ಆರ್ಥಿಕವಾಗಿ ಸದೃಢತೆ ಪಡೆದುಸರ್ವಾಂಗೀಣ ಅಭಿವೃದ್ಧಿ ಕಂಡಿತು. ಶ್ರೀ ಚನ್ನವೀರ ಶಿವಯೋಗಿಗಳ ಕಾರಣದಿಂದಾಗಿಯೇಬಬಲಾದ ಗ್ರಾಮವು ಮುತ್ತ್ಯಾನ ಬಬಲಾದ ಎಂಬ ಹೆಸರನ್ನು ಪಡೆಯಿತು. ಇಂತಹಮಹಾಸಾಧಕ ಶ್ರೀಗಳು 1985ರ ಡಿಸೆಂಬರ್ 15 ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ ಗುರುಪಾದಲಿಂಗ ಮಹಾಸ್ವಾಮಿಗಳು 1991ರಏಪ್ರಿಲ್ 05ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡು ತಮ್ಮ ಪ್ರಗತಿಪರಚಿಂತನೆಗಳಿಂದ ಶ್ರೀಮಠವನ್ನು ಹಾಗೂ ವೀರಶೈವ ಧರ್ಮವನ್ನು ಬೆಳೆಸುತ್ತಿದ್ದಾರೆ.ಪರಂಪರೆಯ ಗದ್ದುಗೆಗಳ ಪೈಕಿ 8 ಗದ್ದುಗೆಗಳು ಮೂಲಮಠ ಯಳಸಂಕದಲ್ಲೂ, ಮೂರುಗದ್ದುಗೆಗಳು, ಶ್ರೀಮಠದಲ್ಲೂ ಸ್ಥಾಪಿತಗೊಂಡಿದ್ದು ನಿತ್ಯಪೂಜೆಗೆ ಒಳಪಟ್ಟಿವೆ. ಶ್ರೀಮಠದಲ್ಲಿ ಶ್ರೀಸಿದ್ದಬಸವೇಶ್ವರ ಜಾತ್ರಾ ಮಹೋತ್ಸವವು ಮಕರ ಸಂಕ್ರಾಂತಿಗೆ ನಡೆಯುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ಗುರುಪಾದಲಿಂಗ ಮಹಾಸ್ವಾಮಿಗಳು
Date of Birth :
01-07-1969
Place :
ಕುರುಕೋಟ, ಕಲಬುರಗಿ ತಾ||
Pattadikara :
05-04-1991
Photo :
Programs
ಪ್ರತಿ ಅಮಾವಾಸೆಗೆ ಶ್ರೀಗಳ ದರ್ಶನ ಮತ್ತು ವಿಶೇಷ ಪೂಜೆ
ಮಕರ ಸಂಕ್ರಾಂತಿಯಂದು ಶ್ರೀ ಸಿದ್ಧಬಸವೇಶ್ವರ ಜಾತ್ರಾ ಮಹೋತ್ಸವ
ಚೈತ್ರ ಮಾಸದಲ್ಲಿ ಶ್ರೀ ದೇವಿ ಪುರಾಣ ಪ್ರವಚನ
ಬಸವ ಜಯಂತಿಗೆ ತೊಟ್ಟಿಲು ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂ ಕೊನೆಯ ಸೋಮವಾರ ಶ್ರೀಗಳ ಪಲ್ಲಕ್ಕಿ ಉತ್ಸವ ನವರಾತ್ರಿಗೆ ಶ್ರೀ ದೇವಿ ಪುರಾಣ ಪಾರಾಯಣ
ದುರ್ಗಾಷ್ಟಮಿಯಂದು 108 ಕನ್ಯೆ ಮುತ್ತ್ಯೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ಜರುಗುವುದು
ಮಾರ್ಗಶಿರ ಮಾಸದಲ್ಲಿ ಶ್ರೀ ಮ.ನಿ.ಪ್ರ.ಸ್ವ.ಚನ್ನವೀರ ಶಿವಯೋಗಿಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ವಿರಕ್ತಮಠ
ಮುತ್ತ್ಯಾನ ಬಬಲಾದ - 585 316
ಕಲಬುರಗಿ ತಾ||, ಜಿಲ್ಲೆ