Shree Virakta Matha, Chandapur

Shree Virakta Matha, Chandapur Claimed

ಶ್ರೀ ವಿರಕ್ತ ಮಠ, ಚಂದಾಪುರ

Average Reviews

Description

ಶ್ರೀ ವಿರಕ್ತ ಮಠ, ಚಂದಾಪುರ

ಕರ್ತೃ ಪೂಜ್ಯ ಶ್ರೀ ಗದುಗೇಶ್ವರ ಮಹಾ ಶಿವಯೋಗಿಗಳು

ಇತಿಹಾಸ ಪ್ರಸಿದ್ಧ ಶಿಗ್ಗಾಂವ ತಾಲ್ಲೂಕಿನ ಬಂಕಾಪುರ ಪಟ್ಟಣದಿಂದ ಕೇವಲ 10ಕಿ.ಮೀ. ದೂರದಲ್ಲಿರುವ ಚಂದಾಪುರ ಗ್ರಾಮದ ಮಧ್ಯಭಾಗದಲ್ಲಿ ಪರಮಪೂಜ್ಯ ಶ್ರೀಗದುಗೇಶ್ವರ ಮಹಾ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ವಿರಕ್ತಮಠವು, ಈಭಾಗದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಸಾಮಾಜಿಕವಾಗಿಯೂ, ಭಕ್ತರ ಸಹಕಾರದೊಂದಿಗೆ ಮುಂದುವರೆದುಕೊಂಡು ಬರುತ್ತಿದೆ.ಶ್ರೀ ಗದುಗೇಶ್ವರ ಮಹಾ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವಪೋರ್ವೇತಿಹಾಸ ಲಭ್ಯವಿಲ್ಲದಾಗಿದೆ. ಈಗಿನ ಶ್ರೀಗಳ ಹಿಂದೆ ಯಾರು ಮಠಾಧಿಪತಿಗಳುಬಂದು ಹೋಗಿದ್ದಾರೆ ಎಂಬುದಕ್ಕೆ ಯಾವುದೇ ಮಾಹಿತಿಗಳು ದೊರಕುತ್ತಿಲ್ಲ. ಈಗಿನಶ್ರೀಗಳಾದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಇದೇ ಗ್ರಾಮದವರಾಗಿದ್ದು ಮಠದಅದಿಕಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಅಧಿಕಾರ ವಹಿಸಿಕೊಂಡ ನಂತರ ಮಠದಲ್ಲಿಬಹಳಷ್ಟು ಸುಧಾರಣೆಯಾಗಿದೆ. ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆದುಕೊಂಡುಬರುತ್ತಿದೆ. ಹಾಗೆಯೇ ಶ್ರೀಗಳು ಮಠವನ್ನು ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿದ್ದಾರೆ. ತಮ್ಮಧಾರ್ಮಿಕ ಆಚರಣೆಗಳು ಹಾಗೂ ಪುರಾಣ ಪ್ರವಚನಗಳ ಮೂಲಕ ಮಠಕ್ಕೆ ಭಕ್ತರನ್ನುಸೆಳೆದು ಅವರ ಸಹಕಾರದೊಂದಿಗೆ ಮುನ್ನಡೆಯುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ ಕಾರ್ಯಕ್ರಮವನ್ನುಆಯೋಜಿಸಲಾಗುತ್ತಿದೆ. ಯುಗಾದಿಗೆ ಶ್ರೀಮಠದ ಮಹಾರಥೋತ್ಸವ ಜರುಗುತ್ತದೆ ಹಾಗೂಶ್ರಾವಣ ಮಾಸ ಮತ್ತು ದಸರಾದಲ್ಲಿ ನಿತ್ಯ ಪುರಾಣ ಪ್ರವಚನಗಳ ಆಯೋಜನೆಯಾಗುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಚ್ಚಿದಾನಂದ ಮಹಾಸ್ವಾಮಿಗಳು
Date of Birth :
24-8-1948
Place :
ಚಂದಾಪುರ, ಶಿಗ್ಗಾಂವ ತಾ||
Photo :

Programs

ಪ್ರತಿ ಅಮವಾಸ್ಯೆಗೆ "ಶಿವಾನುಭವ ಗೋಷ್ಠಿ" ಯುಗಾದಿ ಪಾಡ್ಯ ಮಹಾ ರಥೋತ್ಸವ, ವಿವಿಧ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ.
ದಸರಾದಲ್ಲಿ ಶ್ರೀ ದೇವಿ ಪ್ರವಚನ.

Photos

Videos

Full Address Kannada

ಶ್ರೀ ವಿರಕ್ತ ಮಠ
ಚಂದಾಪುರ - 581 202
ಶಿಗ್ಗಾಂವ ತಾ||, ಹಾವೇರಿ ಜಿ||

Map

Near by Places

ಬಂಕಾಪುರ - 10 ಕಿ.ಮೀ.
ಶಿಗ್ಗಾಂವ - 20 ಕಿ.ಮೀ.
ಹಾವೇರಿ - 38 ಕಿ.ಮೀ.

Statistic

135 Views
0 Rating
0 Favorite
0 Share
error: Content is protected !!