ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕು ಕೇಂದ್ರದಿಂದ 4 ಕಿ.ಮೀ. ದೂರದಲ್ಲಿರುವಮುಡಿಗುಂಡ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ವಿರಕ್ತ ಮಠವು ತನ್ನ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯ ಚುಟುವಟಿಕೆಗಳ ಮುಖೇನ ಪ್ರಚಲಿತದಲ್ಲಿದೆ. ಹರವೆ ಶ್ರೀ ವಿರಕ್ತಮಠದಶ್ರೀ.ಮ.ನಿ.ಪ್ರ. ಶಿವರುದ್ರ ಮಹಾಸ್ವಾಮಿಗಳು 1929ರ ಜುಲೈ 26ರಂದು ಶ್ರೀಮಠವನ್ನು ಸ್ಥಾಪಿಸಿದ್ದುಕಡಿಮೆ ಅವದಿಯಲ್ಲಿಯೇ ಶ್ರೀಮಠವು ಪ್ರಮುಖ ಮಠವಾಗಿ ರೂಪುಗೊಂಡಿದೆ.ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರರು ಅನುಷ್ಠಾನಗೊಂಡಿದ್ದರೆಂದುಹೇಳಲಾಗುವ ಶ್ರೀಮಠದ ಸ್ಥಳವು ಜಾಗೃತ ಸ್ಥಳವಾಗಿದ್ದು ಶ್ರೀ ವಿರಕ್ತಮಠವು ಸ್ಥಾಪಿತಗೊಂಡಿದೆ.ಇಂತಹ ಜಾಗೃತ ಸ್ಥಳದಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳು ನಡೆಯಬೇಕೆಂಬಹಂಬಲದಿಂದ ಇಲ್ಲಿಗೆ ಆಗಮಿಸಿದ ಹರವೆ ಶ್ರೀ ವಿರಕ ್ತ ಮಠದ ಶ್ರೀ.ಮ.ನಿ.ಪ್ರ.ಶಿವರುದ್ರಮಹಾಸ್ವಾಮಿಗಳು ಸುತ್ತಲಿನ ಜಮೀನನ್ನು ಖರೀದಿಸಿ ಶ್ರೀಮಠವನ್ನು ಕಟ್ಟಿ ಬೆಳೆಸಿದರು.1929ರಿಂದ ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನುಮುನ್ನಡೆಸಿಕೊಂಡು ಬಂದ ಕರ್ತೃಗುರುಗಳು ಶ್ರೀಮಠವನ್ನು ಪ್ರಮುಖ ಮಠವನ್ನಾಗಿ ರೂಪಿಸಿ 1962ರಏಪ್ರಿಲ್ 22ರಲ್ಲಿ ಲಿಂಗೈಕ್ಯರಾದರು. ಕರ್ತೃಗಳು ಐಕ್ಯಗೊಂಡ ನಂತರ ಶ್ರೀಮಠವು 1984ರವರೆಗೆ ಖಾಲಿಉಳಿದಿದ್ದು ಈ ಸಮಯದಲ್ಲಿ ಪ್ರಸ್ತುತ ಈಗಿನ ಶ್ರೀಗಳ ತಂದೆಯವರೇ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ನಡೆಸಿದ್ದಾರೆಂದು ತಿಳಿದುಬರುತ್ತದೆ.1984ರ ಏಪ್ರಿಲ್ 11ರಂದು ಶ್ರೀಮಠದ ಪಟ್ಟಾಧಿಕಾರಕ್ಕೆ ಬಂದ ಶ್ರೀ ಮ.ನಿ.ಪ್ರ. ಶ್ರೀಕಂಠಸ್ವಾಮಿಗಳು ನಂತರ ಧಾರವಾಡ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಪೂರೈಸಿದರು. ತದನಂತರ ಶ್ರೀಮಠಕ್ಕೆ ಮರಳಿದ ಶ್ರೀಗಳು ಅಧ್ಯಯನಶೀಲರಾಗಿ ಎಲ್ಲಾ ಧರ್ಮಗಳಧರ್ಮಗ್ರಂಥಗಳನ್ನು ಅಭ್ಯಸಿಸಿ ಶರಣ ತತ್ತ್ವ ಪ್ರಚಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಶ್ರೀಮಠದ ಕಟ್ಟಡವನ್ನುವಿಸ್ತರಿಸಿರುವ ಶ್ರೀಗಳು, ಕರ್ತೃಗುರುಗಳ ಗದ್ದುಗೆಗೆ ಮಂಟಪ ಕಟ್ಟಿಸಿ ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದ್ದಾg